ಬಿಎಂಟಿಸಿ, ಕೆಎಸ್ಆರ್ಟಿಸಿImage Credit source: tv9 kannada
ಬೆಂಗಳೂರು, ಜುಲೈ 26: ಶಕ್ತಿ ಯೋಜನೆ ಆರಂಭವಾದ ಮೇಲೆ ಕೆಎಸ್ಆರ್ಟಿಸಿ (KSRTC), ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದ ಬಸ್ಗಳಲ್ಲಿ ಕಾಲಿಡಲು ಜಾಗವಿಲ್ಲದಷ್ಟು ರಶ್ ಆಗುತ್ತಿದೆ. ಇತ್ತ ಈ ವರ್ಷ 6 ಸಾವಿರ ಹಳೆಯ ಬಸ್ಗಳು ಗುಜರಿಗೆ ಹೋಗಲಿವೆ ಎನ್ನಲಾಗುತ್ತಿದೆ. ಹಾಗಾಗಿ ಸಾರಿಗೆ ಸಚಿವ ಭೈರತಿ ಸುರೇಶ್ (Byrathi Suresh) 4500 ಹೊಸ ಬಸ್ಗಳ ಖರೀದಿಗೆ ಸಾರಿಗೆ ಇಲಾಖೆಗೆ ಸೂಚನೆ ನೀಡಿದ್ದಾರೆ.
ನಿತ್ಯ 1.80 ಕೋಟಿಯಷ್ಟು ಪ್ರಯಾಣಿಕರು ಸಂಚಾರ
ಶಕ್ತಿ ಯೋಜನೆ ಆರಂಭವಾದ ಮೇಲೆ ಪ್ರತಿದಿನ ನಾಲ್ಕು ನಿಗಮದ ಬಸ್ಗಳಲ್ಲಿ 1.50 ಕೋಟಿಯಿಂದ 1.80ಕೋಟಿಯಷ್ಟು ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಸರಿಯಾದ ಸಮಯಕ್ಕೆ ಬಸ್ಗಳು ಸಿಗುತ್ತಿಲ್ಲ. ಜೊತೆಗೆ ಪ್ರಯಾಣಿಕರಿಗೆ ಬಸ್ಗಳಲ್ಲಿ ಕೂರಲು, ನಿಲ್ಲಲು ಆಗುವುದಿಲ್ಲ. ಏಕೆಂದರೆ ಅಷ್ಟರಮಟ್ಟಿಗೆ ಜನರು ತುಂಬಿರುತ್ತಾರೆ.
ಇದನ್ನೂ ಓದಿ: ನಿಂತಿದ್ದ ಆಟೋಗೆ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಕ್ಕಿ: ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಚಾಲಕ
ಇನ್ನು ಈ ವರ್ಷ ನಾಲ್ಕು ಸಾರಿಗೆ ನಿಗಮದಿಂದ ಬರೋಬ್ಬರಿ 6000 ಬಸ್ಗಳನ್ನು ಗುಜರಿಗೆ ಹಾಕಬೇಕಿರುವ ಹಿನ್ನೆಲೆ, ಸಾರಿಗೆ ಸಚಿವ ಭೈರತಿ ಸುರೇಶ್ ಕೆಎಸ್ಆರ್ಟಿಸಿ, ಬಿಎಂಟಿಸಿಯ, NWKRTC, KKRTC ನಿಗಮಕ್ಕೆ 4500 ಬಸ್ಗಳ ವ್ಯವಸ್ಥೆ ಮಾಡಲು ಕ್ರಮಕೈಗೊಳ್ಳಿ ಎಂದು ಸಾರಿಗೆ ಇಲಾಖೆಯ ಕಾರ್ಯದರ್ಶಿಗೆ ಪತ್ರದ ಮೂಲಕ ಸೂಚನೆ ನೀಡಿದ್ದಾರೆ. ‘ಹೊಸ ಬಸ್ಗಳನ್ನು ಖರೀದಿ ಮಾಡುವುದರಿಂದ ಹಳೆಯ ಗುಜರಿ ಬಸ್ಗಳಿಗೆ ಮುಕ್ತಿ ಸಿಗಲಿದೆ’ ಎಂದು ಪ್ರಯಾಣಿಕರಾದ ರಾಜು ಅವರ ಮಾತು.
ಒಂದು ಸಾವಿರ ಹೊಸ ಬಸ್ ಖರೀದಿಗೆ ಸರ್ಕಾರ ಅನುಮತಿ
ಫ್ಲೈ ಬಸ್, ಅಂಬಾರಿ, ಐರಾವತ, ಅಂಬಾರಿ ಡ್ರೀಮ್ ಕ್ಲಾಸ್, ಐರಾವತ ಕ್ಲಬ್ ಕ್ಲಾಸ್, ರಾಜಹಂಸ, ಪಲಕ್ಕಿ ಉತ್ಸವ ಸೇರಿದಂತೆ 3500 ಡೀಸೆಲ್ ಬಸ್ಗಳು ಮತ್ತು ರಾಜ್ಯದಲ್ಲಿ ಬಸ್ ಸೇವೆ ಇಲ್ಲದ ಊರುಗಳಿಗೆ, ಒಂದು ಸಾವಿರ ಹೊಸ ಬಸ್ ವ್ಯವಸ್ಥೆ ಮಾಡಲು ಸಾರಿಗೆ ಸಚಿವರು ಸೂಚನೆ ನೀಡಿದ್ದಾರೆ. ಈಗಾಗಲೇ ಒಂದು ಸಾವಿರ ಹೊಸ ಬಸ್ಗಳನ್ನು ಖರೀದಿಸಲು ಸರ್ಕಾರ ಅನುಮತಿ ನೀಡಲಾಗಿದೆ.
ಸರ್ಕಾರ ಕೂಡಲೇ ಡೀಸೆಲ್ ಬಸ್ ಖರೀದಿಗೆ ಮುಂದಾಗಬೇಕು: ಸಾರಿಗೆ ನೌಕರರ ಮುಖಂಡ ಜಗದೀಶ್
‘ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದಲ್ಲಿ ಒಟ್ಟು 23,989 ಸಾವಿರ ಬಸ್ಗಳಿವೆ. ಅದರಲ್ಲಿ ಈ ವರ್ಷ 6 ಸಾವಿರ ಬಸ್ಗಳು ಗುಜರಿಗೆ ಹೋದರೆ ಸಾರಿಗೆ ನಿಗಮಗಳಲ್ಲಿ 17,989 ಸಾವಿರ ಬಸ್ಗಳು ಮಾತ್ರ ಸಂಚಾರ ಮಾಡಿಲಿದ್ದು, ಇದರಿಂದ ಪ್ರಯಾಣಿಕರಿಗೆ ತುಂಬಾ ದೊಡ್ಡ ಮಟ್ಟದಲ್ಲಿ ಸಮಸ್ಯೆ ಆಗಲಿದೆ. ಕೂಡಲೇ ಸರ್ಕಾರ ಡೀಸೆಲ್ ಬಸ್ ಖರೀದಿಗೆ ಮುಂದಾಗಬೇಕು’ ಎಂದು ಸಾರಿಗೆ ನೌಕರರ ಮುಖಂಡ ಜಗದೀಶ್ ಹೇಳಿದ್ದಾರೆ.
ಇದನ್ನೂ ಓದಿ: ಚಂದಾಪುರದಲ್ಲಿ ಅಗ್ನಿ ದುರಂತ: ಏಕಾಏಕಿ ಹೊತ್ತಿ ಉರಿದ 4 ಖಾಸಗಿ ಬಸ್ಗಳು
ಒಟ್ಟಿನಲ್ಲಿ ಬಿಎಂಟಿಸಿ, ಕೆಎಸ್ಆರ್ಟಿಸಿ ಸೇರಿದಂತೆ ನಾಲ್ಕು ನಿಗಮಗಳಿಂದ ಈ ವರ್ಷ, ಆರು ಸಾವಿರ ಬಸ್ಗಳು ಗುಜರಿಗೆ ಹೋಗುತ್ತಿರುವುದರಿಂದ ಹೊಸ ಬಸ್ಗಳ ಅತ್ಯವಶ್ಯಕವಾಗಿದೆ. ಒಂದು ವೇಳೆ ಸರ್ಕಾರ ಹೊಸ ಬಸ್ಗಳ ಖರೀದಿಗೆ ಮುಂದಾಗಲಿಲ್ಲ ಅಂದರೆ ಪ್ರಯಾಣಿಕರು ಪರದಾಡುವುದಂತು ಸುಳ್ಳಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
