ರಾತ್ರಿ 11 ಆದ್ರೂ ನಿದ್ದೆ ಬರಲ್ವಾ? ಹಾಗಿದ್ರೆ ಡಯಟ್, ವ್ಯಾಯಾಮ ಏನು ಮಾಡ್ಬೇಡಿ ಎಲ್ಲಾ ವ್ಯರ್ಥ! – Kannada News | How Late Sleep Affects Your Weight

ತೂಕ ಇಳಿಸಿಕೊಳ್ಳುವುದೆಂದರೆ ಕೇವಲ ಕ್ಯಾಲೊರಿಗಳನ್ನು ಲೆಕ್ಕಹಾಕಿ, ಬೆವರು ಸುರಿಸಿ ವ್ಯಾಯಾಮ ಮಾಡುವುದು ಮಾತ್ರವಲ್ಲ. ನಮ್ಮ ದೇಹವು ಜೈವಿಕ ಗಡಿಯಾರವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು. ಹೌದು, ಹಲವರಿಗೆ ಈ ಬಗ್ಗೆ ತಿಳಿದಿಲ್ಲ ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆಯೇ ನೀವು ಯಾವುದೇ ರೀತಿಯ ಡಯಟ್, ವ್ಯಾಯಾಮ ಮಾಡಿದರೂ ಕೂಡ ಪ್ರಯೋಜನಕ್ಕೆ ಬರುವುದಿಲ್ಲ. ಸಾಮಾನ್ಯವಾಗಿ ರಾತ್ರಿ 11 ಗಂಟೆಯವರೆಗೂ ಎಚ್ಚರವಾಗಿರುವುದು ಅಥವಾ ನಿದ್ರೆಯನ್ನು (Sleep) ಒಂದೇ ಸಮಯಕ್ಕೆ ಮಾಡದಿರುವುದು ನಮ್ಮ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ನಿದ್ರೆಯ ಸಮಯ ಮತ್ತು ತೂಕದ ನಡುವಿನ ಸಂಬಂಧದ ಬಗ್ಗೆ ಸರಿಯಾಗಿ ತಿಳಿದುಕೊಳ್ಳದಿದ್ದರೆ ಈ ರೀತಿಯ ಸಮಸ್ಯೆ ಉಂಟಾಗುತ್ತದೆ. ಹಾಗಾದರೆ ತೂಕ ಕಡಿಮೆ ಮಾಡಿಕೊಳ್ಳಲು ಇಚ್ಛಿಸುವವರು ತಮ್ಮ ದಿನಚರಿಯನ್ನು ಯಾವ ರೀತಿ ಇಟ್ಟುಕೊಳ್ಳಬೇಕು, ಯಾವ ಸಮಯದಲ್ಲಿ ಮತ್ತು ಎಷ್ಟು ಹೊತ್ತು ನಿದ್ರಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

ಸಾಮಾನ್ಯವಾಗಿ ರಾತ್ರಿ 10:30 ರ ನಂತರ, ನಮ್ಮ ದೇಹದ ಜೀರ್ಣಕ್ರಿಯೆ ನಿಧಾನಗತಿಗೆ ಪ್ರವೇಶಿಸುತ್ತದೆ. ಈ ಸಮಯದಲ್ಲಿ ನಾವು ಎಚ್ಚರವಾಗಿದ್ದರೆ, ದೇಹ ಒತ್ತಡಕ್ಕೆ ಒಳಗಾಗುತ್ತದೆ, ಆಗ ಕಾರ್ಟಿಸೋಲ್ ಎಂಬ ಒತ್ತಡದ ಹಾರ್ಮೋನ್ ಬಿಡುಗಡೆಯಾಗುತ್ತದೆ. ಈ ಹಾರ್ಮೋನ್ ರಕ್ತದಲ್ಲಿ ಇದ್ದಾಗ, ದೇಹವು ಕೊಬ್ಬನ್ನು ಕರಗಿಸುವುದನ್ನು ನಿಲ್ಲಿಸುತ್ತದೆ ಮಾತ್ರವಲ್ಲ ಅದನ್ನು ಸಂಗ್ರಹಿಸಲು ಪ್ರಾರಂಭಿಸುತ್ತದೆ. ನೀವು ಎಷ್ಟೇ ಆರೋಗ್ಯಕರ ಆಹಾರವನ್ನು ಅನುಸರಿಸಿದರೂ, ಕಾರ್ಟಿಸೋಲ್ ಮಟ್ಟಗಳು ಹೆಚ್ಚಿದ್ದರೆ, ತೂಕ ಇಳಿಸುವುದು ತುಂಬಾ ಕಷ್ಟಕರವಾಗುತ್ತದೆ. ದೇಹದ ಜೀವಕೋಶಗಳ ದುರಸ್ತಿ ಕೆಲಸ ರಾತ್ರಿ 11 ರಿಂದ ಬೆಳಗಿನ ಜಾವ 3 ರ ನಡುವೆ ನಡೆಯುತ್ತದೆ. ಈ ಸಮಯದಲ್ಲಿ ನೀವು ನಿದ್ರೆ ಮಾಡದಿದ್ದರೆ, ಚಯಾಪಚಯ ಕ್ರಿಯೆ ಸರಿಯಾಗಿ ನಡೆಯುವುದಿಲ್ಲ. ಜೊತೆಗೆ ಇದು ಹಸಿವನ್ನು ನಿಯಂತ್ರಿಸುವ ಹಾರ್ಮೋನುಗಳನ್ನು ಅಡ್ಡಿಪಡಿಸುತ್ತದೆ. ಇದಲ್ಲದೆ, ರಾತ್ರಿ ಬೇಗನೆ ಮಲಗದವರು ಹೆಚ್ಚಿನ ಇನ್ಸುಲಿನ್ ಸ್ಪೈಕ್‌ಗಳನ್ನು ಹೊಂದಿರುತ್ತಾರೆ, ಇದು ತೂಕ ಹೆಚ್ಚಾಗಲು ಪ್ರಮುಖ ಕಾರಣವಾಗುತ್ತದೆ.

ಇದನ್ನೂ ಓದಿ: ನಿದ್ದೆಯಿಂದ ಪದೇ ಪದೇ ಎಚ್ಚರವಾಗಿ ನಿದ್ರೆ ಹಾಳಾಗುತ್ತಿದ್ದರೆ ತಡಮಾಡದೆಯೇ ಈ ವಿಷಯಗಳನ್ನು ತಿಳಿದುಕೊಳ್ಳಿ

ನಾವು ನಮ್ಮ ದೇಹಕ್ಕೆ ಅಗತ್ಯವಿರುವಷ್ಟು ನಿದ್ರೆ ಮಾಡದಿದ್ದರೆ, ನಾವು ಸೇವಿಸುವ ಎಲ್ಲಾ ಡಿಟಾಕ್ಸ್ ಪಾನೀಯಗಳು ಮತ್ತು ಆಹಾರಗಳು ವ್ಯರ್ಥವಾಗುತ್ತದೆ. ರಾತ್ರಿ 11 ಗಂಟೆಯ ನಂತರ ಎಚ್ಚರವಾಗಿದ್ದರೆ, ದೇಹದ ನೈಸರ್ಗಿಕ ತ್ಯಾಜ್ಯ ನಿರ್ವಿಶೀಕರಣ ಪ್ರಕ್ರಿಯೆಯು ನಿಲ್ಲುತ್ತದೆ. ಇದು ಅಜೀರ್ಣ ಮತ್ತು ಉಬ್ಬರದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಜೀರ್ಣಕ್ರಿಯೆ ದುರ್ಬಲಗೊಂಡರೆ, ಚಯಾಪಚಯ ಕ್ರಿಯೆ ಕಡಿಮೆಯಾಗುತ್ತದೆ ಮತ್ತು ದೇಹವು ಹೆಚ್ಚು ಹೆಚ್ಚು ಕೊಬ್ಬನ್ನು ಸಂಗ್ರಹಿಸುತ್ತದೆ.

ಈ ಸಮಸ್ಯೆ ತಡೆಯಲು ಸಲಹೆಗಳು:

  • ತೂಕ ಇಳಿಸಿಕೊಳ್ಳಲು ಬಯಸುವವರು ರಾತ್ರಿ 11ರ ಮೊದಲು ನಿದ್ರೆ ಮಾಡಬೇಕು.
  • ಪ್ರತಿದಿನ ನಿಗದಿತ ಸಮಯಕ್ಕಿಂತ 15- 20 ನಿಮಿಷ ಮುಂಚಿತವಾಗಿ ಮಲಗುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು.
  • ಮಲಗುವ ಒಂದು ಗಂಟೆ ಮೊದಲು ಮೊಬೈಲ್ ಮತ್ತು ಲ್ಯಾಪ್‌ಟಾಪ್ ದೂರ ಇಡುವುದನ್ನು ಮರೆಯಬೇಡಿ.
  • ಮಲಗುವ ಸಮಯಕ್ಕೆ ಕನಿಷ್ಠ ಮೂರು ಗಂಟೆಗಳ ಮೊದಲು ನಿಮ್ಮ ಊಟವನ್ನು ಮುಗಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *