
ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಇತ್ತೀಚೆಗೆ ಥಿಯೇಟರ್ ಅಲ್ಲಿ ಬಿಡುಗಡೆ ಕಂಡಿತು. ಮಾರ್ಚ್ 19ರಂದ ಸಿನಿಮಾ ‘ಧುರಂಧರ್ 2’ ಎದುರು ರಿಈಸ್ ಆಗಿ, 100 ಕೋಟಿ ರೂಪಾಯಿ ಗಳಿಸಲು ಒದ್ದಾಡುತ್ತಿದೆ. ಮಾಸ್ ಆ್ಯಕ್ಷನ್ ಎಂಟರ್ಟೈನರ್ ಆಗಿರುವ ಈ ಚಿತ್ರದಲ್ಲಿ ಶ್ರೀಲೀಲಾ ನಾಯಕಿ. ರಾಶಿ ಖನ್ನಾ ಕೂಡ ಮತ್ತೊಂದು ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಕಾಲಿವುಡ್ ನಟ ಪಾರ್ಥಿಬನ್ ಈ ಚಿತ್ರದಲ್ಲಿ ಖಳನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರ ರಿಲೀಸ್ ಆದ ಕೆಲವೇ ವಾರದಲ್ಲಿ ಒಟಿಟಿಗೆ ಬರುತ್ತಿದೆ.
ಪವನ್ ಕಲ್ಯಾಣ್ ಅವರ ‘ಉಸ್ತಾದ್ ಭಗತ್ ಸಿಂಗ್’ ಜನರಿಗೆ ಇಷ್ಟ ಆಗಿಲ್ಲ. ಹರೀಶ್ ಶಂಕರ್ ಅವರ ಡೈಲಾಗ್ಸ್, ಶ್ರೀಲೀಲಾ ಮತ್ತು ರಾಶಿ ಖನ್ನಾ ಅವರ ಗ್ಲಾಮರ್ ಕೆಲಸಕ್ಕೆ ಬರಲಿಲ್ಲ. ಚಿತ್ರದಲ್ಲಿನ ಕೆಲ ಸಕಾರಾತ್ಮಕ ಅಂಶಗಳ ಹೊರತಾಗಿಯೂ, ಉಸ್ತಾದ್ ಭಗತ್ ಸಿಂಗ್ ಅವರ ಚಿತ್ರ ಕಥೆ ಮತ್ತು ನಿರೂಪಣೆಯ ವಿಷಯದಲ್ಲಿ ಸ್ವಲ್ಪ ದುರ್ಬಲವಾಗಿ ಕಾಣುತ್ತದೆ. ಇದರ ಜೊತೆಗೆ, ‘ಧುರಂಧರ್ 2’ ಬಿಡುಗಡೆಯು ಉಸ್ತಾದ್‌ಗೆ ಮೈನಸ್ ಆಗಿ ಪರಿಣಮಿಸಿದೆ. ಇದರಿಂದಾಗಿ, ಪವನ್ ಕಲ್ಯಾಣ್ ಅವರ ಚಿತ್ರವು ಸಾಧಾರಣ ಕಲೆಕ್ಷನ್‌ಗಳನ್ನು ಮಾತ್ರ ಪಡೆಯುತ್ತಿದೆ. ಈಗ ಚಿತ್ರದ OTT ಸ್ಟ್ರೀಮಿಂಗ್ ಬಗ್ಗೆ ಒಂದು ಕುತೂಹಲಕಾರಿ ಸುದ್ದಿ ಕೇಳಿಬರುತ್ತಿದೆ.
ಇದನ್ನೂ ಓದಿ: ‘ಧುರಂಧರ್ 2’ ವಿರುದ್ಧ ‘ಉಸ್ತಾದ್ ಭಗತ್ ಸಿಂಗ್’ ಬಾಕ್ಸ್ ಆಫೀಸ್ ಹರಸಾಹಸ
‘ಉಸ್ತಾದ್ ಭಗತ್ ಸಿಂಗ್’ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳು ಥಿಯೇಟ್ರಿಕಲ್ ಬಿಡುಗಡೆಗೂ ಮೊದಲೇ ಮಾರಾಟವಾಗಿವೆ. ಜನಪ್ರಿಯ OTT ಕಂಪನಿ ನೆಟ್‌ಫ್ಲಿಕ್ಸ್ ಈ ಚಿತ್ರವನ್ನು ಭಾರಿ ಬೆಲೆಗೆ ಖರೀದಿಸಿದೆ. ಚಿತ್ರದ ನಿರ್ಮಾಪಕ ನವೀನ್ ಎರ್ನೇನಿ ಪತ್ರಿಕಾಗೋಷ್ಠಿಯಲ್ಲಿ, ಉಸ್ತಾದ್ ಚಿತ್ರವು ಥಿಯೇಟ್ರಿಕಲ್ ಬಿಡುಗಡೆಯಾದ ಸುಮಾರು 5 ವಾರಗಳ ಅಂತರದಲ್ಲಿ OTT ನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದ್ದರು. ಆದರೆ, ಅದಕ್ಕೂ ಮೊದಲೇ ಅಂದರೆ ಏಪ್ರಿಲ್ 16ರಂದು ಸಿನಿಮಾ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ ಎನ್ನಲಾಗಿದೆ.
#UstaadBhagatSingh — APR 16th On NETFLIX
#UBSOnNetflix#UstaadBhagatSinghOnNetflix pic.twitter.com/sc3Uy7qeUU — OTT STREAM UPDATES (@newottupdates) March 26, 2026
‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ 65 ಕೋಟಿ ರೂಪಾಯಿ ಗಳಿಸಿದೆ. ದಿನ ಕಳೆದಂತೆ ಚಿತ್ರವು ಕಡಿಮೆ ಕಲೆಕ್ಷನ್ ಮಾಡುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.