ಭಾರತೀಯ ಚಿತ್ರರಂಗದ ಖ್ಯಾತ ನಟ ಸೂಪರ್‌ಸ್ಟಾರ್ ರಜನಿಕಾಂತ್ 75ನೇ ವಯಸ್ಸಿನಲ್ಲೂ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅವರ ‘ತಲೈವರ್ 173’ ಸಿನುಮಾ ಬಗ್ಗೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಈಗ ಸಿನಿಮಾದ ಅಧಿಕೃತ ಶೀರ್ಷಿಕೆ ರಿವೀಲ್ ಆಗಿದೆ. ಈ ಚಿತ್ರಕ್ಕೆ ‘ಧರ್ಮನ್’ ಎಂದು ಹೆಸರಿಡಲಾಗಿದ್ದು, ಪೋಸ್ಟರ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೆಂಡ್ ಸೃಷ್ಟಿಸಿದೆ.
ಬಿಡುಗಡೆ ಆಗಿರುವ ಮೊದಲ ಪೋಸ್ಟರ್‌ನಲ್ಲಿ ರಜನಿಕಾಂತ್ ಅವರು ನೀಲಿ ಬಣ್ಣದ ಡಾಕ್ಟರ್ ಸೂಟ್ ಧರಿಸಿ, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿ, ಕೈಯಲ್ಲಿ ರಕ್ತಸಿಕ್ತವಾಗಿರುವ ಸರ್ಜಿಕಲ್ ಕತ್ತಿ ಹಿಡಿದು ವಿಭಿನ್ನ ಹಾಗೂ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಿನ್ನೆಲೆಯಲ್ಲಿ ಆಪರೇಷನ್ ಥಿಯೇಟರ್‌ನ ಲೈಟ್‌ಗಳಿವೆ. ಒಡೆದು ಹೋದ ಗಾಜಿನ ಕಿಟಕಿಗಳು ಇವೆ. ಇದು ಆ್ಯಕ್ಷನ್ ಎಂಟರ್‌ಟೈನರ್ ಆಗಿರಲಿದೆ ಎಂಬುದಕ್ಕೆ ಪೋಸ್ಟರ್ ಸಾಕ್ಷಿ ನುಡಿಯುತ್ತಿದೆ.
ಇದನ್ನೂ ಓದಿ: ರಜನಿಕಾಂತ್ ಸ್ಟೈಲ್ ಕಾಪಿ ಮಾಡಲು ಹೋಗಿ ಹೀನಾಯ ಸೋಲು ಕಂಡಿದ್ದ ಆರ್. ಮಾಧವನ್
ಈ ಬಿಗ್ ಬಜೆಟ್ ಸಿನಿಮಾವನ್ನು ಕಮಲ್ ಹಾಸನ್ ಅವರ ‘ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್’ (RKFI) ಸಂಸ್ಥೆ ಅರ್ಪಿಸುತ್ತಿದ್ದು, ಕಮಲ್ ಹಾಸನ್ ಮತ್ತು ಆರ್. ಮಹೇಂದ್ರನ್ ಜಂಟಿಯಾಗಿ ಬಂಡವಾಳ ಹೂಡುತ್ತಿದ್ದಾರೆ. ಚಿತ್ರಕ್ಕೆ ಅಶ್ವತ್ ಮಾರಿಮುತ್ತು ನಿರ್ದೇಶನವಿದ್ದು, ರಾಕ್‌ಸ್ಟಾರ್ ಅನಿರುದ್ಧ್ ರವಿಚಂದರ್ ಅವರ ಸಂಗೀತ ಹಾಗೂ ಅನ್ಬರಿವ್ ಅವರ ಸಾಹಸ ನಿರ್ದೇಶನವಿದೆ.
தர்மமே வெல்லும்!#Dharman #Thalaivar173 #SuperstarRajinikanth @rajinikanth #Mahendran @Dir_Ashwath @anirudhofficial @anbariv @RKFI @turmericmediaTM @magizhmandram pic.twitter.com/9ghF9XgboI
— Kamal Haasan (@ikamalhaasan) June 24, 2026
ರಜನಿಕಾಂತ್ ಅವರು ‘ಜೈಲರ್ 2’ ಸಿನಿಮಾದ ಕೆಲಸಗಳನ್ನು ಪೂರ್ಣಗೊಳಿಸಿದ್ದಾರೆ ಎನ್ನಲಾಗಿದೆ. ಈ ಚಿತ್ರ ಈ ವರ್ಷವೇ ತೆರೆಗೆ ಬರಲಿದೆ. ಇದಾದ ಬಳಿಕ ಅವರು ‘ಧರ್ಮನ್’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ರಜನಿಕಾಂತ್ ಅವರು ಶೀಘ್ರವೇ ಚಿತ್ರರಂಗಕ್ಕೆ ಗುಡ್ಬೈ ಹೇಳಲಿದ್ದಾರೆ ಎಂಬ ವದಂತಿಯೂ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
