ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ಇದೇ ವರ್ಷ ಫೆಬ್ರವರಿಯಲ್ಲಿ ಬಲು ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಇಬ್ಬರೂ ಹಲವು ವರ್ಷಗಳಿಂದಲ ಪರಸ್ಪರ ಪ್ರೀತಿಯಲ್ಲಿದ್ದರು, ಕೊನೆಗೆ ಈ ವರ್ಷ ಫೆಬ್ರವರಿಯಲ್ಲಿ ರಾಜಸ್ಥಾನದಲ್ಲಿ ಬಲು ಅದ್ಧೂರಿಯಾಗಿ ಮದುವೆ ಆಗಿದ್ದಾರೆ. ಮದುವೆಯ ಬಳಿಕ ಸಿನಿಮಾಗಳಲ್ಲಿ ನಟಿಸುವುದನ್ನು ಈ ಜೋಡಿ ಮುಂದುವರೆಸಿದ್ದು, ಇದೀಗ ಇಬ್ಬರೂ ಒಟ್ಟಿಗೆ ‘ರಣಬಾಲಿ’ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇಬ್ಬರ ಮದುವೆಗೆ ಮುಂಚೆಯೇ ಈ ಸಿನಿಮಾ ಪ್ರಾರಂಭವಾಗಿತ್ತು. ಇದೇ ಸೆಪ್ಟೆಂಬರ್ನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಆದರೆ ಸಿನಿಮಾದ ಚಿತ್ರೀಕರಣ ತಡವಾಗುತ್ತಿದೆ.
ಸೆಪ್ಟೆಂಬರ್ 11ಕ್ಕೆ ‘ರಣಬಾಲಿ’ ಸಿನಿಮಾ ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಆದರೆ ಇದೀಗ ಸಿನಿಮಾ ನಿರೀಕ್ಷೆಗಿಂತಲೂ ತುಸು ತಡವಾಗಿ ಸಿನಿಮಾ ಬಿಡುಗಡೆ ಆಗಲಿದೆ. ಸೆಪ್ಟೆಂಬರ್ ಬದಲಿಗೆ ಅಕ್ಟೋಬರ್ ಕೊನೆಯ ವಾರ ಅಥವಾ ನವೆಂಬರ್ ಮೊದಲ ವಾರದಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ಆದರೆ ಸಿನಿಮಾದ ಬಿಡುಗಡೆ ತಡವಾಗುವುದಕ್ಕೆ ರಶ್ಮಿಕಾ ಮಂದಣ್ಣ ಕಾರಣ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.
ರಶ್ಮಿಕಾ ಮಂದಣ್ಣ ಒಟ್ಟಿಗೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದು ಅವರ ಡೇಟ್ಸ್ ಸಮಸ್ಯೆಯಿಂದಾಗಿ ಚಿತ್ರೀಕರಣ ತುಸು ತಡವಾಗಿದೆ ಅದರ ಜೊತೆಗೆ ಈಗ ಅವರು ಈಗ ಸೊಂಟಕ್ಕೆ ಪೆಟ್ಟು ಮಾಡಿಕೊಂಡಿದ್ದು, ಅದೂ ಸಹ ಚಿತ್ರೀಕರಣದ ಹಿನ್ನಡೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ. ಸಿನಿಮಾಕ್ಕಾಗಿ ಡ್ಯಾನ್ಸ್ ಒಂದರ ತರಬೇತಿ ಪಡೆಯುತ್ತಿದ್ದಾಗ ರಶ್ಮಿಕಾರಿಗೆ ಸೊಂಟದ ಇಂಜುರಿ ಆಗಿದೆಯಂತೆ. ಸುಮಾರು ಎರಡು ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಹಾಗಾಗಿ ಅನಿವಾರ್ಯವಾಗಿ ಎರಡು ತಿಂಗಳು ಅವರು ಚಿತ್ರೀಕರಣದಿಂದ ದೂರ ಉಳಿಯಬೇಕಿದೆ.
ಇದನ್ನೂ ಓದಿ:ಆರೋಗ್ಯದ ಬಗ್ಗೆ ಹೊಸ ಅಪ್ಡೇಟ್ ನೀಡಿದ ನಟಿ ರಶ್ಮಿಕಾ ಮಂದಣ್ಣ
ಇದೇ ಕಾರಣಕ್ಕೆ ‘ರಣಬಾಲಿ’ ಸಿನಿಮಾದ ಬಿಡುಗಡೆ ಮುಂದೂಡಲಾಗುತ್ತಿದೆ ಎನ್ನಲಾಗುತ್ತಿದೆ. ರಶ್ಮಿಕಾರ ಗಾಯದಿಂದ ‘ರಣಬಾಲಿ’ ಮಾತ್ರವೇ ಅಲ್ಲದೆ ಅವರ ನಟನೆಯ ‘ಮೈಸಾ’ ಸಿನಿಮಾಕ್ಕೂ ದೊಡ್ಡ ಹೊಡೆತ ಬಿದ್ದಿದೆ. ಸಿನಿಮಾಕ್ಕಾಗಿ ಸೆಟ್ಗಳನ್ನು ನಿರ್ಮಿಸಿ, ಇತರೆ ಕಲಾವಿದರ ಡೇಟ್ಸ್ಗಳನ್ನೆಲ್ಲ ಫೈನಲ್ ಮಾಡಲಾಗಿತ್ತು. ಆದರೆ ಈಗ ರಶ್ಮಿಕಾ ಗಾಯಗೊಂಡಿರುವ ಕಾರಣ ಚಿತ್ರೀಕರಣವನ್ನು ನಿಲ್ಲಿಸಲಾಗಿದೆ.
ರಶ್ಮಿಕಾ ಮಂದಣ್ಣ ಪ್ರಸ್ತುತ ‘ರಣಬಾಲಿ’, ‘ಮೈಸಾ’, ಅಲ್ಲು ಅರ್ಜುನ್ ನಟನೆಯ ‘ರಾಕಾ’, ತಮಿಳಿನಲ್ಲಿ ಎರಡು ಹೊಸ ಸಿನಿಮಾ ಹಾಗೂ ಬಾಲಿವುಡ್ನಲ್ಲಿ ಒಂದು ಸಿನಿಮಾನಲ್ಲಿ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
