ನೀವು ಪ್ರತಿದಿನ ಕಚೇರಿ, ಮಾಲ್ ಅಥವಾ ಅಪಾರ್ಟ್‌ಮೆಂಟ್‌ಗಳಲ್ಲಿ ಲಿಫ್ಟ್ ಬಳಸುವಾಗ ಅಲ್ಲಿ ಕನ್ನಡಿ(Mirror) ಇರುವುದನ್ನು ಖಂಡಿತ ನೋಡಿರುತ್ತೀರಿ. ಹಲವರು ಇದು ಕೇವಲ ಮುಖ ನೋಡಿಕೊಳ್ಳಲು ಅಥವಾ ಅಲಂಕಾರಕ್ಕಾಗಿ ಇಟ್ಟಿದ್ದಾರೆ ಎಂದು ಭಾವಿಸುತ್ತಾರೆ. ಆದರೆ, ಲಿಫ್ಟ್‌ನಲ್ಲಿ ಕನ್ನಡಿ ಅಳವಡಿಸುವುದರ ಹಿಂದೆ ಇಂಜಿನಿಯರ್‌ಗಳ ದೊಡ್ಡ ಮನೀನಸಿಕ ತಂತ್ರ ಮತ್ತು ಪ್ರಯಾಣಿಕರ ಸುರಕ್ಷತೆಯ ರಹಸ್ಯ ಅಡಗಿದೆ.
ಮೊದಮೊದಲು ಲಿಫ್ಟ್‌ಗಳನ್ನು ತಯಾರಿಸಿದಾಗ ಅವು ಕೇವಲ ಕಬ್ಬಿಣದ ಗ್ರಿಲ್‌ಗಳು ಅಥವಾ ಮುಚ್ಚಿದ ಪೆಟ್ಟಿಗೆಗಳಂತೆ ಇರುತ್ತಿದ್ದವು. ಆಗ ಲಿಫ್ಟ್ ಹತ್ತುತ್ತಿದ್ದ ಜನರಿಗೆ ವಿಚಿತ್ರ ಆತಂಕ ಶುರುವಾಗುತ್ತಿತ್ತು. ಲಿಫ್ಟ್ ತುಂಬಾ ವೇಗವಾಗಿ ಚಲಿಸುತ್ತಿದೆ ಅಥವಾ ಕೆಳಗೆ ಬಿದ್ದುಬಿಡುತ್ತದೆ ಎಂಬ ಭಯ ಅವರನ್ನು ಕಾಡುತ್ತಿತ್ತು.
ಲಿಫ್ಟ್ ಸಾಮಾನ್ಯ ವೇಗದಲ್ಲೇ ಚಲಿಸುತ್ತಿದ್ದರೂ, ಜನರು ಸೀಮಿತ ಜಾಗದಲ್ಲಿ ಉಸಿರಾಡಲು ಕಷ್ಟಪಡುತ್ತಿದ್ದರು. ಈ ಮಾನಸಿಕ ಸ್ಥಿತಿಯಿಂದ ಜನರು ಲಿಫ್ಟ್ ಕಂಪನಿಗಳಿಗೆ ಸಾಲು ಸಾಲು ದೂರುಗಳನ್ನು ನೀಡುತ್ತಿದ್ದರು. ಲಿಫ್ಟ್ ವಿನ್ಯಾಸಕರು ಮತ್ತು ಇಂಜಿನಿಯರ್‌ಗಳು ಈ ಸಮಸ್ಯೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಇದು ತಾಂತ್ರಿಕ ದೋಷವಲ್ಲ, ಬದಲಿಗೆ ಜನರ ‘ಮಾನಸಿಕ ಭ್ರಮೆ’ ಎಂಬುದು ಅರ್ಥವಾಯಿತು. ಮುಚ್ಚಿದ ಜಾಗದಲ್ಲಿ ಇರುವುದರಿಂದ ಜನರ ಗಮನವೆಲ್ಲಾ ಲಿಫ್ಟ್‌ನ ವೇಗ ಮತ್ತು ಚಲನೆಯ ಮೇಲೆಯೇ ಇರುತ್ತಿತ್ತು.
ಮತ್ತಷ್ಟು ಓದಿ:
Video: ಕಾಗೆಯನ್ನು ಮಡಿಲಿನಲ್ಲಿ ಮಲಗಿಸಿ ಮಗುವಿನಂತೆ ಮುದ್ದಿಸಿದ ಮಹಿಳೆ
ಇದನ್ನು ತಡೆಯಲು ಇಂಜಿನಿಯರ್‌ಗಳು ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ಐಡಿಯಾ ಮಾಡಿದರು. ಅದೇ ಲಿಫ್ಟ್ ಒಳಗೆ ಕನ್ನಡಿಗಳನ್ನು ಅಳವಡಿಸುವುದು. ಲಿಫ್ಟ್‌ನಲ್ಲಿ ಕನ್ನಡಿಗಳನ್ನು ಅಳವಡಿಸಿದ ತಕ್ಷಣ ಅದ್ಭುತ ಬದಲಾವಣೆ ಕಂಡುಬಂದಿತು. ಜನರು ಲಿಫ್ಟ್ ಹತ್ತುತ್ತಿದ್ದಂತೆ ಕನ್ನಡಿಯಲ್ಲಿ ತಮ್ಮ ಮುಖ ನೋಡುವುದು, ಕೂದಲನ್ನು ನೀಟಾಗಿ ಮಾಡಿಕೊಳ್ಳುವುದು ಅಥವಾ ಬಟ್ಟೆಗಳನ್ನು ಸರಿಪಡಿಸಿಕೊಳ್ಳುವಲ್ಲಿ ನಿರತರಾಗಲು ಆರಂಭಿಸಿದರು. ಇದರಿಂದ ಅವರ ಗಮನ ಚಲನೆಯಿಂದ ದೂರ ಸರಿದು, ಭಯ ತಾನಾಗಿಯೇ ಮಾಯವಾಯಿತು. ಅಲ್ಲಿಗೆ ಲಿಫ್ಟ್ ವೇಗದ ಬಗೆಗಿನ ದೂರುಗಳು ಸಂಪೂರ್ಣವಾಗಿ ನಿಂತುಹೋದವು.
ಸುರಕ್ಷತೆ ಮತ್ತು ಮನಸ್ಸಿನ ಶಾಂತಿಗೆ ಸಹಕಾರಿ
ಮುಚ್ಚಿದ ಸಣ್ಣ ಜಾಗವನ್ನು ಕಂಡರೆ ಹೆದರುವ ಕಾಯಿಲೆ ಇರುವವರಿಗೆ ಇದು ವರದಾನ. ಕನ್ನಡಿಯು ಸಣ್ಣ ಲಿಫ್ಟ್ ರೂಮನ್ನು ದೊಡ್ಡದಾಗಿ ಮತ್ತು ವಿಶಾಲವಾಗಿ ಕಾಣುವಂತೆ ಮಾಡುತ್ತದೆ. ಲಿಫ್ಟ್‌ನಲ್ಲಿ ನಮ್ಮ ಜೊತೆ ಇರುವ ಇತರ ಅಪರಿಚಿತ ವ್ಯಕ್ತಿಗಳು ಏನು ಮಾಡುತ್ತಿದ್ದಾರೆ ಎಂಬುದನ್ನು ನೇರವಾಗಿ ನೋಡದೆ ಕನ್ನಡಿಯ ಮೂಲಕವೇ ಅವರ ಮೇಲೆ ನಿಗಾ ಇಡಬಹುದು. ಇದು ಸುರಕ್ಷತೆಗೆ ಸಹಕಾರಿಯಾಗಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
