ಕನ್ನಡದ ನಟ ಶಿವರಾಜ್ಕುಮಾರ್ ಅವರು (Shiva Rajkumar) ವಿವಿಧ ರೀತಿಯ ಪಾತ್ರಗಳ ಮೂಲಕ ಜನರ ಗಮನ ಸೆಳೆದಿದ್ದಾರೆ. ಓಂ ಚಿತ್ರದಲ್ಲಿ ಲಾಂಗ್ ಹಿಡಿದು ಮಿಂಚಿದ್ದರು. ಆ ಬಳಿಕ ಅವರಿಗೂ ಮಚ್ಚಿಗೂ ಒಂದು ನಂಟು ಬೆಳೆಯಿತು. ಈ ರೀತಿಯ ಪಾತ್ರಗಳು ಶಿವಣ್ಣಗೆ ಹೆಚ್ಚು ಹೊಂದುತ್ತವೆ. ಶಿವಣ್ಣ ಓರ್ವ ಅದ್ಭುತ ಡ್ಯಾನ್ಸರ್ ಕೂಡ ಹೌದು. ಇತ್ತೀಚೆಗೆ ಅವರು ಡ್ಯಾನ್ಸ್ ಮಾಡಿದ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದ ಬಳಿಕ ಅನೇಕರು ‘ರೆಹಮಾನ್ ಡಕಾಯಿತ್ ಪಾತ್ರದಲ್ಲಿ ನೀವೇ ನಟಿಸಬೇಕಿತ್ತು’ ಎಂದು ಕಮೆಂಟ್ ಮಾಡಿದ್ದಾರೆ.
‘ಧುರಂಧರ್’ ಚಿತ್ರದಲ್ಲಿ ರೆಹಮಾನ್ ಡಕಾಯಿತ್ ಪಾತ್ರದಲ್ಲಿ ಅಕ್ಷಯ್ ಖನ್ನಾ ನಟಿಸಿದ್ದಾರೆ. ಈ ಪಾತ್ರ ಸಾಕಷ್ಟು ಗಮನ ಸೆಳೆದಿದೆ. ಅಕ್ಷಯ್ ಖನ್ನಾ ಅವರ ಡ್ಯಾನ್ಸ್ ವಿಡಿಯೋ ಅಂತೂ ಮನೆ ಮಾತಾಯಿತು. ಹೋದಲ್ಲಿ ಬಂದಲ್ಲಿ, ಈ ಹಾಡಿನ ಬಗ್ಗೆ ಎಲ್ಲರೂ ಮಾತನಾಡಿದರು. ಇನ್ಸ್ಟಾಗ್ರಾಮ್ ರೀಲ್ಸ್ನಲ್ಲಿ ಇದರದ್ದೇ ಚರ್ಚೆ ನಡೆಯಿತು. ಈಗ ಈ ಹಾಡಿಗೆ ಶಿವಣ್ಣ ಡ್ಯಾನ್ಸ್ ಮಾಡಿದ್ದಾರೆ.
ಕುಮಾರ್ ಗೌಡ ಎಂಬುವವರು ಈ ವಿಡಿಯೋನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಅವರು ‘ನನ್ನ ಜನ್ಮದಿನದ ಸಂಭ್ರಮಾಚರಣೆ’ ಎಂದು ಕ್ಯಾಪ್ಶನ್ ನೀಡಿದ್ದಾರೆ. ಕುಮಾರ್ ಜನ್ಮದಿನಕ್ಕೆ ಶಿವಣ್ಣ ಕೂಡ ಬಂದಿದ್ದರು. ಈ ವೇಳೆ ‘ಧುರಂಧರ್’ ಚಿತ್ರದಲ್ಲಿ ಅಕ್ಷಯ್ ಖನ್ನಾ ಡ್ಯಾನ್ಸ್ ಮಾಡಿದ ಹಾಡನ್ನು ಪ್ಲೇ ಮಾಡಲಾಗಿದೆ. ಇದಕ್ಕೆ ಶಿವಣ್ಣ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ.
ಇದನ್ನೂ ಓದಿ: ಹಂಪಿ ಉತ್ಸವದಲ್ಲಿ ಡ್ಯಾನ್ಸ್ ಮಾಡಿ ರಂಜಿಸಿದ ಶಿವರಾಜ್ಕುಮಾರ್
ಈ ವಿಡಿಯೋ ನೋಡಿದ ಬಳಿಕ, ‘ಧುರಂಧರ್’ ಚಿತ್ರದಲ್ಲಿ ರೆಹಮಾನ್ ಡಕಾಯಿತ್ ಪಾತ್ರವನ್ನು ಶಿವಣ್ಣ ಮಾಡಬೇಕಿತ್ತು ಎಂದು ಅನೇಕರು ಹೇಳಿದ್ದಾರೆ. ಶಿವರಾಜ್ಕುಮಾರ್ ಅವರು ಕನ್ನಡ, ತೆಲುಗು, ತಮಿಳು ಮೊದಲಾದ ಭಾಷೆಯಲ್ಲಿ ಚಿರಪರಿಚಿತರು. ಅವರು ರೆಹಮಾನ್ ಡಕಾಯಿತ್ ಪಾತ್ರದಲ್ಲಿ ನಟಿಸಿದ್ದರೆ, ದಕ್ಷಿಣ ಭಾರತದಲ್ಲಿ ‘ಧುರಂಧರ್’ ಸಿನಿಮಾ ಮತ್ತಷ್ಟು ಕಲೆಕ್ಷನ್ ಮಾಡಲು ಸಹಕಾರಿ ಆಗುತ್ತಿತ್ತು. ಅವರಿಗೆ ಈಗ ತೆಲುಗು, ತಮಿಳಿನಿಂದ ಆಫರ್ ಬರುತ್ತಿವೆ. ಶೀಘ್ರವೇ ಅವರು ಬಾಲಿವುಡ್ಗೂ ಎಂಟ್ರಿ ಕೊಡಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
