ಒಂದು ಕಾಲದಲ್ಲಿ ನಟ ರವಿಚಂದ್ರನ್ (Ravichandran) ಅವರು ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ್ದರು. ಸಾವಿರಾರು ಜನರಿಗೆ ಅವರು ಕೆಲಸ ನೀಡಿದ್ದರು. ಸಿನಿಮಾಗಾಗಿ ಲೆಕ್ಕವೇ ಇಲ್ಲದಷ್ಟು ಹಣ ಖರ್ಚು ಮಾಡುತ್ತಿದ್ದ ನಟ, ನಿರ್ದೇಶಕ, ನಿರ್ಮಾಪಕ ಅವರು. ಆದರೆ ಇತ್ತೀಚಿನ ವರ್ಷಗಳಲ್ಲಿ ರವಿಚಂದ್ರನ್ ಅವರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆಯಾ ಎಂಬ ಪ್ರಶ್ನೆ ಹಲವರಿಗೆ ಇದೆ. ಅಲ್ಲದೇ, ಅವರು ಮನೆ ಮಾರಿಕೊಂಡಿದ್ದಾರೆ ಎಂಬ ಮಾತು ಕೂಡ ಕೇಳಿಬಂದಿದೆ. ಅವರನ್ನು ಹತ್ತಿರದಿಂದ ಕಂಡ ಅಪ್ಪಟ ಅಭಿಮಾನಿ ದಿಲ್ ಸೇ ದಿಲೀಪ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ಅದೆಲ್ಲ ಸುಳ್ಳು. ವದಂತಿ ಇದ್ದೇ ಇರುತ್ತದೆ. ರವಿಚಂದ್ರನ್ ಅವರು ಮನೆ ಮಾರಿಲ್ಲ. ಅವರು ಏನನ್ನೂ ಕಳೆದುಕೊಂಡಿಲ್ಲ. ಯೂಟ್ಯೂಬ್, ಫೇಸ್ಬುಕ್ನಲ್ಲಿ ಇರುವವರು ಮಾರಿದ್ದಾರೆ. ರವಿಚಂದ್ರನ್ ಸರ್ ಹೆಸರಲ್ಲಿ ಇರುವುದನ್ನು ಇವರೆಲ್ಲಾ ಸೈನ್ ಹಾಕಿ ಮಾಡಿದ್ದಾರೆ’ ಎಂದು ದಿಲ್ ಸೇ ದಿಲೀಪ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
