ಬಿಗ್ಬಾಸ್ ಕನ್ನಡ (Bigg Boss Kannada) ಹೊಸ ಸೀಸನ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಸುದೀಪ್ ಅವರ ಪ್ರೊಮೊ ಒಂದು ಬಿಡುಗಡೆ ಆಗಿದ್ದು, ಶೀಘ್ರವೇ ದಿನಾಂಕ ಘೋಷಣೆ ಆಗಲಿದೆ. ಈ ಬಾರಿ ಸಾಮಾನ್ಯರು ಸಹ ಬಿಗ್ಬಾಸ್ನಲ್ಲಿ ಸ್ಪರ್ಧಿಗಳಾಗಿ ಭಾಗವಹಿಸುವ ಅವಕಾಶ ಪಡೆದಿದ್ದಾರೆ. ಮೂಲಗಳ ಪ್ರಕಾರ ಈಗಾಗಲೇ ಸ್ಪರ್ಧಿಗಳ ಅಂತಿಮ ಪಟ್ಟಿಯೂ ರೆಡಿ ಆಗಿದೆ. ಕೆಲವೇ ದಿನಗಳಲ್ಲಿ ಬಿಗ್ಬಾಸ್ ಸೀಸನ್ 13ರ ಗ್ರ್ಯಾಂಡ್ ಓಪನಿಂಗ್ ನಡೆಯಲಿದೆ. ಈ ಅದ್ಧೂರಿ ಗ್ರ್ಯಾಂಡ್ ಓಪನಿಂಗ್ ಅನ್ನು ನೇರವಾಗಿ ಅವಕಾಶ ಇದೀಗ ನಿಮ್ಮದಾಗಲಿದೆ.
ಸುದೀಪ್ ಅವರು ಬಿಗ್ಬಾಸ್ ಸ್ಪರ್ಧಿಗಳನ್ನು ಪರಿಚಯಿಸಿ, ಅವರನ್ನು ಬಿಗ್ಬಾಸ್ ಮನೆಯೊಳಗೆ ಕಳಿಸುವ ಸಂದರ್ಭವನ್ನು ಲೈವ್ ಆಗಿ ನೋಡುವ ಅವಕಾಶವನ್ನು ಸಾರ್ವಜನಿಕರು ಪಡೆಯಬಹುದಾಗಿದೆ. ಅವಕಾಶ ಪಡೆಯಲು ನೀವು ಲಾಲ್ಬಾಗ್ ಫ್ಲವರ್ ಶೋನಲ್ಲಿ ಭಾಗವಹಿಸಬೇಕಿದೆ. ಲಾಲ್ಬಾಗ್ ಫ್ಲವರ್ ಶೋ ಇದೀಗ ಆರಂಭವಾಗಿದೆ. ಈ ಲಾಲ್ಬಾಗ್ ಫ್ಲವರ್ ಶೋನಲ್ಲಿ ‘ಬಿಗ್ಬಾಸ್ ಅಗ್ನಿಪರೀಕ್ಷೆ ಎಕ್ಸ್ಪೀರಿಯನ್ಸ್ ಜೋನ್’ ಒಂದನ್ನು ಬಿಗ್ಬಾಸ್ ತಂಡ ಮಾಡಿದೆ. ಇಲ್ಲಿ ಬಿಗ್ಬಾಸ್ನ ಐಕಾನಿಕ್ ಚೇರ್ ಅನ್ನು ಪ್ರದರ್ಶನಕ್ಕೆ ಇಡಲಾಗಿದೆ. ಜೊತೆಗೆ ಬಿಗ್ಬಾಸ್ ಸೆಲ್ಫಿ ಜೋನ್ ಸಹ ಇರಲಿದೆ.
ಈ ಬಿಗ್ಬಾಸ್ ಎಕ್ಸ್ಪೀರಿಯನ್ಸ್ ಝೋನ್ಗೆ ಹೋಗಿ ಅಲ್ಲಿ ಸೆಲ್ಫೀ ಕ್ಲಿಕ್ಕಿಸಿಕೊಂಡು ಅದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಬೇಕಿದೆ. ಹೀಗೆ ಹಂಚಿಕೊಂಡ ಫೋಟೊವನ್ನು ಕಲರ್ಸ್ ಕನ್ನಡದ ಜೊತೆಗೆ ಟ್ಯಾಗ್ ಮಾಡಬೇಕಿದೆ, ಚಿತ್ರಕ್ಕೆ ‘ಬಿಬಿಕೆಅಗ್ನಿಪರೀಕ್ಷೆ’ (#BBKAGNIPARIKSHE) ಹ್ಯಾಷ್ ಟ್ಯಾಗ್ ಅನ್ನು ಹಾಕುವುದು ಮರೆಯುವಂತಿಲ್ಲ. ಈ ಫೋಟೊಗಳು ಪಬ್ಲಿಕ್ ಆಗಿರುವುದು ಕಡ್ಡಾಯ. ಹೀಗೆ ಮಾಡಿದಲ್ಲಿ, ಕಲರ್ಸ್ ವಾಹಿನಿ ಅಥವಾ ಬಿಗ್ಬಾಸ್ ಆಯೋಜಕರು ಆಯ್ದ ಕೆಲವರನ್ನು ಬಿಗ್ಬಾಸ್ ಕನ್ನಡ ವೀಕೆಂಡ್ ಎಪಿಸೋಡ್ ಅನ್ನು ಲೈವ್ ಆಗಿ ನೋಡಲು ಆಹ್ವಾನವನ್ನು ಕಳಿಸಲಿದ್ದಾರೆ. ಜೊತೆಗೆ ಬಿಗ್ಬಾಸ್ ಬಹುಮಾನಗಳನ್ನು ಗೆಲ್ಲುವ ಅವಕಾಶ ಸಹ ಲಭಿಸಲಿದೆ.
ಇದನ್ನೂ ಓದಿ:‘ಮತ್ತೆ ಶುರು ಮಾಡೋಣ್ವ’ ಬಿಗ್ಬಾಸ್ ಬಾಗಿಲು ತೆರೆದ ಸುದೀಪ್
ಲಾಲ್ಬಾಗ್ ಫ್ಲವರ್ ಶೋ ಇಂದಿನಿಂದ (ಆಗಸ್ಟ್ 06) ಆರಂಭವಾಗಿದ್ದು, ಆಗಸ್ಟ್ 17ರ ವರೆಗೆ ನಡೆಯಲಿದೆ. ಬಿಗ್ಬಾಸ್ ಎಕ್ಸ್ಪೀರಿಯನ್ಸ್ ಜೋನ್ ಸಹ ಸಾರ್ವಜನಿಕ ಪ್ರವೇಶಕ್ಕೆ ಲಭ್ಯವಿದೆ. ಇಲ್ಲಿ ಸೆಲ್ಫಿ ತೆಗೆದುಕೊಂಡು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡರೆ ಅದುವೇ ಬಿಗ್ಬಾಸ್ ವೀಕೆಂಡ್ ಎಪಿಸೋಡ್ ವೀಕ್ಷಣೆಗೆ ಟಿಕೆಟ್ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 2:59 pm, Thu, 6 August 26
