ಸಮಂತಾ ರುತ್ ಪ್ರಭು (Samantha) ಅವರು ಸದ್ಯ ಸುದ್ದಿಯಲ್ಲಿದ್ದಾರೆ. ಅವರು ರಾಜ್ ನಿಧಿಮೋರು ಜೊತೆ ಎರಡನೇ ಮದುವೆ ಆಗಿದ್ದಾರೆ. ರಾಜ್ಗೂ ಇದು ಎರಡನೇ ವಿವಾಹ. ರಾಜ್ ಆಗಮದಿಂದಲೇ ಸಮಂತಾ ವಿಚ್ಛೇದನ ಆಯಿತು ಎಂಬ ವದಂತಿ ಹಬ್ಬಿತ್ತು. ಇದಕ್ಕೆಲ್ಲ ಸಮಂತಾ ಉತ್ತರ ನೀಡಿದ್ದಾರೆ. ಅವರ ಉತ್ತರದಿಂದ ಎಲ್ಲರೂ ಗಪ್ ಚುಪ್ ಆಗಿದ್ದಾರೆ.
ಸಮಂತಾ ವಿಚ್ಛೇದನ ಪಡೆದಿದ್ದು 2021ರ ಅಕ್ಟೋಬರ್ನಲ್ಲಿ. ಆದರೆ, ಅವರಿಗೆ ರಾಜ್ ಪರಿಚಯ ಆಗಿದ್ದು 2019ರಲ್ಲಿ. ಹೀಗಾಗಿ, ಇದೆರಡನ್ನೂ ತಾಳೆ ಹಾಕಿ ಕೆಲವರು ರಾಜ್ ಅವರನ್ನು ಟೀಕಿಸಿದ್ದರು. ರಾಜ್ ಜೊತೆಗಿನ ಪ್ರೀತಿ ಕಾರಣದಿಂದಲೇ ನಾಗ ಚೈತನ್ಯ ಅವರು ಸಮಂತಾಗೆ ಡಿವೋರ್ಸ್ ನೀಡಿರಬಹುದು ಎಂದು ಕೆಲವರು ಊಹಿಸಿದ್ದಾರೆ. ಆದರೆ, ಈ ಊಹೆ ತಪ್ಪು ಎಂಬುದನ್ನು ಸಮಂತಾ ಸಾಬೀತು ಮಾಡಿದ್ದಾರೆ.
ಸಮಂತಾ ಅವರು ರಾಜ್ ಜೊತೆ ಕ್ಲೋಸ್ ಆಗಿದ್ದು ಯಾವಾಗ ಎಂಬುದನ್ನು ಹೇಳಿದ್ದಾರೆ. ಡಿವೋರ್ಸ್ ಬಳಿಕ ಯಾರ ಜೊತೆಯೂ ಕ್ಲೋಸ್ ಆಗೋದಿಲ್ಲ ಎಂದು ಸಮಂತಾ ಭಾವಿಸಿದ್ದರಂತೆ. ಆದರೆ, ಅವರಿಗೆ ರಾಜ್ ನೀಡಿದ ಆಪ್ಯಾಯತೆ ಖುಷಿ ಕೊಟ್ಟಿತು. ಮತ್ತೆ ಪ್ರೀತಿಯಲ್ಲಿ ಬೀಳುವಂತೆ ಆಯಿತು.
‘ನಾನು ವಿಚ್ಛೇದನ ಪಡೆದಾಗ ನಾನು ಹೊರ ಜಗತ್ತಿನ ಜೊತೆಗಿನ ಸಂಪರ್ಕವನ್ನು ಸಂಪೂರ್ಣವಾಗಿ ಕಟ್ ಮಾಡಿದೆ. ಬೇರೆಯವರ ಮೇಲೆ ಮತ್ತೆ ಅವಲಂಬಿತರಾಗಬಹುದು ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಅದೃಷ್ಟವಶಾತ್ ಆ ರೀತಿಯ ಪ್ರೀತಿ ಮತ್ತು ಸ್ನೇಹವನ್ನು ಸ್ವೀಕರಿಸಿದೆ. ರಾಜ್ ಅವರಿಂದ ಸಾಕಷ್ಟು ಪ್ರೀತಿ ಪಡೆದೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಹೆಮ್ಮೆಯಿಂದ ತಾಳಿ ಧರಿಸಿ ಓಡಾಡುತ್ತಿರುವ ನಟಿ ಸಮಂತಾ ರುತ್ ಪ್ರಭು
‘ವಿಚ್ಛೇದನ ಪಡೆದ ಸಮಯದಲ್ಲಿ ಸಮಂತಾ ತುಂಬಾನೇ ಲೋ ಆಗಿದ್ದರು. ಆದರೆ ರಾಜ್ ಜೊತೆ ಸ್ನೇಹ ಬೆಳೆಸಿದ ನಂತರ ನನ್ನ ಜೀವನವನ್ನು ನೋಡುವ ರೀತಿಯಲ್ಲಿ ಬದಲಾವಣೆಗಳನ್ನು ಕಂಡೆ’ ಎಂದು ಅವರು ಹೇಳಿದ್ದಾರೆ. ಅಂದರೆ, ನಾಗ ಚೈತನ್ಯ ಜೊತೆ ಸಂಬಂಧ ಹೊಂದಿರುವಾಗ ಸಮಂತಾ ಅವರು ರಾಜ್ ಜೊತೆ ಪ್ರೊಫೆಷನಲ್ ಆಗೇ ವರ್ತಿಸುತ್ತಿದ್ದರು ಎಂಬುದು ಈ ಮಾತುಗಳಿಂದ ಸ್ಪಷ್ಟವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
