ಬೆಳಗಾವಿ, ಏಪ್ರಿಲ್ 29: ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಶಿವಾಜಿನಗರದಲ್ಲಿ ರಾಬರಿ ಪ್ರಕರಣವೊಂದರ ಸ್ಥಳ ಮಹಜರ್ ಸಂದರ್ಭದಲ್ಲಿ ಹೈಡ್ರಾಮಾ ನಡೆದಿದೆ. ಚಿಕ್ಕೋಡಿ ಠಾಣೆ ಪೊಲೀಸರು ಆರೋಪಿ ಧೀರಜ್‌ನನ್ನು ಸ್ಥಳ ಮಹಜರಿಗಾಗಿ ಕರೆತಂದಿದ್ದರು. ಈ ವೇಳೆ ಆರೋಪಿ ಧೀರಜ್, ತನ್ನನ್ನು ಸುಮ್ಮನೆ ಬಂದಿಸಲಾಗಿದೆ ಎಂದು ಕೂಗಾಡಲು ಆರಂಭಿಸಿದ್ದಾನೆ.
ಆರೋಪಿಯ ಈ ಕೃತ್ಯದಿಂದ ಪರಿಸ್ಥಿತಿ ಉದ್ವಿಗ್ನಗೊಂಡಾಗ ಅಲ್ಲಿದ್ದ ಆರೋಪಿಯ ಸಂಬಂಧಿಕರು ಮತ್ತು ಸ್ನೇಹಿತರು ಸೇರಿಕೊಂಡು, ಸಿಪಿಐ ವಿಶ್ವನಾಥ ಚೌಗಲ್ ಹಾಗೂ ಪೇದೆಗಳ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ರಾಬರಿ ಪ್ರಕರಣದ ತನಿಖೆಗಾಗಿ ಕೊಲ್ಲಾಪುರಕ್ಕೆ ತೆರಳಿದ್ದ ಚಿಕ್ಕೋಡಿ ಪೊಲೀಸರು ಈ ಅನಿರೀಕ್ಷಿತ ಹಲ್ಲೆ ಯತ್ನದಿಂದ ಕೆಲಕಾಲ ಗೊಂದಲಕ್ಕೊಳಗಾಗಿದ್ದರು. ಆದಾಗ್ಯೂ, ಕ್ಷಣಾರ್ಧದಲ್ಲಿ ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಿ ಹಲ್ಲೆಯಿಂದ ಪಾರಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
