ರಾಜ್​​ಕುಮಾರ್ ಹಾಡನ್ನು ಶೇರ್ ಮಾಡಿಕೊಂಡ ಪ್ರಧಾನಿ ಮೋದಿ; ಕಾರಣ ಏನು?

ರಾಜ್​​ಕುಮಾರ್ ಹಾಡನ್ನು ಶೇರ್ ಮಾಡಿಕೊಂಡ ಪ್ರಧಾನಿ ಮೋದಿ; ಕಾರಣ ಏನು?

ಕನ್ನಡದ ವರನಟ ಡಾ. ರಾಜ್​​ಕುಮಾರ್ (Rajkumar) ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ನೀಡಿದ ಸಿನಿಮಾಗಳು ಈಗಲೂ ಅನೇಕರಿಗೆ ಮಾದರಿ. ಅವರ ಖ್ಯಾತಿ ವಿಶ್ವಾದ್ಯಂತ ಹಬ್ಬಿದೆ. ಕೇವಲ ಕನ್ನಡದ ಮಾತ್ರವಲ್ಲದೆ, ಪರಭಾಷೆಯ ಮಂದಿಗೂ ರಾಜ್​​ಕುಮಾರ್ ತಿಳಿದಿದ್ದಾರೆ. ರಾಜ್​​ಕುಮಾರ್ ಅವರ ಹಾಡುಗಳು ಕೂಡ ಅನೇಕರ ಫೇವರಿಟ್. ಈಗ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ರಾಜ್​​ಕುಮಾರ್ ಅವರ ಹಾಡನ್ನು ಶೇರ್ ಮಾಡಿಕೊಂಡಿದ್ದಾರೆ. ಇದು ಅಣ್ಣಾವ್ರ ಅಭಿಮಾನಿಗಳು ಹಾಗೂ ಕನ್ನಡಿಗರಿಗೆ ಖುಷಿ ಕೊಟ್ಟಿದೆ.

ರಾಜ್​​ಕುಮಾರ್ ಅವರು ಬಾಂಡ್ ಸಿನಿಮಾಗಳಿಂದ ಹಿಡಿದು, ಪೌರಾಣಿಕ ಸಿನಿಮಾಗಳವರೆಗೆ, ಆ್ಯಕ್ಷನ್ ಸಿನಿಮಾದಿಂದ ಹಿಡಿದು ಭಕ್ತಿ ಪ್ರಧಾನ ಸಿನಿಮಾವರೆಗೆ ಎಲ್ಲ ರೀತಿಯ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ‘ಶ್ರೀ ಕೃಷ್ಣದೇವರಾಯ’ ಸಿನಿಮಾ ಕೂಡ ಒಂದು. ಈ ಚಿತ್ರದಲ್ಲಿ ರಾಜ್​​ಕುಮಾರ್ ಅವರು ಕೃಷ್ಣದೇವರಾಯ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಸಿನಿಮಾ 1970ರಲ್ಲಿ ರಿಲೀಸ್ ಆಯಿತು. ಈ ಚಿತ್ರದ ‘ಶ್ರೀ ಚಾಂಮುಂಡೇಶ್ವರಿ..’ ಹಾಡು ಗಮನ ಸೆಳೆಯಿತು. ಇದನ್ನು ಮೋದಿ ಶೇರ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಯಾರಾದರೂ ನಮಿಸಿದರೆ ರಾಜ್​​ಕುಮಾರ್ ಏನು ಹೇಳುತ್ತಿದ್ದರು? ರಜನಿ ಕೂಡ ಅಚ್ಚರಿಪಟ್ಟರು

‘ಶ್ರೀ ಚಾಂಮುಂಡೇಶ್ವರಿ..’ ಹಾಡಿನ ಯೂಟ್ಯೂಬ್ ಲಿಂಕ್ ಶೇರ್ ಮಾಡಿಕೊಂಡಿರೋ ಮೋದಿ, ‘ಜಗತ್ಜನನಿ ಮಾತೆಯ ಮೇಲಿನ ಅಚಲ ನಂಬಿಕೆಯು ಆಕೆಯ ಭಕ್ತರಲ್ಲಿ ಹೊಸ ಪ್ರಜ್ಞೆ ಮತ್ತು ಶಕ್ತಿಯನ್ನು ತುಂಬಲಿದೆ’ ಎಂದು ಹೇಳಿದ್ದಾರೆ. ಈ ಮೂಲಕ ದೈವದ ಭಕ್ತಿ ಸಾರುವ ವಿಡಿಯೋ ಹಂಚಿಕೊಂಡಿದ್ದಾರೆ.

‘ಶ್ರೀ ಚಾಂಮುಂಡೇಶ್ವರಿ..’ಹಾಡನ್ನು ಪಿ. ಲೀಲಾ, ಎಸ್​ ಗೋವಿಂದರಾಜು ಹಾಡಿದ್ದಾರೆ. ಪ್ರಭಾಕರ ಶಾಸ್ತ್ರಿ ಅವರು ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಟಿಜಿ ಲಿಂಗಪ್ಪ ಅವರು ಹಾಡಿಗೆ ಸಂಗೀತ ನೀಡಿದ್ದಾರೆ. ರಾಜ್​​ಕುಮಾರ್ ಹಾಗೂ ಭಾರತಿ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

Leave a Reply

Your email address will not be published. Required fields are marked *