ಗದಗ, (ಫೆಬ್ರವರಿ 20): ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ 101 ದೇವಸ್ಥಾನ ಹಾಗೂ 101 ಬಾವಿಗಳಿವೆ. ಇಂತಹ ಲಕ್ಕುಂಡಿಯಲ್ಲಿ ಇತ್ತೀಚೆಗೆ ನಿಧಿಸಿಕ್ಕ ಬೆನ್ನಲ್ಲೇ, ದೇಶ ಹಾಗೂ ವಿದೇಶದ ಗಮನ ಸೆಳೆದಿದೆ. ಅದರಲ್ಲೂ ನಿಧಿಗಳ್ಳರ ಕಣ್ಣು ಲಕ್ಕುಂಡಿ ಮೇಲೆ ಬಿದ್ದಿದ್ದು, ಎಲ್ಲೊಂದರಲ್ಲಿ ಹಗೆದು ನಿಧಿ ಹುಡುಕಾಡಿದ್ದಾರೆ. ಇನ್ನು ಇದನ್ನೇ ಬಂಡವಾಳ ಮಾಡಿಕೊಂಡ ಮೌಲ್ವಿಯೋರ್ವ, ಲಕ್ಕುಂಡಿ ನಿಧಿ (Lakkundi Gold Treasure Fraud) ಹುಡುಕಿ ಕೊಡುವುದಾಗಿ ಮೋಸ ಮಾಡಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂದ ಉತ್ತರಾಖಂಡ ರಾಜ್ಯದ ಕಾಶಿಪುರದ ಹಜರತ್ ಮೌಲ್ವಿಯನ್ನು ಬಂಧಿಸಲಾಗಿದೆ. ಲಕ್ಕುಂಡಿಯ ಸಣ್ಣಬಸಪ್ಪ, ದೊಡ್ಡಬಸಪ್ಪ ಎಂಬುವರ ಜಮೀನಿನಲ್ಲಿ ನಿಧಿ ಪತ್ತೆಯಾಗಿದೆ ಅಂತ ಸುದ್ದಿ ಹರಡಿದ್ದು, ಬಳಿಕ ಲಕ್ಕುಂಡಿ ಗ್ರಾಮದ ಸಹೋದರರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಿಧಿ ಹುಡುಕಿ ಕೊಡುವ ಜಾಲದ ಮೋಸದಾಟ ಬಯಲಿಗೆ ಬಂದಿದೆ.
