‘ಟಾಕ್ಸಿಕ್’ ಟ್ರೇಲರ್ ಲಾಂಚ್ ಈವೆಂಟ್ ಅಲ್ಲಿ ಯಶ್ ಬಗ್ಗೆ ಎಲ್ಲರೂ ಮಾತನಾಡಿದರು. ಆದರೆ, ನಯನತಾರಾ ಅವರು ಯಶ್ಗೆ ಶಕ್ತಿಯಾಗಿ ನಿಂತ ರಾಧಿಕಾ ಬಗ್ಗೆ ಮಾತನಾಡಿದರು. ವೇದಿಕೆ ಮೇಲೆ ಮಾತನಾಡಿದ ನಯನತಾರಾ, ‘ಸಿನಿಮಾ ಹಿಟ್ ಆದಾಗ ಪ್ರತಿಯೊಬ್ಬರೂ ಚಿತ್ರದ ನಟ-ನಟಿಯರು, ತಾಂತ್ರಿಕ ತಂಡ ಮತ್ತು ಅವರ ಕಠಿಣ ಪರಿಶ್ರಮದ ಬಗ್ಗೆ ಮಾತನಾಡುತ್ತಾರೆ. ಆದರೆ ಆ ಯಶಸ್ಸಿನ ಹಿನ್ನೆಲೆಯಲ್ಲಿ ಕುಟುಂಬದವರು ಮಾಡುವ ತ್ಯಾಗ ಮತ್ತು ಬೆಂಬಲದ ಬಗ್ಗೆ ಯಾರೂ ಮಾತನಾಡುವುದಿಲ್ಲ’ ಎಂದರು.
ಯಶ್ ಅವರ ಪಕ್ಕದಲ್ಲಿ ಕುಳಿತಿದ್ದ ರಾಧಿಕಾ ಪಂಡಿತ್ ಅವರನ್ನು ತೋರಿಸುತ್ತಾ, ‘ರಾಧಿಕಾ ಅವರು ಯಶ್ ಅವರ ಪಾಲಿನ ಅತಿ ದೊಡ್ಡ ಶಕ್ತಿ. ಯಶ್ ಅವರ ಕನಸು ಮತ್ತು ದೂರದೃಷ್ಟಿಗಾಗಿ ರಾಧಿಕಾ ತಮ್ಮ ಸಮಯವನ್ನು ತ್ಯಾಗ ಮಾಡಿ ನೀಡುತ್ತಿರುವ ಬೆಂಬಲ ನಿಜಕ್ಕೂ ಅದ್ಭುತವಾದದ್ದು. ರಾಧಿಕಾ ಅವರ ಮೇಲೆ ನನಗೆ ಅಪಾರವಾದ ಗೌರವ ಹಾಗೂ ಪ್ರೀತಿಯಿದೆ’ ಎಂದು ಹೇಳಿದರು.
ನಯನತಾರಾ ಅವರ ಈ ಭಾವುಕ ಮಾತುಗಳನ್ನು ಕೇಳಿ ಸಭೆಯಲ್ಲಿದ್ದ ಯಶ್ ಹಾಗೂ ರಾಧಿಕಾ ಪಂಡಿತ್ ಮುಗುಳ್ನಕ್ಕು ಧನ್ಯವಾದ ತಿಳಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
