ವಚನಾನಂದ ಶ್ರೀ ವಿರುದ್ಧ ಮತ್ತೊಂದು ಸ್ಫೋಟಕ ಆರೋಪ: ರಾಜಕೀಯ ನಾಯಕರ ಕರೆ ರೆಕಾರ್ಡ್​​ ಮಾಡ್ತಿದ್ರಾ ಶ್ವಾಸಗುರು? – Kannada News | Panchamasali Trust Member H.S. Nagaraj Warns Leaders About Vachanananda Srees Phone Recording Habit

ದಾವಣಗೆರೆ, ಏಪ್ರಿಲ್​​ 16: ಪಂಚಮಸಾಲಿ ಸಮಾಜ ಟ್ರಸ್ಟ್‌ನ ಸದಸ್ಯ ಎಚ್.ಎಸ್. ನಾಗರಾಜ್ ಅವರು ವಚನಾನಂದ ಶ್ರೀಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಚನಾನಂದ ಶ್ರೀಗಳು ರಾಜ್ಯದ ಹಿರಿಯ ಮತ್ತು ಪ್ರಮುಖ ರಾಜಕೀಯ ನಾಯಕರೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದಾರೆ. ಈ ರೆಕಾರ್ಡಿಂಗ್‌ಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಅಭ್ಯಾಸ ಹೊಂದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಇಂತಹ ನಡೆ ರಾಜ್ಯದಲ್ಲಿ ಚುಕ್ಕಾಣಿ ಹಿಡಿದಿರುವ ನಾಯಕರಿಗೆ ತೀವ್ರ ಅಪಾಯಕಾರಿ ಎಂದು ನಾಗರಾಜ್ ಎಚ್ಚರಿಸಿದದ್ದು, ಯಾವುದೇ ನಾಯಕರು ಶ್ರೀಗಳೊಂದಿಗೆ ಫೋನ್‌ನಲ್ಲಿ ಮಾತನಾಡದಂತೆ ಮನವಿ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

Leave a Reply

Your email address will not be published. Required fields are marked *