‘ಟಾಕ್ಸಿಕ್’ vs ‘ಧುರಂಧರ್ 2’ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ. ಇದರ ಜೊತೆಗೆ ದಕ್ಷಿಣ vs ಬಾಲಿವುಡ್, ಸ್ಯಾಂಡಲ್ವುಡ್ vs ಬಾಲಿವುಡ್ ಎಂಬಿತ್ಯಾದಿ ಚರ್ಚೆಗಳು ಕೂಡ ನಡೆಯುತ್ತಿವೆ. ಹೀಗಿರುವಾಗಲೇ ಯಶ್ ಅವರ ‘ಟಾಕ್ಸಿಕ್’ ಸಿನಿಮಾ (Toxic Movie) ಮ್ಯೂಸಿಕ್ ‘ಧುರಂಧರ್ 2’ ಚಿತ್ರಕ್ಕಿಂತ ಹೆಚ್ಚಿನ ಮೊತ್ತಕ್ಕೆ ಮಾರಾಟ ಆಗಿದೆ. ಇದು ತಂಡದ ಖುಷಿ ಹೆಚ್ಚಿಸಿದೆ.
‘ಟಾಕ್ಸಿಕ್’ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ಈ ಚಿತ್ರದ ಬಗ್ಗೆ ತಂಡ ಒಂದು ದೊಡ್ಡ ಅಪ್ಡೇಟ್ ಬಿಟ್ಟುಕೊಂಡಿದೆ. ರವಿ ಬಸ್ರೂರು ಜೊತೆ ಸಿನಿಮಾದಲ್ಲಿ ಒಟ್ಟೂ ಐದು ಮ್ಯೂಸಿಕ್ ಡೈರೆಕ್ಟರ್ಗಳು ಕೆಲಸ ಮಾಡಿದ್ದಾರೆ! ಸಿನಿಮಾದ ಮೆರುಗು ಹೆಚ್ಚಿಸಲು ಐವರು ಪ್ರತಿಭಾವಂತ ಸಂಗೀತ ನಿರ್ದೇಶಕರ ಸಮಾಗಮ ಆಗಿದೆ. ಈ ಚಿತ್ರದಲ್ಲಿ ಒಟ್ಟು 6 ಹಾಡುಗಳು ಇರಲಿವೆ.
ಇದನ್ನೂ ಓದಿ: ‘ಧುರಂಧರ್ 2 vs ಟಾಕ್ಸಿಕ್’ ಒಬ್ಬರ ಹೊಟ್ಟೆ ಇನ್ನೊಬ್ಬರು ಹೊಡೆದಂತೆ: ನಿರ್ದೇಶಕ ಬೇಸರ
ಈ ಕಾರಣದಿಂದ ಸಿನಿಮಾ ಹಾಡಿನ ಹಕ್ಕನ್ನು 42 ಕೋಟಿ ರೂಪಾಯಿಗೆ ಜೀ ಮ್ಯೂಸಿಕ್ ಖರೀದಿ ಮಾಡಿದೆ. ‘ಧುರಂಧರ್ 2’ ಹಾಡಿನ ಹಕ್ಕು 27 ಕೋಟಿ ರೂಪಾಯಿಗೆ ಮಾರಾಟ ಆಗಿದೆ. ಮೊದಲ ಭಾಗದ ಹಾಡುಗಳು ಸೂಪರ್ ಹಿಟ್ ಆದ ಬಳಿಕವೂ ಕೇವಲ 27 ಕೋಟಿ ರೂಪಾಯಿಗೆ ಇಷ್ಟು ಕಡಿಮೆ ಮೊತ್ತದಲ್ಲಿ ಹಾಡನ್ನು ಖರೀದಿ ಮಾಡಲಾಗಿದೆ. ಅಂದರೆ ‘ಟಾಕ್ಸಿಕ್’ ಚಿತ್ರಕ್ಕೆ ಹೆಚ್ಚುವರಿಯಾಗಿ 15 ಕೋಟಿ ರೂಪಾಯಿ ಸಿಕ್ಕಿದೆ.
#Dhurandhar2 Vs #Toxic
Dhurandhar 2 music rights have been acquired by T-Series for ₹27 crore.
On the other side, Toxic music rights are secured by Zee Music Company for a massive ₹42 crore deal.
That’s a ₹15 crore higher valuation for Toxic
Clear winner in the music market… pic.twitter.com/Uxf3FrgiFW— Ravi Chaudhary (@BURN4DESIRE1) February 22, 2026
‘ಟಾಕ್ಸಿಕ್’ನಲ್ಲಿ ಬಾಲಿವುಡ್ನ ಖ್ಯಾತ ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಅವರು 4 ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ, ತನಿಷ್ಕ್ ಬಾಗ್ಜಿ ಅವರು ಅರ್ಸ್ಲಾನ್ ನಿಜಾಮಿ ಮತ್ತು ಫಹೀಮ್ ಅಬ್ದುಲ್ಲಾ ಜೊತೆ ಸೇರಿ ಒಂದು ಹಾಡಿಗೆ ಸಂಗೀತ ನೀಡಿದ್ದಾರೆ. ಈ ಎಲ್ಲ ಪ್ರತಿಭಾವಂತರ ಸಂಗಮ ಆಗಿರುವುದರಿಂದ ‘ಟಾಕ್ಸಿಕ್’ ಸಿನಿಮಾದ ಹಾಡುಗಳ ಮೇಲೆ ಹೈಪ್ ಹೆಚ್ಚಾಗಿದೆ. ರವಿ ಬಸ್ರೂರು ಅವರು ಹಿನ್ನೆಲೆ ಸಂಗೀತದ ಜತೆಗೆ ಕೇವಲ ಒಂದು ಹಾಡಿಗೆ ಸಂಗೀತ ನೀಡಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.