‘ವಾರಣಾಸಿ’ ಶೂಟಿಂಗ್​​ಗೆ 150 ಟ್ಯಾಂಕರ್ ನೀರು ಕೇಳಿದ ರಾಜಮೌಳಿ; ಶಾಕ್ ಕೊಟ್ಟ ಅಧಿಕಾರಿಗಳು

ಎಸ್​​ಎಸ್​ ರಾಜಮೌಳಿ ಅವರು (Rajamouli) ‘ವಾರಣಾಸಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ವಿದೇಶದಲ್ಲಿ ಶೂಟಿಂಗ್ ಮಾಡಲಾಗಿದೆ. ಈಗ ಯುದ್ಧದ ಭೀತಿ ಹಿನ್ನೆಲೆಯಲ್ಲಿ ಹೈದರಾಬಾದ್​​ನ ರಾಮೋಜಿ ಫಿಲ್ಮ್​ ಸಿಟಿಗೆ ತಂಡ ಶಿಫ್ಟ್ ಆಗಿದೆ. ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈಗ ಸಿನಿಮಾ ಶೂಟ್​​ಗೆ ನೀರಿನ ಕೊರತೆ ಉಂಟಾಗಿದೆ. ಇದರಿಂದ ಸಿನಿಮಾ ಶೂಟ್ ಮುಂದಕ್ಕೆ ಹೋಗುವ ಭೀತಿ ಎದುರಾಗಿದೆ.

ರಾಜಮೌಳಿ ಅವರ ‘ವಾರಣಾಸಿ’ ಸಿನಿಮಾ ಸಾಕಷ್ಟು ನಿರೀಕ್ಷಿತ ಚಿತ್ರಗಳಲ್ಲಿ ಒಂದು. ಈ ಸಿನಿಮಾ ಮುಂದಿನ ವರ್ಷ ಏಪ್ರಿಲ್ 7ರಂದು ತೆರೆಗೆ ಬರುತ್ತಿದೆ. ಈ ಚಿತ್ರಕ್ಕೆ ಹಲವು ಹಂತಗಳಲ್ಲಿ ಶೂಟಿಂಗ್ ನಡೆಯಬೇಕಿದೆ. ರಾಮೋಜಿ ಫಿಲ್ಮ್​ ಸಿಟಿಯಲ್ಲಿ ಸಿನಿಮಾದ ಶೂಟ್ ನಡೆಯುತ್ತಿದೆ. ಆದರೆ, ಇದನ್ನು ತಾತ್ಕಾಲಿಕವಾಗಿ ನಿಲ್ಲಿಸೋ ಪರಿಸ್ಥಿತಿ ಬಂದಿದೆ.

ಸಮುದ್ರದ ಸೆಟ್ ಹಾಕಿ ಸಿನಿಮಾ ಶೂಟ್ ಮಾಡಲು ರಾಜಮೌಳಿ ನಿರ್ಧರಿಸಿದ್ದರು. ಇದಕ್ಕಾಗಿ 150 ನೀರಿನ ಟ್ಯಾಂಕರ್​ಗಳು ಬೇಕು ಎಂದು ಬೇಡಿಕೆ ಇಟ್ಟಿದ್ದರು. ಆದರೆ, ಈ ಬೇಡಿಕೆಯನ್ನು ಹೈದರಾಬಾದ್ ಮಹಾನಗರ ಪಾಲಿಕೆಯ ಜಲ ಮಂಡಳಿ ಇದನ್ನು ನಿರಾಕರಿಸಿದೆ. ಬೇಸಿಗೆ ಸಮಯ ಆಗಿರುವುದರಿಂದ ಜನರಿಗೆ ಕುಡಿಯಲು ಹಾಗೂ ದಿನ ನಿತ್ಯ ಬಳಕೆಗೆ ನೀರು ಶಾರ್ಟೇಜ್ ಆಗುತ್ತಿದೆ. ಹೀಗಿರುವಾಗ ಸಿನಿಮಾ ಶೂಟ್​​ಗೆ ಇಷ್ಟು ನೀರು ಪೋಲು ಮಾಡಲು ಅವರು ರೆಡಿ ಇಲ್ಲ. ಈ ಕಾರಣದಿಂದ ಮನವಿ ತಿರಸ್ಕಾರಗೊಂಡಿದೆ.

ಇದನ್ನೂ ಓದಿ: ‘ಧುರಂಧರ್ 2’ ಹಣ ಮಾಡಿದ್ದು ನೋಡಿ ಬದಲಾದ ರಾಜಮೌಳಿ; ಎರಡು ಭಾಗದಲ್ಲಿ ‘ವಾರಣಾಸಿ’

ಒಂದು ಹಂತದ ಶೂಟ್ ವಿಳಂಬ ಆಯಿತು ಎಂದರೆ, ಮುಂದಿನ ಹಂತದ ಶೂಟ್​ ಕೂಡ ತಡವಾಗುತ್ತವೆ. ಇದು ಮಹೇಶ್ ಬಾಬೂ ಹಾಗೂ ರಾಜಮೌಳಿ ಅಭಿಮಾನಿಗಳಿಗೆ ಆತಂಕ ತಂದಿದೆ. ಹೀಗೆ ಸಾಗಿದರೆ ಸಿನಿಮಾ ರಿಲೀಸ್ ವಿಳಂಬ ಆಗಬಹುದು ಎಂದು ಆತಂಕ ಹೊರಹಾಕಲಾಗುತ್ತಿದೆ. ರಾಜಮೌಳಿ ಹಲವು ವರ್ಷಗಳಿಂದ ಸಿನಿಮಾ ಮಾಡಿಕೊಂಡು ಬರುತ್ತಿದ್ದಾರೆ. ಅವರಿಗೆ ಈ ರೀತಿಯ ಸಣ್ಣಪುಟ್ಟ ಅಡೆತಡೆ ಬಗ್ಗೆ ಅರಿವಿರುತ್ತದೆ. ಹೀಗಾಗಿ, ಸ್ವಲ್ಪ ಹೆಚ್ಚಿನ ಸಮಯವನ್ನು ಅವರು ಮೀಸಲಿಟ್ಟುಕೊಂಡಿರುತ್ತಾರೆ. ಹೀಗಾಗಿ, ಅಂದುಕೊಂಡ ಸಮಯಕ್ಕೆ ‘ವಾರಣಾಸಿ’ ರಿಲೀಸ್ ಆಗಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *