ರೇಣುಕಾ ಸ್ವಾಮಿ ತಾಯಿ ಪ್ರತಿಕೂಲ ಸಾಕ್ಷಿ? ಕೋರ್ಟ್​​ನಲ್ಲಿ ನಡೆದಿದ್ದೇನು? – Kannada News | Renuka Swamy case: SSP wants to question Renuka Swamy’s mother

ರೇಣುಕಾ ಸ್ವಾಮಿ (Renuka Swamy) ಪ್ರಕರಣದ ವಿಚಾರಣೆಯಲ್ಲಿ ಕಳೆದ ಕೆಲ ದಿನಗಳಿಂದ ಕೆ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ದರ್ಶನ್ ಆಪ್ತ ಪ್ರದೋಶ್, ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಅರ್ಜಿ ಹಾಕಿದ್ದು, ಅರ್ಜಿಯ ವಿಚಾರಣೆ ನಡೆದಿದ್ದು, ಆಗಸ್ಟ್ 18ಕ್ಕೆ ಪ್ರದೋಶ್, ತಮ್ಮ ಹೇಳಿಕೆ ದಾಖಲು ಮಾಡಲಿದ್ದಾರೆ. ಇಂದು (ಆಗಸ್ಟ್ 12) ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ಪರ ವಕೀಲರು ರೇಣುಕಾ ಸ್ವಾಮಿ ಅವರ ತಾಯಿಯನ್ನು ಪಾಟಿ ಸವಾಲು ಮಾಡಲು ಕೋರಿ ಅರ್ಜಿ ಹಾಕಿದ್ದಾರೆ.

ಪ್ರಾಸಿಕ್ಯೂಷನ್ ಪರ ಎಸ್ ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿ, ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಪಾಟೀಸವಾಲು ಕೋರಿ ಅರ್ಜಿ ಸಲ್ಲಿಸಿದ್ದಾರೆ. ತಾಯಿಯ ಮೊಬೈಲ್ ಗೆ ರೇಣುಕಾಸ್ವಾಮಿ ಕರೆ ಮಾಡಿದ್ದರು. ಜೂನ್ 08, 2024 ರಂದು 27 ಸೆಕಂಡ್, 47 ಸೆಕಂಡ್ ಗಳ ಎರಡು ಕರೆ ಬಂದಿವೆ. ಷೆಡ್ ನಿಂದ ರೇಣುಕಾಸ್ವಾಮಿ ಕರೆ ಮಾಡಿದ ದಾಖಲೆಗಳಿವೆ. ಆದರೆ ಆಕೆ ಕರೆ ಬಂದಿಲ್ಲವೆಂದು ಹೇಳಿಕೆ ನೀಡಿದ್ದಾರೆ. ದಾಖಲೆಗಳಿಗೆ ವಿರುದ್ಧವಾಗಿ ಹೇಳಿಕೆ ನೀಡಿರುವುದರಿಂದ ಅರ್ಜಿ ಸಲ್ಲಿಸಲಾಗಿದೆ.

ರತ್ನಪ್ರಭಾ ಅವರನ್ನು ಪ್ರತಿಕೂಲ ಸಾಕ್ಷಿಯನ್ನಾಗಿ ಪರಿಗಣಿಸಬೇಕು ಎಂದು ಪ್ರಾಸಿಕ್ಯೂಷನ್ ಮನವಿ ಮಾಡಿದ್ದು, ಪ್ರತಿಕೂಲ ಸಾಕ್ಷಿಯಾಗಿಸುವ ಅರ್ಜಿ ಪರಿಗಣಿಸಲು ಎಸ್ ಪಿಪಿ ಮನವಿ ಮಾಡಿದ್ದಾರೆ. ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ವಾದ ಮಂಡಿಸಿ, ರೇಣುಕಾಸ್ವಾಮಿ ತಾಯಿ ಪ್ರತಿಕೂಲ ಸಾಕ್ಷಿಯಾಗಿಲ್ಲ. ಮುಖ್ಯ ವಿಚಾರಣೆಯಲ್ಲಿ ಪ್ರಾಸಿಕ್ಯೂಷನ್ ಪರ ಹೇಳಿಕೆ ನೀಡಿದ್ದಾರೆ. ಪಾಟೀಸವಾಲಿನಲ್ಲಿ ವಕೀಲರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಮರು ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಯಾವುದೇ ಸ್ಪಷ್ಟನೆ ಕೇಳಿಲ್ಲ, ಹೀಗಾಗಿ ಪಾಟೀಸವಾಲಿಗೆ ಅವಕಾಶ ನೀಡದಂತೆ ದರ್ಶನ್ ಪರ ವಕೀಲರ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ರೇಣುಕಾ ಸ್ವಾಮಿ ಪ್ರಕರಣ: ಆರೋಪಿ ಪವನ್ ವಕೀಲರಿಗೆ ದಂಡ

ವಾದ ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಇದು ಯಾರೋ ಅಪರಿಚಿತರು ನೀಡಿದ ಹೇಳಿಕೆಯಲ್ಲ, ಮೃತನ ತಾಯಿಯ ಹೇಳಿಕೆಯನ್ನು ಪ್ರತಿಕೂಲವೆಂದು ಪರಿಗಣಿಸಬೇಕೇ ? ಎಂದು ಪ್ರಶ್ನೆ ಮಾಡಿದ್ದು, ಅರ್ಜಿ ಸಂಬಂಧ ಆದೇಶವನ್ನು ಕಾಯ್ದಿರಿಸಿದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕಷ್ಟು ಬೆಳವಣಿಗೆಗಳು ನ್ಯಾಯಾಲಯದಲ್ಲಿ ನಡೆಯುತ್ತಿವೆ. ಮುಂದಿನ ಕೆಲ ಸಾಕ್ಷಿಗಳ ವಿಚಾರಣೆ ವೇಳೆ ಖುದ್ದು ನಟ ದರ್ಶನ್ ನ್ಯಾಯಾಲಯದಲಿ ಹಾಜರಿರಬೇಕು, ಅದಕ್ಕೆ ಅನುಮತಿ ನೀಡಬೇಕು ಎಂದು ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ನಡೆಯಲಿದೆ. ದರ್ಶನ್ ಆಪ್ತ ಪ್ರದೋಶ್, ಮಾಫಿ ಸಾಕ್ಷಿ (ಅಪ್ರೂವರ್) ಆಗಿದ್ದು ಆಗಸ್ಟ್ 18 ತಮ್ಮ ಹೇಳಿಕೆ ದಾಖಲಿಸಲಿದ್ದಾರೆ. 12ನೇ ಆರೋಪಿಯೊಬ್ಬಾತ ಜಾಮೀನಿಗೆ ಅರ್ಜಿ ಹಾಕಿದ್ದು, ಶೀಘ್ರವೇ ಅದರ ವಿಚಾರಣೆಯೂ ನಡೆಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *