ಲಂಚದ ಬೇಡಿಕೆಯಿಟ್ಟ ಟಿಕೆಟ್​ ಇನ್​ಸ್ಪೆಕ್ಟರ್ ಮೈಚಳಿ ಬಿಡಿಸಿದ ಪ್ರಯಾಣಿಕ – Kannada News | Passenger and conductor assault ticket inspector with slippers know why

ಹೈದರಾಬಾದ್‌, ಮೇ 1: ರಾಯಕೊಡೆಯಲ್ಲಿ ಜನರು ಟಿಕೆಟ್ ಇನ್ಸ್‌ಪೆಕ್ಟರ್‌ಗೆ ಚಪ್ಪಲಿಯಿಂದ ಹೊಡೆದ ನಂತರ ಉದ್ವಿಗ್ನತೆ ಉಂಟಾಗಿದೆ. ಹೈದರಾಬಾದ್‌ನಿಂದ (Hyderabad) ನಾರಾಯಣಖೇಡ್‌ಗೆ ಪ್ರಯಾಣಿಸುತ್ತಿದ್ದ ಆರ್‌ಟಿಸಿ ಬಸ್‌ ತುಂಬಿ ತುಳುಕುತ್ತಿತ್ತು. ತೆಲಂಗಾಣದ ರಾಯಕೊಡೆಯಲ್ಲಿ ಟಿಕೆಟ್ ಸ್ಕ್ವಾಡ್ ತಪಾಸಣೆಗಾಗಿ ಬಸ್ ಅನ್ನು ಮಧ್ಯದಲ್ಲಿ ನಿಲ್ಲಿಸಲಾಗಿತ್ತು. ತಪಾಸಣೆಯ ಸಮಯದಲ್ಲಿ ಒಬ್ಬ ಪ್ರಯಾಣಿಕನ ಬಳಿ ಟಿಕೆಟ್ ಇರಲಿಲ್ಲ. ಹೀಗಾಗಿ ಟಿಕೆಟ್ ಇನ್​ಸ್ಪೆಕ್ಟರ್ ಅವನಿಗೆ ದಂಡ ವಿಧಿಸಿ 20,000 ರೂಪಾಯಿ ಲಂಚಕ್ಕೆ ಒತ್ತಾಯಿಸಿದ್ದರು. ಸಾಮಾನ್ಯವಾಗಿ ವಿಧಿಸುವ 500 ರೂ. ಬದಲಾಗಿ 2,000 ರೂ. ನೀಡಲು ಅವರು ಒತ್ತಾಯಿಸಿದ್ದರು.

ಈ ಘಟನೆಯಿಂದ ಆಕ್ರೋಶಗೊಂಡ ಪ್ರಯಾಣಿಕ ಟಿಕೆಟ್ ಇನ್ಸ್‌ಪೆಕ್ಟರ್‌ಗೆ ಚಪ್ಪಲಿಯಿಂದ ಹೊಡೆಯಲು ಪ್ರಾರಂಭಿಸಿದನು, ಮತ್ತು ಇದರ ನಂತರ, ಬಸ್ ಕಂಡಕ್ಟರ್ ಕೂಡ ಅವನೊಂದಿಗೆ ಸೇರಿಕೊಂಡರು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *