Headlines

ರಾಷ್ಟ್ರೀಯತೆಯ ಸಿನಿಮಾಗಳೇ ಭಾರತೀಯ ಚಿತ್ರರಂಗದ ಭವಿಷ್ಯ: ರಾಮ್ ಚರಣ್ – Kannada News | Ram Charan says Nation First Movies Are the Future of Indian Cinema

ಮೊದಲೆಲ್ಲ ತುಸು ವಿರಳವಾಗಿದ್ದ ದೇಶ ಭಕ್ತಿ ಸಾರುವ ಸಿನಿಮಾಗಳು (Cinema) ಇತ್ತೀಚೆಗೆ ಬಹಳ ಹೆಚ್ಚಾಗಿವೆ. ಅದರಲ್ಲೂ ದಕ್ಷಿಣದಲ್ಲಿ ದೇಶಪ್ರೇಮ ಸಾರುವ ಸಿನಿಮಾಗ. ಸೈನಿಕರ ಬಗೆಗಿನ ಸಿನಿಮಾಗಳು, ರಾಷ್ಟ್ರೀಯತೆ ಸಾರುವ ಸಿನಿಮಾಗಳು ಕಡಿಮೆ ಇದ್ದವು. ಆದರೆ ಇತ್ತೀಚೆಗೆ ದಕ್ಷಿಣದಲ್ಲೂ ಇಂಥಹಾ ಸಿನಿಮಾಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಬಿಡುಗಡೆ ಆದ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಸಹ ರಾಷ್ಟ್ರೀಯತೆ ಸಾರುವ, ದೇಶಪ್ರೇಮ ಸಾರುವ ಸಿನಿಮಾ ಆಗಿದ್ದು, ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಯಶಸ್ವಿ ಆಗಿವೆ. ಇತ್ತೀಚೆಗೆ ಮಾಧ್ಯಮವೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ರಾಮ್ ಚರಣ್, ಮುಂದಿನ ದಿನಗಳಲ್ಲಿ ‘ರಾಷ್ಟ್ರವೇ ಮೊದಲು’ ಎಂಬ ತತ್ವವಿರುವುದು ಅತ್ಯಗತ್ಯ ಎಂದು ಒತ್ತಿ ಹೇಳಿದರು.

ಚಲನಚಿತ್ರಗಳ ಬದಲಾಗುತ್ತಿರುವ ಸ್ವರೂಪದ ಬಗ್ಗೆ ಮಾತನಾಡಿದ ರಾಮ್ ಚರಣ್, ‘ದೇಶ ಮೊದಲು ಎಂದು ಬಿಂಬಿಸುವ, ಮತ್ತು ದೇಶ ಪ್ರೇಮ, ರಾಷ್ಟ್ರೀಯತೆಯ ಸುತ್ತ ಹೆಣೆದ ಕತೆಯುಳ್ಳ ಚಿತ್ರಗಳನ್ನು ಪ್ರೇಕ್ಷಕರು ಸ್ವಾಗತಿಸುತ್ತಿರುವ ಕುರಿತು ಚರಣ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ‘ಭವಿಷ್ಯದ ಸಿನಿಮಾಗಳಲ್ಲಿ ‘ಇಂಡಿಯಾ ಫಸ್ಟ್’ ಅಂತಹಾ ರಾಷ್ಟ್ರೀಯ ಸಮಗ್ರತೆಯ ವಿಷಯಗಳು ತುಂಬಾ ಮುಖ್ಯ. ಈ ರೀತಿಯ ಸಿನಿಮಾಗಳು ದೇಶವನ್ನು ಒಗ್ಗೂಡಿಸಿದೆ. ಜನರು ಸಹ ಅಂತಹ ಸಿನಿಮಾಗಳನ್ನು ನೋಡಲು ಬಯಸುತ್ತಿದ್ದಾರೆ ಎಂಬುದನ್ನು ಇಂಥಹಾ ಸಿನಿಮಾಗಳ ಬಾಕ್ಸ್ ಆಫೀಸ್ ನಂಬರ್​​ಗಳೇ ಹೇಳುತ್ತಿವೆ’ ಎಂದು ರಾಮ್ ಚರಣ್ ತಿಳಿಸಿದರು.

ರಾಮ್ ಚರಣ್ ಅವರ ‘ಪೆದ್ದಿ’ ಸಿನಿಮಾವು ಹಿಟ್ ಆಗಿದ್ದು, ಸಿನಿಮಾ ಬಿಡುಗಡೆಗೆ ಮುಂಚೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಆಗಿದ್ದ ರಾಮ್ ಚರಣ್, ತಮ್ಮ ‘ಪೆದ್ದಿ’ ಸಿನಿಮಾವು ಕೇಂದ್ರ ಸರ್ಕಾರದ ವಿಕಸಿತ್ ಭಾರತ್ ಯೋಜನೆಯನ್ನು ಧ್ವನಿಸುತ್ತದೆ ಎಂದು ಪ್ರಧಾನಿ ಅವರ ಬಳಿ ಹೇಳಿದ್ದರಂತೆ. ‘ಪೆದ್ದಿ’ ಸಿನಿಮಾವು, ಭಾರತದ ಗ್ರಾಮೀಣ ಭಾಗದಲ್ಲಿ ಅಡಗಿರುವ ಕ್ರೀಡಾ ಪ್ರತಿಭೆಗಳ ಬಗ್ಗೆ ಕತೆ ಹೊಂದಿದೆ. ಸಿನಿಮಾನಲ್ಲಿ ರಾಮ್ ಚರಣ್ ಕ್ರೀಡಾಪಟುವಾಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಒಟಿಟಿಗೆ ಎಂಟ್ರಿ ಕೊಡೋದು ಯಾವಾಗ?

‘ಪೆದ್ದಿ’ ಸಿನಿಮಾ ಬಿಡುಗಡೆ ಆದ ಬಳಿಕ ಸಿನಿಮಾನಲ್ಲಿ ಜಾನ್ಹವು ಕಪೂರ್ ಅವರನ್ನು ತೋರಿಸಿರುವ ರೀತಿಯ ಬಗ್ಗೆ ತೀವ್ರ ಟೀಕೆಗೆ ಗುರಿ ಆಗಿತ್ತು. ಬಳಿಕ ನಿರ್ದೇಶಕ ಬುಚ್ಚಿಬಾಬು ಸನಾ ಅವರು, ಕ್ಷಮೆ ಕೇಳಿ ಜಾನ್ಹವಿಯ ಕೆಲ ಅತಿಯಾದ ಗ್ಲಾಮರಸ್ ದೃಶ್ಯಗಳನ್ನು ತೆಗೆದರು. ವಿವಾದದ ಹೊರತಾಗಿಯೂ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಹಿಟ್ ಆಗಿದೆ. ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಈ ಸಿನಿಮಾ ಸುಮಾರು 350 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಸಿನಿಮಾನಲ್ಲಿ ರಾಮ್ ಚರಣ್, ಜಾನ್ಹವಿ ಕಪೂರ್ ಜೊತೆಗೆ ಶಿವರಾಜ್ ಕುಮಾರ್ ಸಹ ನಟಿಸಿದ್ದಾರೆ. ಸಿನಿಮಾ ಅನ್ನು ಬುಚ್ಚಿಬಾಬು ಸನಾ ನಿರ್ದೇಶಿಸಿದ್ದು, ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *