ರಾಯಚೂರಿನಲ್ಲಿ ತಿಪ್ಪೆ ಸೇರಿದ ಸರ್ಕಾರಿ ಆಸ್ಪತ್ರೆ ಔಷಧಿ: ಸ್ಥಳೀಯರ ಆಕ್ರೋಶ – Kannada News | Raichur Locals Shocked as Lakhs Worth of Unexpired Medicines Found in Waste

ರಾಯಚೂರು, ಫೆಬ್ರವರಿ 22: ಎಲ್​ಬಿಎಸ್ ನಗರದ ಸ್ಮಶಾನದ ಬಳಿಯ ಕಸದ ಗುಂಡಿಯಲ್ಲಿ ಅವಧಿ ಇರುವ ಸರ್ಕಾರಿ ಆಸ್ಪತ್ರೆಯ ಲಕ್ಷಾಂತರ ಮೌಲ್ಯದ ಔಷಧಿಗಳು ಪತ್ತೆಯಾಗಿರುವುದು ಸ್ಥಳೀಯರಲ್ಲಿ ಆಘಾತ ಮೂಡಿಸಿದೆ. ಜ್ವರದ ಸಿರಪ್, ಡ್ರೈ ಕಫ್ ಸಿರಪ್, ಹಸಿವು ಹೆಚ್ಚಿಸುವ ಸಿರಪ್, ಮಲ್ಟಿವಿಟಮಿನ್ ಸಿರಪ್, ಸಿರಿಂಜ್‌ಗಳು ಹಾಗೂ ಬ್ಯಾಕ್ಟೀರಿಯಾ ನಿರೋಧಕ ಮುಲಾಮು ಸೇರಿದಂತೆ ವಿವಿಧ ಬಗೆಯ ಔಷಧಿಗಳನ್ನು ಸಿಬ್ಬಂದಿ ತಿಪ್ಪೆಗೆ ಬಿಸಾಡಿದ್ದಾರೆ. ಈ ಔಷಧಿಗಳು 2026, 2027 ಮತ್ತು 2028ರವರೆಗೂ ಅವಧಿ ಹೊಂದಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಇರುವಾಗ ಮತ್ತು ಬಡ ರೋಗಿಗಳಿಗೆ ಚಿಕಿತ್ಸೆ ಸರಿಯಾಗಿ ಸಿಗದಿದ್ದಾಗ ಅವಧಿ ಇರುವ ಔಷಧಿಗಳನ್ನು ಬಿಸಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯನ್ನು ಬಯಲಿಗೆಳೆದ ಯುವಕರ ತಂಡ, ತಪ್ಪಿತಸ್ಥರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಗೌಡ ಪಾಟೀಲ್ ಅವರಿಗೆ ಮನವಿ ಮಾಡಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *