ರೈಲ್ವೆ ನಿಲ್ದಾಣದಲ್ಲಿ ದಿಕ್ಕೇ ತೋಚದೆ ನಿಂತ ಯುವತಿ, ಸಹಾಯಕ್ಕೆ ಬಂದ ಯೋಧ

ರೈಲ್ವೆ ನಿಲ್ದಾಣದಲ್ಲಿ ದಿಕ್ಕೇ ತೋಚದೆ ನಿಂತ ಯುವತಿ, ಸಹಾಯಕ್ಕೆ ಬಂದ ಯೋಧ

ಅಪಾಯಕಾರಿ ಗಡಿಯಲ್ಲಿ ನಿಂತು ಶತ್ರುಗಳ ಹುಟ್ಟಡಗಿಸಿ, ನಮ್ಮನ್ನು ರಕ್ಷಣೆ ಮಾಡುವುದರಿಂದ ಹಿಡಿದು, ಯಾರು ಏನೇ ಅಪಾಯದಲ್ಲಿದ್ದರೂ ಅವರನ್ನು ಕಾಪಾಡಲು ಕೂಡ ಸೈನಿಕ(Soldier)ರು ಸದಾ ಸಿದ್ಧರಿರುತ್ತಾರೆ. ಇತ್ತೀಚೆಗೆ ಮಥುರಾದಿಂದ ದೆಹಲಿಗೆ ಪ್ರಯಾಣಿಸುವಾಗ ಒತ್ತಡದ ಪರಿಸ್ಥಿತಿಯಲ್ಲಿ ಸಿಲುಕಿದ ರೂಪ್ ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ಮಾಡಿದ ವೀಡಿಯೊ ಮತ್ತೊಂದು ಉದಾಹರಣೆಯಾಗಿದೆ.

ಆಕೆಯ ಫೋನ್ ಬ್ಯಾಟರಿ ಡೆಡ್ ಆಗಿತ್ತು. ಪೋಷಕರು ಕಾಯುತ್ತಿದ್ದರು ಆದರೆ ಅವರೆಲ್ಲಿದ್ದಾರೆ ಎಂದು ಹುಡುಕಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ, ಆಗ ಸೈನಿಕರೊಬ್ಬರು ತಮ್ಮಲ್ಲಿರುವ ಪವರ್ ಬ್ಯಾಂಕ್ ಕೊಟ್ಟು ಮೊಬೈಲ್ ಚಾರ್ಜ್​ ಮಾಡಲು ಸಹಾಯ ಮಾಡಿದರಲ್ಲದೆ, ಅವರು ಪೋಷಕರ ಬಳಿ ಸೇರುವಂತೆ ಮಾಡಿದ್ದಾರೆ ಎಂದು ಆಕೆ ಬರೆದುಕೊಂಡಿದ್ದಾರೆ.

ಮಥುರಾ ಜಂಕ್ಷನ್‌ನಲ್ಲಿ, ಹೋಳಿ ಮುಗಿದ ನಂತರ ಬ್ರಜ್‌ನಿಂದ ಹಿಂತಿರುಗುವಾಗ, ದೆಹಲಿಗೆ ಹೋಗುವ ತಮ್ಮ ರೈಲು ರಾತ್ರಿ 8.45 ಕ್ಕೆ ಇತ್ತು.ನನ್ನ ಫೋನ್‌ನಲ್ಲಿ ಶೇಕಡಾ ಎರಡರಷ್ಟು ಚಾರ್ಜ್ ಇತ್ತು, ನನ್ನ ಪವರ್ ಬ್ಯಾಂಕ್ ನೀರಿನಲ್ಲಿ ಬಿದ್ದಿತ್ತು. ತನ್ನ ಲೈವ್ ಲೊಕೇಷನ್ ಪೋಷಕರಿಗೆ ಕಳುಹಿಸಲು ನನಗೆ ಕೇವಲ 5 ನಿಮಿಷಗಳ ಚಾರ್ಜಿಂಗ್ ಬೇಕಾಯಿತು ಎಂದು ರೂಪ್ ಹೇಳಿದ್ದಾರೆ.

ಅಲ್ಲಿರುವ ಅಂಗಡಿ ಮುಂಗಟ್ಟುಗಳ ಬಳಿ ಹೋಗಿ ಚಾರ್ಜ್​ ಮಾಡಿಕೊಡಿ ಎಂದು ಕೇಳಿದ್ದರೂ ಯಾರೂ ಅವಕಾಶ ಮಾಡಿಕೊಟ್ಟಿರಲಿಲ್ಲ. ಪ್ಲಾಟ್‌ಫಾರ್ಮ್ 6 ರ ಪಕ್ಕದಲ್ಲಿ ಮಿಲಿಟರಿ ರೈಲು ನಿಂತಿರುವುದನ್ನು ನೋಡಿ ಏನೋ ನೆಮ್ಮದಿ ಸಿಕ್ಕಂತಾಯಿತು. ಅಲ್ಲಿ ಯೋಧರೊಬ್ಬರ ಬಳಿ ತನ್ನ ಕಷ್ಟ ಹೇಳಿಕೊಂಡಾಗ ಅವರು ಕೂಡಲೇ ಪವರ್ ಬ್ಯಾಂಕ್ ತಂದುಕೊಟ್ಟರು, ಯಾರೂ ಸಹಾಯಕ್ಕೆ ಬಾರದಿದ್ದಾಗ ಅವರು ಬಂದರು ಎಂದು ಹೇಳಿಕೊಂಡಿದ್ದಾರೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *