
ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಕೈಬಿಟ್ಟರು. ಇದರಲ್ಲಿ ಸೀಕ್ವೆಲ್ ಕೂಡ ಇತ್ತು ಅನ್ನೋದು ಅಚ್ಚರಿಯ ಸಂಗತಿ. ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಟಿಸಿದ್ದ ದೀಪಿಕಾ, ಸೀಕ್ವೆಲ್ ಮಾಡದೆ ಸಿನಿಮಾದಿಂದ ಹೊರ ನಡೆದರು. ಈಗ ದೀಪಿಕಾ ಪಡುಕೋಣೆ ಅವರು ‘ರಾಕಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ದೀಪಿಕಾ ಪಡುಕೋಣೆ ಪಡೆದುಕೊಳ್ಳುತ್ತಿರುವ ಸಂಭಾವನೆ ಕುರಿತು ಚರ್ಚೆ ಆಗುತ್ತಿದೆ.
ದೀಪಿಕಾ ಪಡುಕೋಣೆ ಅವರು ಸದಾ ಸಮಾನತೆಯ ಬಗ್ಗೆ ಮಾತನಾಡುತ್ತಾರೆ. ಹೀರೋಗೆ ಸಿಕ್ಕಷ್ಟೇ ಸಂಭಾವನೆ ತಮಗೂ ಸಿಗಬೇಕು ಎಂದು ಅವರು ಬಯಸುತ್ತಾರೆ. ಇದನ್ನು ಅನೇಕ ಕಡೆಗಳಲ್ಲಿ ವಾದಿಸಿದ್ದಾರೆ ಕೂಡ. ಇನ್ನು, 8 ಗಂಟೆ ಮಾತ್ರ ಸಿನಿಮಾದಲ್ಲಿ ನಟಿಸೋದಾಗಿ ಹೇಳಿದ್ದಾರೆ. ಈ ಎಲ್ಲಾ ಕಾರಣದಿಂದ ದೀಪಿಕಾ ಅವರನ್ನು ಅನೇಕ ಸಿನಿಮಾಗಳಿಗೆ ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ. ಆದಾಗ್ಯೂ ಅವರು ‘ರಾಕಾ’ ಚಿತ್ರಕ್ಕೆ ನಾಯಕಿ ಆಗಿದ್ದಾರೆ.
ಅಲ್ಲು ಅರ್ಜುನ್ ನಟನೆಯ, ಅಟ್ಲಿ ನಿರ್ದೇಶನದ ‘ರಾಕಾ’ ಸಿನಿಮಾಗಾಗಿ ಅಲ್ಲು ಅರ್ಜುನ್ ಅವರು ಬರೋಬ್ಬರಿ 175 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಇದರ ಜೊತೆಗೆ ಅವರಿಗೆ ಸಿನಿಮಾದ ಲಾಭದಲ್ಲೂ ಪಾಲಿದೆ ಎನ್ನಲಾಗುತ್ತಿದೆ. ಆದರೆ, ದೀಪಿಕಾಗೆ ಅಲ್ಲು ಅರ್ಜುನ್ಗೆ ಸರಿಯಾಗಿ ಸಂಭಾವನೆ ನೀಡಿಲ್ಲ. ಅವರಿಗೆ 25 ಕೋಟಿ ರೂಪಾಯಿ ಮಾತ್ರ ನೀಡಲಾಗಿದೆ.
#Raaka , 800 Crs Budget Movie, here is the break up
As per the source from the production house, here is the budget breakup;#AlluArjun has requested Rs 175 crore for portraying not just two, but three characters. Reports suggest that he will take on the roles of a… pic.twitter.com/iQ8wCeYdcg
— Always Bollywood (@AlwaysBollywood) April 10, 2026
ಉಳಿದ ಹೀರೋಯಿನ್ಗಳಿಗೆ ಹೋಲಿಕೆ ಮಾಡಿದರೆ ದೀಪಿಕಾಗೆ ಸಿಕ್ಕ ಸಂಭಾವನೆ ತುಂಬಾನೇ ದೊಡ್ಡದು. ಆದರೆ, ಅಲ್ಲು ಅರ್ಜುನ್ ಜೊತೆ ಹೋಲಿಕೆ ಮಾಡಿದರೆ ಇಬ್ಬರ ಸಂಭಾವನೆಯಲ್ಲಿ ಅಜಗಜಾಂತರ ವ್ಯತ್ಯಾಸ ಇದೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ: ಪತಿಯ ಸಿನಿಮಾ ದೊಡ್ಡ ಸಕಸ್ಸ್ ಕಂಡರೂ ತುಟಿಪಿಟಿಕ್ ಎನ್ನದ ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ ಅವರು ಮಗು ಜನಿಸಿದ ಬಳಿಕ ಸಿನಿಮಾ ಶೂಟಿಂಗ್ ಮಾಡಲು ಸಾಕಷ್ಟು ಕಂಡೀಷನ್ ಹಾಕುತ್ತಿದ್ದಾರೆ. ಈ ಕಂಡೀಷನ್ಗೆ ಒಪ್ಪಿಕೊಳ್ಳಲು ಎಲ್ಲರೂ ರೆಡಿ ಇರೋದಿಲ್ಲ. ದೀಪಿಕಾ ಪಡುಕೋಣೆ ಷರತ್ತುಗಳನ್ನು ಅಟ್ಲಿ ತಂಡ ಒಪ್ಪಿಕೊಂಡಿದೆ. ಅವರ ಪಾತ್ರ ಹೇಗಿದೆ ಎಂಬ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.