ಬಿಗ್ಬಾಸ್ (Bigg Boss) ಮಾಜಿ ಸ್ಪರ್ಧಿ, ನಟಿ ಹಂಸ ‘ವಸುದೇವ ಕುಟುಂಬ’ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಇದೀಗ ಧಾರಾವಾಹಿ ನಿರ್ಮಾಪಕರ ಮೇಲೆ ಉರಿದು ಬಿದ್ದಿದ್ದಾರೆ. ಧಾರಾವಾಹಿಯ ನಿರ್ಮಾಪಕರು ತಮ್ಮ ಸಂಭಾವನೆ ಕೊಡದೆ ಸತಾಯಿಸಿದ್ದು, ಯೂನಿಟ್ ಅನ್ನು ಸಹ ಸರಿಯಾಗಿ ನೋಡಿಕೊಂಡಿಲ್ಲ ಎಂದು ಹಂಸ ವಾಗ್ದಾಳಿ ನಡೆಸಿದ್ದಾರೆ. ಇಂದು (ಮೇ 1) ಧಾರಾವಾಹಿ ನಿರ್ಮಾಪಕರು ಇದ್ದ ಸ್ಥಳಕ್ಕೇ ಹೋಗಿ ನಿರ್ಮಾಪಕರನ್ನು ತರಾಟೆಗೆ ತೆಗೆದುಕೊಂಡ ನಟಿ, ಬಳಿಕ ಟಿವಿ9 ಜೊತೆಗೆ ಮಾತನಾಡಿ, ನಿರ್ಮಾಪಕರ ವಿರುದ್ಧ ಬೆಂಕಿ ಉಗುಳಿದ್ದಾರೆ. ‘ನನ್ನ ಹಣ ಹೋದರೆ ಹೋಗಲಿ, ಈ ವ್ಯಕ್ತಿಯ ಮುಖವಾಡ ಬಯಲು ಮಾಡದೇ ಬಿಡೆನು’ ಎಂದು ಅಬ್ಬರಿಸಿದ್ದಾರೆ ನಟಿ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
