ಬೆಂಗಳೂರು, (ಮೇ 28): ಸಿದ್ದರಾಮಯ್ಯನವರು ಇಂದು (ಮೇ 28) ಅಧಿಕೃತವಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ಹುಲಿಯಾನ ಮೂರು ವರ್ಷದ ರಾಜ್ಯಭಾರ ಅಂತ್ಯವಾಗಿದೆ. ಇನ್ನು ಲೋಕಭವನಕ್ಕೆ ತೆರಳಿ ರಾಜೀನಾಮೆ ನೀಡಿದ ಬಳಿಕ ಸಿದ್ದರಾಮಯ್ಯನವರು ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಚುಟುಕಾಗಿ ತಮ್ಮ ರಾಜಕೀಯ ಹಾದಿ ಹಾಗೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮೆಲುಕು ಹಾಕಿದರು. ಇನ್ನು ಇದೇ ವೇಳೆ ಸಿದ್ದರಾಮಯ್ಯನವರು ನಟ ರಾಜಕುಮಾರ್ ಅವರನ್ನು ನೆನಪಿಸಿಕೊಂಡಿದ್ದು ವಿಶೇಷ.
ನಟ ರಾಜಕುಮಾರ್ ಅಭಿಮಾನಿ ದೇವರು ಅಂತಾ ಕರೀತಿದ್ರು, ನಾನು ರಾಜಕಾರಣಿ, ಸಂವಿಧಾನವನ್ನೇ ನಮ್ಮ ಧರ್ಮ ಎಂದು ತಿಳಿದಿದ್ದೇನೆ. ಮತದಾರರೇ ನಮ್ಮ ಅಭಿಮಾನಿ ದೇವರು. ಕನ್ನಡ ನಾಡಿನ ಕರ್ನಾಟಕದ 7 ಕೋಟಿ ಕೋಟಿ ಜನಸಂಖ್ಯೆ ಸೇವೆ ಮಾಡುವ ಅವಕಾಶ ಸಿಕ್ಕಿತ್ತು. ಎರಡು ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿತ್ತು, ಎರಡು ಬಾರಿ ವಿಪಕ್ಷ ನಾಯಕನಾಗುವ ಅವಕಾಶ ಸಿಕ್ಕಿತ್ತು ಎಂದರು.
