ರಿಲೀಸ್​​ಗೂ ಮೊದಲೇ ಸೇಫ್ ಆದ ‘ಟಾಕ್ಸಿಕ್’; ಇನ್ನು ಬರೋದೆಲ್ಲ ಲಾಭ – Kannada News | Yash’s Toxic Movie Hits 600 Crore Pre Release Business: Producers Safe Before Release

ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ (Toxic Movie) ಸೂಪರ್ ಹಿಟ್ ಆಗುವ ಸೂಚನೆ ಸಿಕ್ಕಿದೆ. ಈ ಚಿತ್ರದ ಟೀಸರ್​​ ಹಾಗೂ ಹಾಡುಗಳು ಗಮನ ಸೆಳೆಯುತ್ತಿವೆ. ಈ ಮಧ್ಯೆ ‘ಟಾಕ್ಸಿಕ್’ ಸಿನಿಮಾದ ಪ್ರೀ ರಿಲೀಸ್ ಬಿಸ್ನೆಸ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಸಿನಿಮಾ ರಿಲೀಸ್​​​ಗೂ ಮೊದಲೇ ಸೇಫ್ ಆಗಿದೆ ಎಂಬ ಮಾಹಿತಿಯನ್ನು ನಿರ್ಮಾಪಕರೊಬ್ಬರು ನೀಡಿದ್ದಾರೆ. ಈ ವಿಷಯ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಇನ್ಮುಂದೆ ಬರೋದೆಲ್ಲ ಕೇವಲ ಲಾಭ ಎಂದು ಫ್ಯಾನ್ಸ್ ಹಿಗ್ಗುತ್ತಿದ್ದಾರೆ.

ದೊಡ್ಡ ಬಜೆಟ್ ಸಿನಿಮಾಗಳನ್ನ ನಿರ್ಮಾಣ ಮಾಡಿದಾಗ ನಿರ್ಮಾಪಕರು ಸೇಫ್ ಆಗೋದು ತುಂಬಾನೇ ಮುಖ್ಯ ಆಗುತ್ತದೆ. ಎಲ್ಲಾ ಸಿನಿಮಾ ನಿರ್ಮಾಪಕರಿಗೂ ಈ ಅವಕಾಶ ಸಿಗೋದಿಲ್ಲ. ಅದರಲ್ಲೂ ಚಿತ್ರದ ಬಜೆಟ್ 600 ಕೋಟಿ ರೂಪಾಯಿ ಎಂದರೆ ಲಾಭಕ್ಕಾಗಿ ಸಿನಿಮಾ ರಿಲೀಸ್​​ವರೆಗೆ ಕಾಯಲೇಬೇಕಾಗುತ್ತದೆ. ಆದರೆ, ಯಶ್ ಮಾಡಿದ ಪ್ಲ್ಯಾನ್​​ನಿಂದ ನಿರ್ಮಾಪಕರು ಮೊದಲೇ ಸೇಫ್ ಆಗಿದ್ದಾರೆ.

ಈ ಬಗ್ಗೆ ತಮಿಳು ಸಿನಿಮಾ ನಿರ್ಮಾಪಕ ಹಾಗೂ ಹಂಚಿಕೆದಾರ ಧನಂಜಯನ್ ಮಾತನಾಡಿದ್ದಾರೆ. ‘ಸಿನಿಮಾ ರಿಲೀಸ್​​​ಗೂ ಮೊದಲೇ 600 ಕೋಟಿ ರೂಪಾಯಿ ಪ್ರೀ-ರಿಲೀಸ್ ಬಿಸ್ನೆಸ್ ಮಾಡಲಾಗಿದೆ. ಇದು ಹೈಪ್​​ನಿಂದ ಅಲ್ಲ. ಸರಿಯಾದ ಗ್ರೌಂಡ್​ವರ್ಕ್ ಮಾಡಿದ ಕಾರಣಕ್ಕೆ’ ಎಂದು ಅವರು ಹೇಳಿದ್ದಾರೆ.

‘ನಯನತಾರಾ ಇದ್ದಾರೆ, ಟುವಿನೋ ಥಾಮಸ್ ಇದ್ದಾರೆ. ಮಾರ್ಕೆಟ್ ಮಾಡಲು ದೊಡ್ಡ ದೊಡ್ಡ ಹೆಸರು ಇದೆ. ಎಲ್ಲಾ ಹೆಸರಿನಿಂದಲೂ ಲಾಭ ಇದೆ. ನಯನತಾರಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆದವರು. ಅವರ ನಟನೆಯ ಜವಾನ್ ಹಿಟ್ ಆಗಿದೆ. ಕಾಂತಾರ ಬಳಿಕ ರುಕ್ಮಿಣಿ ವಸಂತ್ ದೇಶಾದ್ಯಂತ ಜನಪ್ರಿಯತೆ ಪಡೆದರು’ ಎಂದು ಅವರು ಹೇಳಿದ್ದಾರೆ. ಈ ಹೆಸರುಗಳೇ ಮಾರುಕಟ್ಟೆ ವಿಸ್ತರಿಸಲು ಸಹಕಾರಿ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲೇ ನಡೆಯಲಿದೆ ‘ಟಾಕ್ಸಿಕ್’ ಟ್ರೇಲರ್ ಲಾಂಚ್; ಆದರೆ, ಅಭಿಮಾನಿಗಳಿಗೆ ನಿರಾಸೆ

‘ಟಾಕ್ಸಿಕ್’ ಟೀಸರ್ ಮಾತ್ರ ರಿಲೀಸ್ ಆಗಿದೆ. ಆದಾಗ್ಯೂ ಚಿತ್ರದ ಒಟಿಟಿ ಹಕ್ಕು, ಟಿವಿ ಹಕ್ಕು, ಥಿಯೇಟ್ರಿಕಲ್ ಹಕ್ಕುಗಳು ಮಾರಾಟ ಆಗಿವೆ. ಇವುಗಳಿಂದಲೇ ಚಿತ್ರಕ್ಕೆ 600 ಕೋಟಿ ರೂಪಾಯಿ ಹರಿದು ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *