ರಾಮ್ ಚರಣ್ ಹೊಸ ಬಾಡಿಗಾರ್ಡ್ ಯಾರು ಗೊತ್ತಾ? ದಿನದ ಸಂಬಳ ಎಷ್ಟು? – Kannada News | Ram Charan’s New Bodyguard: Meet Kevin Kounta, The MMA Champ Securing Peddi Promotions

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಹಾಗೂ ಜಾನ್ವಿ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ಬುಚಿ ಬಾಬು ಸನಾ ನಿರ್ದೇಶನದ ಬಹುನಿರೀಕ್ಷಿತ ‘ಪೆಡ್ಡಿ’ ಸಿನಿಮಾ  ಜೂನ್ 04 ರಂದು ಬಿಡುಗಡೆಯಾಗಲಿದೆ. ಈ ಹಳ್ಳಿ ಕ್ರೀಡಾ ಆಧಾರಿತ ಅದ್ಭುತ ಚಿತ್ರದ ಪ್ರಚಾರ ಕಾರ್ಯಕ್ರಮಗಳು ಸದ್ಯ ದೇಶದಾದ್ಯಂತ ಭರ್ಜರಿಯಾಗಿ ನಡೆಯುತ್ತಿವೆ. ಮುಂಬೈನಲ್ಲಿ ನಡೆದ ಅದ್ಧೂರಿ ಟ್ರೇಲರ್ ಬಿಡುಗಡೆ ಸಮಾರಂಭದ ನಂತರ, ಭೋಪಾಲ್ ಹಾಗೂ ಬೆಂಗಳೂರಿನಲ್ಲೂ ಚಿತ್ರತಂಡ ಪ್ರಚಾರ ಕೈಗೊಂಡಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ರಾಮ್ ಚರಣ್ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.

ಆದರೆ, ಈ ಪ್ರಚಾರದ ಈವೆಂಟ್‌ಗಳ ಫೋಟೋ ಮತ್ತು ವಿಡಿಯೋಗಳಲ್ಲಿ ರಾಮ್ ಚರಣ್ ಅವರ ಲುಕ್ ಜೊತೆಗೆ ಎಲ್ಲರ ಗಮನ ಸೆಳೆಯುತ್ತಿರುವುದು ಅವರ ಪಕ್ಕದಲ್ಲೇ ಇರುವ ಒಂದು ಬೃಹತ್ ಕಟೌಟ್‌ನಂತಹ ವ್ಯಕ್ತಿ. ಸೋಷಿಯಲ್ ಮೀಡಿಯಾದಲ್ಲಿ ಬೀಸ್ಟ್ ಎಂದೇ ವೈರಲ್ ಆಗಿರುವ ಈ ವ್ಯಕ್ತಿ, ರಾಮ್ ಚರಣ್ ಅವರ ಹಿಂದೆ ರಕ್ಷಣಾತ್ಮಕ ಗುರಾಣಿಯಂತೆ ನಿಂತು ಭದ್ರತೆ ಒದಗಿಸುತ್ತಿದ್ದಾರೆ. ನೆಟ್ಟಿಗರು ಈತನ ಹಿನ್ನೆಲೆ ಬಗ್ಗೆ ಹುಡುಕಾಡಿದಾಗ ಅತ್ಯಂತ ಕುತೂಹಲಕಾರಿ ವಿಷಯಗಳು ಹೊರಬಂದಿವೆ.

ಈ ಹೊಸ ಬಾಡಿಗಾರ್ಡ್ ಹೆಸರು ಕೆವಿನ್ ಕುಂಟಾ. ಆಫ್ರಿಕಾದ ಗ್ಯಾಂಬಿಯಾ ಮೂಲದ ಕೆವಿನ್, ಪ್ರಸ್ತುತ ಇಟಲಿಯಲ್ಲಿ ವೃತ್ತಿಪರ ಮಿಶ್ರ ಸಮರ ಕಲೆಗಳ (MMA) ಹೋರಾಟಗಾರರಾಗಿದ್ದು, ಅಲ್ಲಿನ ರಾಷ್ಟ್ರೀಯ ಮಿಡಲ್‌ವೇಟ್ ಎಂಎಂಎ ಚಾಂಪಿಯನ್ ಕೂಡ ಆಗಿದ್ದಾರೆ. ಅಂತರರಾಷ್ಟ್ರೀಯ ಸೆಲೆಬ್ರಿಟಿಗಳು ಹಾಗೂ ವಿವಿಐಪಿಗಳಿಗೆ ಅತ್ಯುನ್ನತ ಮಟ್ಟದ ಕ್ಲೋಸ್ ಪ್ರೊಟೆಕ್ಷನ್ ಭದ್ರತೆ ಒದಗಿಸುವಲ್ಲಿ ಇವರು ವಿಶ್ವದಾದ್ಯಂತ ಭಾರಿ ಬೇಡಿಕೆ ಹೊಂದಿದ್ದಾರೆ. ಮುಂಬೈ ಸಮಾರಂಭದಲ್ಲಿ ಸಾವಿರಾರು ಅಭಿಮಾನಿಗಳು ಮತ್ತು ಮಾಧ್ಯಮಗಳು ಮುಗಿಬಿದ್ದಾಗ, ಕೆವಿನ್ ಜನರ ಗುಂಪನ್ನು ನಿಯಂತ್ರಿಸಿದ ರೀತಿ ಸಿನಿರಂಗದಲ್ಲಿ ದೊಡ್ಡ ಪ್ರಶಂಸೆ ಗಳಿಸಿದೆ.

ಇದನ್ನೂ ಓದಿ: ರಾಮ್ ಚರಣ್-ಪವನ್ ಕಲ್ಯಾಣ್ ಬಾಂಡಿಂಗ್ ನೋಡಿ ಹೊಗಳಿದ ಶಿವಣ್ಣ 

ಅಂತರರಾಷ್ಟ್ರೀಯ ಮಟ್ಟದ ಈ ಸ್ಟಾರ್ ಫೈಟರ್‌ನ ಕಟ್ಟುಮಸ್ತಾದ ದೇಹ ಮತ್ತು ಎತ್ತರವನ್ನು ಕಂಡ ಸಿನಿರಸಿಕರು, ಇವರು ರಾಮ್ ಚರಣ್ ಪಕ್ಕದಲ್ಲಿ ನಡೆದು ಬರುತ್ತಿದ್ದರೆ ಯಾವುದೋ ಹಾಲಿವುಡ್ ಆಕ್ಷನ್ ಸಿನಿಮಾದ ದೃಶ್ಯದಂತೆ ಕಾಣುತ್ತದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಈ ಹೈ-ಪ್ರೊಫೈಲ್ ಅಂಗರಕ್ಷಕನ ಸಂಬಳ ಕೂಡ ಅಷ್ಟೇ ಭಾರಿ ಪ್ರಮಾಣದಲ್ಲಿದೆ ಎಂದು ವರದಿಯಾಗಿದೆ. ಸದ್ಯದ ಮಾಹಿತಿ ಪ್ರಕಾರ, ಗ್ಲೋಬಲ್ ಸ್ಟಾರ್ ರಾಮ್ ಚರಣ್ ಅವರ ಸುರಕ್ಷತೆಗಾಗಿ ಕೆವಿನ್ ಕುಂಟಾಗೆ ದಿನಕ್ಕೆ ಬರೋಬ್ಬರಿ 2 ಲಕ್ಷ ರೂಪಾಯಿಗಳವರೆಗೆ ಸಂಭಾವನೆ ನೀಡಲಾಗುತ್ತಿದೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *