ಟಾಲಿವುಡ್ ಮೆಗಾಸ್ಟಾರ್ ರಾಮ್ ಚರಣ್ ಎಲ್ಲೇ ಹೋದರೂ ಅವರ ನೆರಳಿನಂತೆ ರಕ್ಷಣೆ ನೀಡುವ ಬಾಡಿಗಾರ್ಡ್ ಕೆವಿನ್ ಕುಂಟ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ತಮ್ಮ ಕಟ್ಟುಮಸ್ತಾದ ದೇಹದಿಂದಲೇ ಗಮನ ಸೆಳೆಯುತ್ತಾ ಇದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಕೆವಿನ್ ಕುಂಟ ಅವರು ತಮ್ಮ ತರಬೇತುದಾರರ ಸಮ್ಮುಖದಲ್ಲಿ ತೀವ್ರ ಹಂತದ ಬಾಕ್ಸಿಂಗ್ ಪ್ರ್ಯಾಕ್ಟೀಸ್ ಮಾಡುತ್ತಿದ್ದಾರೆ. ಪಂಚ್ ಪ್ಯಾಡ್‌ಗಳಿಗೆ ಅವರು ಸತತವಾಗಿ ಆಕ್ರಮಣಕಾರಿ ಪಂಚ್‌ಗಳನ್ನು ನೀಡುತ್ತಾ ತಮ್ಮ ವೇಗ ಮತ್ತು ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಎಕ್ಸಸೈಸ್ ಮಾಡುವ ಮೂಲಕ ತಮ್ಮ ಅದ್ಭುತ ಫಿಟ್‌ನೆಸ್ ಸಾಮರ್ಥ್ಯವನ್ನು ತೋರ್ಪಡಿಸಿದ್ದಾರೆ.
ವಿಡಿಯೋದ ಕೊನೆಯ ಭಾಗದಲ್ಲಿ ಕೆವಿನ್ ಅವರು ಜಿಮ್‌ನ ಮೇಲ್ಭಾಗದಲ್ಲಿರುವ ಮಂಕಿ ಬಾರ್ಸ್ ಸಹಾಯದಿಂದ ಅತ್ಯಂತ ಸುಲಭವಾಗಿ ಒಂದು ಬದಿಯಿಂದ ಮತ್ತೊಂದು ಬದಿಗೆ ಚಲಿಸುವ ಸಾಹಸ ಮಾಡಿದ್ದಾರೆ. ಅವರ ಈ ಸಿಕ್ಸ್ ಪ್ಯಾಕ್ ಬಾಡಿ ಮತ್ತು ಕಠಿಣ ಪರಿಶ್ರಮಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
