ರಾಜಧಾನಿ ಜನರೇ ಶವರ್ಮ ತಿನ್ನುವ ಮುನ್ನ ಎಚ್ಚರ: ಬೆಚ್ಚಿ ಬೀಳಿಸುವಂತಿದೆ ಆಹಾರ ಸುರಕ್ಷತಾ ಇಲಾಖೆ ರಿಪೋರ್ಟ್​​ – Kannada News | Shocking Food Safety Report: Artificial Colors Found in Bengaluru’s Shawarmas; 8 Samples Declared Unfit for Consumption

ಆಹಾರ ಸುರಕ್ಷತಾ ಇಲಾಖೆಯಿಂದ ಆಘಾತಕಾರಿ ಮಾಹಿತಿImage Credit source: Getty Images

ಬೆಂಗಳೂರು, ಜೂನ್​​ 23: ಕಾಟನ್ ಕ್ಯಾಂಡಿ, ಗೋಬಿ ಮಂಚೂರಿಗೆ ಬಳಸುವ ಬಣ್ಣ ಬ್ಯಾನ್ ಮಾಡಿದ್ದ ಫುಡ್ ಡಿಪಾರ್ಟ್ಮೆಂಟ್ ಇತ್ತೀಚಿಗಷ್ಟೆ ಕಬಾಬ್ಗೆ ಬಳಸುವ ಕೃತಕ ಕಲರ್​​ಗೂ ನಿಷೇಧ ಹೇರಿತ್ತು. ಬಳಿಕ ಪಾನಿಪುರಿ ಸೇರಿದ್ದಂತೆ ಇನ್ನು ಕೆಲವು ಆಹಾರ ಪಾದಾರ್ಥಗಳಲ್ಲಿ ಸನ್ಸೆಟ್ ಯೆಲ್ಲೋ, ಕಾರ್ಮೋಸಿನ್ ರಾಸಾಯನಿಕಗಳು ಇರುವುದನ್ನು ಪತ್ತೆ ಹಚ್ಚುವ ಮೂಲಕ ಮಾರಾಟಗಾರರಿಗೆ ಬಿಸಿ ಮುಟ್ಟಿಸಿತ್ತು. ಆ ಬಳಿಕ ಕೆಲ ದಿನಗಳಿಂದ ಸೈಲೆಂಟ್​​ ಆಗಿದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ಆಹಾರ ತಯಾರಿಕೆ ವೇಳೆ ಅಶುಚಿತ್ವ ಆರೋಪ ಮತ್ತೆ ಕೇಳಿಬಂದ ಹಿನ್ನೆಲೆ ತಪಾಸಣೆ ನಡೆಸಿದಾಗ ಮತ್ತೊಂದು ಆಘಾತಕಾರಿ ವಿಷಯ ಬಯಲಾಗಿದೆ. ಶವರ್ಮಗಳಲ್ಲಿಯೂ ಕೃತಕ ಬಣ್ಣಗಳ ಬಳಕೆ ಕಂಡುಬಂದಿದೆ.

ಮುಖ್ಯಾಂಶಗಳು

  • ಅಧಿಕಾರಿಗಳ ಎಚ್ಚರಿಕೆಗೂ ವ್ಯಾಪಾರಿಗಳು ಡೋಂಟ್ ಕೇರ್
  • ಚಪ್ಪರಿಸಿ ತಿನ್ನುವ ಶವರ್ಮದಲ್ಲಿ ಕೃತಕ ಬಣ್ಣ ಬಳಕೆ ಪತ್ತೆ
  • ಆಹಾರ ಸುರಕ್ಷತಾ ಇಲಾಖೆ ಪರೀಕ್ಷೆ ವೇಳೆ ವಿಷಯ ಬಯಲು

ಹಳೆ ಮಾಂಸವನ್ನು ಬಳಸಿ ತಯಾರಿಸಿದ ಆಹಾರ ನೀಡುತ್ತಿರುವ ಆರೋಪ ಹಿನ್ನಲೆ ನಗರದ ಅನೇಕ ಕಡೆಗಳಲ್ಲಿ 39 ಶವರ್ಮಾ ಸ್ಯಾಂಪಲ್ಸ್ ಪಡೆದಿದ್ದ ಅಧಿಕಾರಿಗಳು ಆ ಪೈಕಿ 32 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದರು. ಅದರಲ್ಲಿ 8 ಸ್ಯಾಂಪಲ್​​ಗಳ ವರದಿ ಬೆಚ್ಚಿಬೀಳಿಸುವಂತಿದ್ದು, ಅವು ತಿನ್ನಲೇ ಯೋಗ್ಯವಲ್ಲ ಎಂಬ ರಿಪೋರ್ಟ್​​ ಬಂದಿದೆ. ಶವರ್ಮಾ ತಯಾರಿಕೆ ವೇಳೆ ಕೃತಕ ಬಣ್ಣಗಳ ಬಳಕೆಯೂ ಬಯಲಾಗಿದೆ. ಇದರ ಜೊತೆಗೆ ಇಲಾಖೆ ಪಡೆದಿದ್ದ 19 ಕಬಾಬ್​​ ಸ್ಯಾಂಪಲ್​​ಗಳ ಪೈಕಿ 16ರ ವರದಿ ಬಂದಿದ್ದು, 2 ಮಾದರಿಗಳು ಅಸುರಕ್ಷಿತ ಎಂದು ಗೊತ್ತಾಗಿದೆ.  ಹೀಗಾಗಿ ಈ ಬಗ್ಗೆ ಕಾನೂನು ಕ್ರಮಕ್ಕೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಮುಂದಾಗಿದೆ.

ಇದನ್ನೂ ಓದಿ: ಬೆಂಗಳೂರಿಗೆ ಬರುತ್ತಿದ್ದ ಕಳಪೆ ಹಾಲು; ಗಡಿಯಲ್ಲಿ ಎಫ್‌ಎಸ್‌ಎಸ್‌ಎಐ ಭರ್ಜರಿ ಕಾರ್ಯಾಚರಣೆ, 30 ಕ್ಕೂ ಹೆಚ್ಚು ವಾಹನಗಳು ಜಪ್ತಿ!

ಆಹಾರ ತಜ್ಞರ ಆತಂಕ

ಇನ್ನು ಶವರ್ಮಗಳಲ್ಲಿ ಬಳಕೆ ಮಾಡಲಾಗುತ್ತಿರುವ ಕೃತಕ ಬಣ್ಣಗಳಲ್ಲಿ ಕಾರ್ಸಿನೋಜೆನಿಕ್ ಅಂಶ ಇರಲಿದ್ದು, ಇದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಹೀಗಾಗಿ ಇಂತಹ ಕೃತಕ ಬಣ್ಣಗಳ ಶವರ್ಮ ಸೇವನೆ ಒಳ್ಳೆಯದಲ್ಲ. ಕ್ಯಾನ್ಸರ್ ಜೊತೆಗೆ ಹೃದಯ ಸಮಸ್ಯೆ, ಅತಿಯಾದ ಬೊಜ್ಜು ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಇದು ಕಾರಣವಾಗಬಹುದೆಂಬ ಆತಂಕವನ್ನ ಆಹಾರ ತಜ್ಞರು ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *