
ರಾಕಿಂಗ್ ಸ್ಟಾರ್ ಯಶ್ ಅವರು ಹಲವು ವರ್ಷಗಳ ಬಳಿಕ ಪ್ರೇಕ್ಷರ ಎದುರು ಹೊಸ ಲುಕ್ನಲ್ಲಿ ಬಂದಿದ್ದಾರೆ. ‘ಕೆಜಿಎಫ್ 2’ ಸಿನಿಮಾ (KGF 2 Movie) ಕೆಲಸ ಆರಂಭ ಆದಾಗಿನಿಂದಲೂ ಅವರು ಉದ್ದನೆಯ ಗಡ್ಡ ಹಾಗೂ ಉದ್ದ ಕೂದಲು ಬಿಟ್ಟಿದ್ದರು. ಅದೇ ರೀತಿಯ ಲುಕ್ ‘ಟಾಕ್ಸಿಕ್’ ಚಿತ್ರದಲ್ಲೂ ಮುಂದುವರಿಯಿತು. ಈ ಚಿತ್ರದ ‘ಟಿಕೆಟ್’ ಹೆಸರಿನ ಪಾತ್ರದ ಲುಕ್ಗಾಗಿ ಅವರು ಗಡ್ಡ ಹಾಗೂ ಕೂದಲನ್ನು ಕತ್ತರಿಸಿ ಸಣ್ಣದಾಗಿಸಿಕೊಂಡಿದ್ದಾರೆ. ಈಗ ಈ ಲುಕ್ನ ಅನಾವರಣ ಆಗಿರುವುದರಿಂದ ಯಶ್ ಅದನ್ನು ಸಾರ್ವಜನಿಕವಾಗಿ ತೋರಿಸಿದ್ದಾರೆ.
‘ಟಾಕ್ಸಿಕ್’ ಸಿನಿಮಾ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದಾರೆ ಮಾರ್ಚ್ 19ರಂದು ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಹಾಗಾಗಿಲ್ಲ. ಚಿತ್ರದ ಬಿಡುಗಡೆ ದಿನಾಂಕ ಜೂನ್ 4ಕ್ಕೆ ಮುಂದೂಡಲ್ಪಟ್ಟಿದೆ. ಈ ಮಧ್ಯೆ ಯಶ್ ಮುಂಬೈನಲ್ಲಿ ಸಮಯ ಕಳೆಯುತ್ತಿದ್ದಾರೆ. ಅವರು ‘ಟಾಕ್ಸಿಕ್’ ಚಿತ್ರದ ಹಿಂದಿ ಡಬ್ಬಿಂಗ್ ಬಗ್ಗೆ ಗಮನಹರಿಸುತ್ತಿದ್ದಾರೆ.
ಯಶ್ ರೆಸ್ಟೋರೆಂಟ್ ಹೊರ ಭಾಗದಲ್ಲಿ ಕಾಣಿಸಿಕೊಂಡ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಶಾರ್ಟ್ ಹೇರ್ ಹಾಗೂ ಸಣ್ಣದಾದ ಗಡ್ಡದಲ್ಲಿ ಕಾಣಿಸಿಕೊಂಡರು. ಈ ಲುಕ್ ಗಮನ ಸೆಳೆಯುವ ರೀತಿಯಲ್ಲಿ ಇದೆ. ಇದಕ್ಕೆ ಯಶ್ ಫ್ಯಾನ್ಸ್ ಖುಷಿಯಾಗಿದ್ದಾರೆ. ಹಲವು ವರ್ಷಗಳ ಬಳಿಕ ಅವರನ್ನು ಹೊಸ ಅವತಾರದಲ್ಲಿ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಯಶ್ ಜೊತೆ ರಾಧಿಕಾ ಕೂಡ ಇದ್ದರು.
Aa looks choodu tammudu
#Yash #ToxicTheMovie — Kadubu (@Kadubuchutney) March 6, 2026
ಈ ಮೊದಲು ಯಶ್ ಮುಂಬೈ ಬೀದಿಗಳಲ್ಲಿ ಸುತ್ತಾಡಿದ್ದರು. ಆ ವೇಳೆಗಾಗಲೇ ಯಶ್ ಲುಕ್ ಬದಲಸಿಕೊಂಡಾಗಿತ್ತು. ಹೀಗಾಗಿ, ಅದನ್ನು ತೋರಿಸಬಾರದು ಎಂದು ಯಶ್ ಅವರು ಮುಖ ಮುಚ್ಚಿಕೊಂಡು ಓಡಾಡುತ್ತಿದ್ದರು. ಆದರೆ, ಈಗ ಟಿಕೆಟ್ ಪಾತ್ರದ ಲುಕ್ ರಿವೀಲ್ ಆಗಿರುವುದರಿಂದ ಅವರು ರಾಜಾರೋಶವಾಗಿ ಹೊಸ ಲುಕ್ ಅಲ್ಲಿ ಓಡಾಡುತ್ತಿದ್ದಾರೆ.
ಇದನ್ನೂ ಓದಿ: ಕೊನೇ ಕ್ಷಣದಲ್ಲಿ ಅಭಿಮಾನಿಗಳಿಗೆ ಶಾಕ್ ಕೊಟ್ಟ ಯಶ್; ಟಾಕ್ಸಿಕ್ ಸಿನಿಮಾ ರಿಲೀಸ್ ಮುಂದಕ್ಕೆ
ಯಶ್ ಅವರ ಅಭಿಮಾನಿ ಬಳಗ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತ ಆಗಿಲ್ಲ. ರಾಕಿ ಭಾಯ್ ಹೆಸರು ಭಾರತಾದ್ಯಂತ ಚರ್ಚೆಯಲ್ಲಿದೆ. ಮುಂಬೈ ಬೀದಿಗಳಲ್ಲಿ ಓಡಾಡಿದರೂ ಪಾಪರಾಜಿಗಳು ಮುತ್ತಿಕೊಂಡು, ‘ಯಶ್ ಸರ್ ಯಶ್ ಸರ್’ ಎಂದು ಕೂಗುತ್ತಾರೆ. ಇದು ಯಶ್ ಅವರ ಜನಪ್ರಿಯತೆಯನ್ನು ತೋರಿಸುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.