ರಾಯಗಢ ಪ್ರವಾಹದಲ್ಲಿ ಕೊಚ್ಚಿಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು; ವಿಡಿಯೋ ವೈರಲ್! – Kannada News | 3000 LPG cylinders floating in Raigad flood Water Video Goes Viral

ರಾಯಗಢ, ಜುಲೈ 9: ಒಂದೆಡೆ ದೇಶಾದ್ಯಂತ ಎಲ್​ಪಿಜಿ ಬಿಕ್ಕಟ್ಟು (LPG Crisis) ಎದುರಾಗಿದ್ದರೆ ಇನ್ನೊಂದೆಡೆ ಮಹಾರಾಷ್ಟ್ರದಲ್ಲಿ ನದಿಯಲ್ಲಿ ಸಾವಿರಾರು ಸಿಲಿಂಡರ್​ಗಳು ತೇಲಿ ಬರುತ್ತಿತ್ತು. ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯ ನಡುವೆ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದೆ. ರಾಯಗಢದ ಹೆಚ್‌ಪಿಸಿಎಲ್ ಪಾತಳಗಂಗಾ ಎಲ್‌ಪಿಜಿ ಬಾಟ್ಲಿಂಗ್ ಪ್ಲಾಂಟ್‌ಗೆ ಪ್ರವಾಹದ ನೀರು ನುಗ್ಗಿದ ಪರಿಣಾಮದಿಂದ ಸುಮಾರು 3,000 ಎಲ್​ಪಿಜಿ ಗ್ಯಾಸ್ ಸಿಲಿಂಡರ್‌ಗಳು ನದಿಯ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ. ನದಿಯ ಕೆಳಭಾಗದ ಪ್ರದೇಶಗಳಲ್ಲಿ ಸಿಲಿಂಡರ್‌ಗಳು ಕಂಡುಬಂದರೆ ಸಾರ್ವಜನಿಕರು ಅವುಗಳನ್ನು ಮುಟ್ಟಬಾರದು ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

ಪನ್ವೇಲ್ ತಾಲೂಕಿನ ಎಂಐಡಿಸಿ ಚಾವಣೆಯಲ್ಲಿರುವ ಹೆಚ್‌ಪಿಸಿಎಲ್ ಪಾತಳಗಂಗಾ ಎಲ್‌ಪಿಜಿ ಬಾಟ್ಲಿಂಗ್ ಪ್ಲಾಂಟ್‌ಗೆ ನಿರಂತರವಾಗಿ ಸುರಿದ ಧಾರಾಕಾರ ಮಳೆಯಿಂದಾಗಿ ಪ್ರವಾಹದ ನೀರು ನುಗ್ಗಿದೆ. ಪ್ರವಾಹದ ರಭಸಕ್ಕೆ ಪ್ಲಾಂಟ್‌ನ ರಕ್ಷಣಾ ಗೋಡೆ ಕುಸಿದು ಬಿದ್ದಿದ್ದರಿಂದ, ಅಲ್ಲಿ ಸಂಗ್ರಹಿಸಿಡಲಾಗಿದ್ದ ಸುಮಾರು 3,000 ಸಿಲಿಂಡರ್‌ಗಳು ಕೊಚ್ಚಿಹೋಗಿವೆ. ಸೇತುವೆಯ ಮೇಲಿಂದ ನೂರಾರು ಸಿಲಿಂಡರ್‌ಗಳು ನದಿಯಲ್ಲಿ ತೇಲುತ್ತಾ ಹೋಗುತ್ತಿದ್ದ ದೃಶ್ಯವನ್ನು ಸ್ಥಳೀಯರು ಆಶ್ಚರ್ಯದಿಂದ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ಹಲವರು ನೀರಿನಲ್ಲಿ ಬಗ್ಗಿ ಆ ಸಿಲಿಂಡರ್​​ಗಳನ್ನು ಎತ್ತಿಕೊಂಡು ಹೋಗಿದ್ದಾರೆ.

ರಾಯಗಢ ಜಿಲ್ಲಾಧಿಕಾರಿ ಕಿಶನ್ ಜಾವಳೆ ಅವರು ನದಿ ದಂಡೆಗೆ ತೇಲಿಬರುವ ಯಾವುದೇ ಸಿಲಿಂಡರ್‌ಗಳನ್ನು ಸಾರ್ವಜನಿಕರು ಮುಟ್ಟಬಾರದು ಅಥವಾ ಮನೆಗೆ ತೆಗೆದುಕೊಂಡು ಹೋಗಬಾರದು ಎಂದು ವಿನಂತಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *