ವಿಜಯಪುರ, ಮೇ 31: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿದ್ದರಾಮಯ್ಯರ ರಾಜಕೀಯ ಶೈಲಿ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ವೈಯಕ್ತಿಕ ದ್ವೇಷದ ರಾಜಕಾರಣ ಮಾಡಿಲ್ಲ. ನನಗೂ ಅವರ ಬಗ್ಗೆ ಒಂದು ರೀತಿ ಗೌರವ ಇದೆ, ಏಕೆಂದರೆ ಅವರು ಹಿರಿಯ ನಾಯಕರು ಮತ್ತು ಹೆಚ್ಚು ಬಾರಿ ಮುಖ್ಯಮಂತ್ರಿಯಾದವರು. ವಿಧಾನಸಭೆಯಲ್ಲಿ ಎಷ್ಟೇ ಟೀಕೆ ಮತ್ತು ಜಗಳ ಮಾಡಿದರು, ಹೊರಗೆ ಬಂದ ಮೇಲೆ ಯಾರಿಗೂ ವೈಯಕ್ತಿಕವಾಗಿ ಟಾರ್ಗೆಟ್ ಮಾಡುವಂತಹ ವ್ಯಕ್ತಿ ಸಿದ್ದರಾಮಯ್ಯ ಅಲ್ಲ. ಆದರೆ ಇನ್ಮುಂದೆ ಅದು ನಡೆಯಲಿದೆ. ಈಗ ಬೇರೆಯವರ ಫೈಲ್‌ಗಳು ಓಪನ್ ಆಗುತ್ತವೆ. ಹಾಗಾಗಿ ವಿಜಯೇಂದ್ರ ಮತ್ತು ಆರ್. ಅಶೋಕ್ ಹುಷಾರಾಗಿರಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
