ಲೋಕಸಭಾ ಕ್ಷೇತ್ರ ಮರುವಿಂಗಡಣೆ ಮಾಡಿದ್ರೆ ಕರ್ನಾಟಕದಲ್ಲೆಷ್ಟಾಗುತ್ತೆ? ಇಲ್ಲಿದೆ ಮಾಹಿತಿ – Kannada News | Lok Sabha Delimitation 2026: Karnataka’s Seats May Rise to 42 as India Plans Up to 850 MP Constituencies

ಬೆಂಗಳೂರು, ಏಪ್ರಿಲ್ 16: ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಗೆ ಕೇಂದ್ರ ಸರ್ಕಾರ ಮಹತ್ವದ ಯೋಜನೆಯನ್ನು ರೂಪಿಸಿದೆ. ಪ್ರಸ್ತುತ ಇರುವ 543 ಲೋಕಸಭಾ ಸ್ಥಾನಗಳನ್ನು 816 ಅಥವಾ 850ಕ್ಕೆ ಏರಿಸುವ ಸಾಧ್ಯತೆ ಇದೆ. ಇದು ಹಲವು ದಶಕಗಳ ನಂತರ ದೇಶದ ಲೋಕಸಭಾ ಸ್ಥಾನಗಳಲ್ಲಿ ನಡೆಯುತ್ತಿರುವ ಅತಿ ದೊಡ್ಡ ಹೆಚ್ಚಳವಾಗಿದೆ. ಮುಂದಿನ ಲೋಕಸಭಾ ಚುನಾವಣೆ ಹೊತ್ತಿಗೆ ಈ ಬದಲಾವಣೆಗಳು ಕಾರ್ಯರೂಪಕ್ಕೆ ಬರಬಹುದು. ಒಂದು ವೇಳೆ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯಾದರೆ, ಕರ್ನಾಟಕದಲ್ಲಿ ಪ್ರಸ್ತುತ ಇರುವ 28 ಸ್ಥಾನಗಳು 2011ರ ಜನಗಣತಿ ಆಧಾರದಲ್ಲಿ 41ಕ್ಕೆ ಅಥವಾ ಶೇ 50 ಹೆಚ್ಚಳ ಸೂತ್ರದ ಪ್ರಕಾರ 42ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಯಾವ್ಯಾವ ರಾಜ್ಯಗಳಲ್ಲಿ ಲೆಕ್ಕಾಚಾರ ಹೇಗೆ ಬದಲಾಗಲಿದೆ ಎಂಬ ಮಾಹಿತಿ ಇಲ್ಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *