Headlines

ರಾಜ್ಯದಲ್ಲಿ ವಿದ್ಯುತ್ ಬಳಕೆ ಭಾರೀ ಪ್ರಮಾಣದಲ್ಲಿ ಏರಿಕೆ: ಕಾರಣ ಇಲ್ಲಿದೆ – Kannada News | Karnataka Power Consumption Soars 20 percent in April: Heatwave and Gas Crisis Drive Surge

ಬೆಂಗಳೂರು, ಏಪ್ರಿಲ್​​ 30: ಪ್ರಸಕ್ತ ತಿಂಗಳಲ್ಲಿ ರಾಜ್ಯದಲ್ಲಿ ವಿದ್ಯುತ್ ಬಳಕೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಏಪ್ರಿಲ್ 1ರಿಂದ 26ರವರೆಗೆ 9,101 ಮಿಲಿಯನ್ ಯೂನಿಟ್ (MU) ವಿದ್ಯುತ್ ಬಳಕೆಯಾಗಿದೆ. ಕಳೆದ ಐದು ವರ್ಷಗಳಲ್ಲಿ ಇದುವರೆಗೆ ಕಂಡುಬಂದ ಅತ್ಯಧಿಕ ಬಳಕೆ ಇದಾಗಿದೆ ಎನ್ನಲಾಗಿದ್ದು, 2025ರ ಇದೇ ಅವಧಿಗೆ ಹೋಲಿಸಿದರೆ ಶೇ.20ಕ್ಕಿಂತ ಹೆಚ್ಚಿನ ಏರಿಕೆ ಕಂಡುಬಂದಿದೆ. ಹಿಂದಿನ ಕೆಲವು ವರ್ಷಗಳಲ್ಲಿ ಇದೇ ಅವಧಿಯಲ್ಲಿನ ವಿದ್ಯುತ್​​ ಬಳಕೆ ಬಳಕೆ 7,500ರಿಂದ 8,000 ಮಿಲಿಯನ್ ಯೂನಿಟ್ಗಳ ನಡುವೆಯೇ ಇತ್ತು. ಆದರೆ ಈ ಬಾರಿ ನಾನಾ ಕಾರಣಗಳಿಂದ ವಿದ್ಯುತ್​​ ಬಳಕೆಯಲ್ಲಿ ಏರಿಕೆ ಉಂಟಾಗಿದೆ.

ವಿದ್ಯುತ್​​ ಬಳಕೆ ಹೆಚ್ಚಳಕ್ಕೆ ಕಾರಣ ಏನು?

ಈ ವರ್ಷ ಅತಿಯಾದ ಉಷ್ಣತೆ ಕಂಡುಬಂದಿದೆ. ಇದರಿಂದ ಜನರು ತಂಪಿನ ಮೊರೆ ಹೋಗಿದ್ದು ಏಸಿ, ಕೂಲರ್ ಸೇರಿದಂತೆ ವಿವಿಧ ಸಾಧನಗಳನ್ನು ಹೆಚ್ಚಾಗಿ ಬಳಸಿದ್ದಾರೆ. ಇದಲ್ಲದೆ, ಪಶ್ಚಿಮ ಏಷ್ಯಾದ ಸಂಘರ್ಷದ ಪರಿಣಾಮ ಗ್ಯಾಸ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾದ ಕಾರಣ ಹಲವರು ಇಂಡಕ್ಷನ್ ಸ್ಟೋವ್ ಮೊರೆ ಹೋಗಿದ್ದು ಕೂಡ ಹೆಚ್ಚಿನ ಪ್ರಮಾಣದ ವಿದ್ಯುತ್​​ ಬಳಕೆಗೆ ಕಾರಣವಾಗಿದೆ ಎಂದು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ತಿಳಿಸಿದ್ದಾರೆ. ಏಪ್ರಿಲ್ ಮೊದಲ ಎರಡು ವಾರಗಳಲ್ಲಿ ದೊಡ್ಡ ಹೋಟೆಲ್‌ಗಳು ಸಹ ಇಂಡಕ್ಷನ್ ಕುಕ್‌ಟಾಪ್ ಬಳಕೆ ಆರಂಭಿಸಿದ್ದರಿಂದ ಬಳಕೆ ಹೆಚ್ಚಾಗಿದೆ. ಗ್ಯಾಸ್ ಸಿಲಿಂಡರ್ ಕೊರತೆ ಭೀತಿ ಹಿನ್ನೆಲೆಯಲ್ಲಿ ಮನೆಗಳಲ್ಲೂ ಇಂಡಕ್ಷನ್ ಬಳಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅನೇಕ ವಾಣಿಜ್ಯ ಸಂಸ್ಥೆಗಳು ಲೋಡ್ ಸಾಮರ್ಥ್ಯ ಹೆಚ್ಚಿಸಲು ಅರ್ಜಿ ಸಲ್ಲಿಸುತ್ತಿವೆ. ಮುಂದಿನ ದಿನಗಳಲ್ಲಿ ಪ್ರೀ-ಮಾನ್‌ಸೂನ್ ಮಳೆ ಬಂದರೆ ವಿದ್ಯುತ್ ಬೇಡಿಕೆ ಕಡಿಮೆಯಾಗಲಿದೆ. ಆದರೂ ಬೇಡಿಕೆ ಹೆಚ್ಚಾದರೆ ನಿರ್ವಹಿಸಲು ನಾವು ಸಿದ್ಧರಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಜನತೆಗೆ ವಿದ್ಯುತ್ ದರ ಏರಿಕೆ ಶಾಕ್; ಎಷ್ಟು? ಎಂದಿನಿಂದ ಜಾರಿ? ಇಲ್ಲಿದೆ ವಿವರ

ನಗರದ ಪೀಕ್ ಡಿಮಾಂಡ್ ಕೂಡ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. 2023-24ರಲ್ಲಿ 16,110 ಮೆಗಾವಾಟ್ ಇದ್ದ ಪೀಕ್ ಡಿಮಾಂಡ್, 2024-25ರಲ್ಲಿ 16,985 ಮೆಗಾವಾಟ್ ಹಾಗೂ 2025-26ರಲ್ಲಿ 17,330 ಮೆಗಾವಾಟ್ ಆಗಿತ್ತು. ಈ ವರ್ಷ ಅದು 18,478 ಮೆಗಾವಾಟ್‌ಗೆ ಏರಿಕೆಯಾಗಿದೆ ಎಂದು ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *