
ಎಸ್ಎಸ್ ರಾಜಮೌಳಿ ಅವರು (Rajamouli) ‘ವಾರಣಾಸಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ವಿದೇಶದಲ್ಲಿ ಶೂಟಿಂಗ್ ಮಾಡಲಾಗಿದೆ. ಈಗ ಯುದ್ಧದ ಭೀತಿ ಹಿನ್ನೆಲೆಯಲ್ಲಿ ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಗೆ ತಂಡ ಶಿಫ್ಟ್ ಆಗಿದೆ. ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈಗ ಸಿನಿಮಾ ಶೂಟ್ಗೆ ನೀರಿನ ಕೊರತೆ ಉಂಟಾಗಿದೆ. ಇದರಿಂದ ಸಿನಿಮಾ ಶೂಟ್ ಮುಂದಕ್ಕೆ ಹೋಗುವ ಭೀತಿ ಎದುರಾಗಿದೆ.
ರಾಜಮೌಳಿ ಅವರ ‘ವಾರಣಾಸಿ’ ಸಿನಿಮಾ ಸಾಕಷ್ಟು ನಿರೀಕ್ಷಿತ ಚಿತ್ರಗಳಲ್ಲಿ ಒಂದು. ಈ ಸಿನಿಮಾ ಮುಂದಿನ ವರ್ಷ ಏಪ್ರಿಲ್ 7ರಂದು ತೆರೆಗೆ ಬರುತ್ತಿದೆ. ಈ ಚಿತ್ರಕ್ಕೆ ಹಲವು ಹಂತಗಳಲ್ಲಿ ಶೂಟಿಂಗ್ ನಡೆಯಬೇಕಿದೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸಿನಿಮಾದ ಶೂಟ್ ನಡೆಯುತ್ತಿದೆ. ಆದರೆ, ಇದನ್ನು ತಾತ್ಕಾಲಿಕವಾಗಿ ನಿಲ್ಲಿಸೋ ಪರಿಸ್ಥಿತಿ ಬಂದಿದೆ.
ಸಮುದ್ರದ ಸೆಟ್ ಹಾಕಿ ಸಿನಿಮಾ ಶೂಟ್ ಮಾಡಲು ರಾಜಮೌಳಿ ನಿರ್ಧರಿಸಿದ್ದರು. ಇದಕ್ಕಾಗಿ 150 ನೀರಿನ ಟ್ಯಾಂಕರ್ಗಳು ಬೇಕು ಎಂದು ಬೇಡಿಕೆ ಇಟ್ಟಿದ್ದರು. ಆದರೆ, ಈ ಬೇಡಿಕೆಯನ್ನು ಹೈದರಾಬಾದ್ ಮಹಾನಗರ ಪಾಲಿಕೆಯ ಜಲ ಮಂಡಳಿ ಇದನ್ನು ನಿರಾಕರಿಸಿದೆ. ಬೇಸಿಗೆ ಸಮಯ ಆಗಿರುವುದರಿಂದ ಜನರಿಗೆ ಕುಡಿಯಲು ಹಾಗೂ ದಿನ ನಿತ್ಯ ಬಳಕೆಗೆ ನೀರು ಶಾರ್ಟೇಜ್ ಆಗುತ್ತಿದೆ. ಹೀಗಿರುವಾಗ ಸಿನಿಮಾ ಶೂಟ್ಗೆ ಇಷ್ಟು ನೀರು ಪೋಲು ಮಾಡಲು ಅವರು ರೆಡಿ ಇಲ್ಲ. ಈ ಕಾರಣದಿಂದ ಮನವಿ ತಿರಸ್ಕಾರಗೊಂಡಿದೆ.
ಇದನ್ನೂ ಓದಿ: ‘ಧುರಂಧರ್ 2’ ಹಣ ಮಾಡಿದ್ದು ನೋಡಿ ಬದಲಾದ ರಾಜಮೌಳಿ; ಎರಡು ಭಾಗದಲ್ಲಿ ‘ವಾರಣಾಸಿ’
ಒಂದು ಹಂತದ ಶೂಟ್ ವಿಳಂಬ ಆಯಿತು ಎಂದರೆ, ಮುಂದಿನ ಹಂತದ ಶೂಟ್ ಕೂಡ ತಡವಾಗುತ್ತವೆ. ಇದು ಮಹೇಶ್ ಬಾಬೂ ಹಾಗೂ ರಾಜಮೌಳಿ ಅಭಿಮಾನಿಗಳಿಗೆ ಆತಂಕ ತಂದಿದೆ. ಹೀಗೆ ಸಾಗಿದರೆ ಸಿನಿಮಾ ರಿಲೀಸ್ ವಿಳಂಬ ಆಗಬಹುದು ಎಂದು ಆತಂಕ ಹೊರಹಾಕಲಾಗುತ್ತಿದೆ. ರಾಜಮೌಳಿ ಹಲವು ವರ್ಷಗಳಿಂದ ಸಿನಿಮಾ ಮಾಡಿಕೊಂಡು ಬರುತ್ತಿದ್ದಾರೆ. ಅವರಿಗೆ ಈ ರೀತಿಯ ಸಣ್ಣಪುಟ್ಟ ಅಡೆತಡೆ ಬಗ್ಗೆ ಅರಿವಿರುತ್ತದೆ. ಹೀಗಾಗಿ, ಸ್ವಲ್ಪ ಹೆಚ್ಚಿನ ಸಮಯವನ್ನು ಅವರು ಮೀಸಲಿಟ್ಟುಕೊಂಡಿರುತ್ತಾರೆ. ಹೀಗಾಗಿ, ಅಂದುಕೊಂಡ ಸಮಯಕ್ಕೆ ‘ವಾರಣಾಸಿ’ ರಿಲೀಸ್ ಆಗಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.