ಚೆನ್ನೈ, ಮೇ 5: ನಟ ವಿಜಯ್ (Vijay) ತಮಿಳುನಾಡು ರಾಜಕೀಯವನ್ನೇ ಅಲುಗಾಡಿಸಿಬಿಟ್ಟಿದ್ದಾರೆ. ವಿಧಾನಸಭೆಯಲ್ಲಿ ಇಡೀ ರಾಜ್ಯವೇ ಸಂಚಲನಗೊಳ್ಳುವಂತೆ ಅವರ ಟಿವಿಕೆ ಪಕ್ಷ (TVK- Tamilaga Vetri Kazhagam) ದಿಗ್ವಿಜಯ ಸಾಧಿಸಿದೆ. ಏಕವ್ಯಕ್ತಿ ಈ ಮಹಾನ್ ಕ್ರಾಂತಿ ಮಾಡಿರುವುದು ಸಾಮಾನ್ಯದ ಸಂಗತಿಯಲ್ಲ. ಅಂತೆಯೇ, ಬಹಳ ಜನರು ವಿಜಯ್ ಅವರ ಹಣಕಾಸು ಶಕ್ತಿ ಮತ್ತು ಹಿನ್ನೆಲೆ ಬಗ್ಗೆ ಮಾಹಿತಿ ತಿಳಿಯಲು ಆಸಕ್ತರಾಗಿದ್ದಾರೆ. ಅವರ ಆಸ್ತಿಪಾಸ್ತಿ, ಹೂಡಿಕೆಯ ವಿವರ ನಿಜಕ್ಕೂ ಕುತೂಹಲಕಾರಿ ಎನಿಸಿದೆ.
ಹೊಸ ತಲೆಮಾರಿನ ಜನರನ್ನು ಮತಪೆಟ್ಟಿಗೆಗೆ ಆಕರ್ಷಿಸಿದ ವಿಜಯ್ ಅವರು ಹೂಡಿಕೆ ವಿಚಾರದಲ್ಲಿ ಮಹಾನ್ ಸಂಪ್ರದಾಯಸ್ಥರಂತೆ ಗೋಚರಿಸುತ್ತಾರೆ. ಅವರು ಚುನಾವಣಾ ಅಫಿಡವಿಟ್ನಲ್ಲಿ ಘೋಷಿಸಿಕೊಂಡ ಒಟ್ಟು ಆಸ್ತಿ 624 ಕೋಟಿ ರೂ. ಅದರಲ್ಲಿ ಚರಾಸ್ತಿ 404 ಕೋಟಿ ರೂ, ಚಿರಾಸ್ತಿ 220 ಕೋಟಿ ರೂ. ಶೂನ್ಯ ಸಾಲ ಹೊಂದಿರುವ ಅಪರೂಪದ ರಾಜಕಾರಣಿ.
ವಿಜಯ್ ಅವರ ಆಸ್ತಿಪಾಸ್ತಿ ವಿವರ
ದಳಪತಿ ವಿಜಯ್ ಅವರ ಒಟ್ಟು ಆಸ್ತಿ: 624 ಕೋಟಿ ರೂ
- ಬ್ಯಾಂಕ್ಗಳಲ್ಲಿ: 404 ಕೋಟಿ ರೂ
- ರಿಯಲ್ ಎಸ್ಟೇಟ್ ಆಸ್ತಿಗಳು: 220 ಕೋಟಿ ರೂ
- ವಾರ್ಷಿಕ ಆದಾಯ: 184.53 ಕೋಟಿ ರೂ
ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಇದ್ದೂ ಅದನ್ನು ಬಳಸದೇ ಇದ್ದರೆ ಏನಾಗುತ್ತೆ? ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತಾ?
ವಿಜಯ್ ಅವರ ಬ್ಯಾಂಕ್ ಡೆಪಾಸಿಟ್ಗಳು
- ಚೆನ್ನೈನ ಸಾಲಿಗ್ರಾಮಮ್ನಲ್ಲಿರುವ ಇಂಡಿಯನ್ ಓವರ್ಸೀಸ್ ಬ್ಯಾಂಕ್ನ ಒಂದು ಸೇವಿಂಗ್ಸ್ ಅಕೌಂಟ್ನಲ್ಲಿ 213 ಕೋಟಿ ರೂ ಬ್ಯಾಲನ್ಸ್ ಹೊಂದಿದ್ದಾರೆ.
- ಎಕ್ಸಿಸ್ ಬ್ಯಾಂಕ್ನಲ್ಲಿ 40 ಕೋಟಿ ರೂ, ಐಒಬಿಯಲ್ಲಿ 25 ಕೊಟಿ ರೂ, ಎಚ್ಡಿಎಫ್ಸಿ ಬ್ಯಾಂಕಲ್ಲಿ 20 ಕೋಟಿ ರೂ, ಎಸ್ಬಿಐನಲ್ಲಿ 15 ಕೋಟಿ ರೂ ಹೀಗೆ ವಿವಿಧ ಬ್ಯಾಂಕುಗಳಲ್ಲಿ 100 ಕೋಟಿ ರೂ ಮೊತ್ತದ ಫಿಕ್ಸೆಡ್ ಡೆಪಾಸಿಟ್ಗಳನ್ನು ಹೊಂದಿದ್ದಾರೆ.
- ಷೇರುಗಳಲ್ಲಿ ಅವರ ಹೂಡಿಕೆ 20 ಲಕ್ಷ ರೂಗಿಂತಲೂ ಕಡಿಮೆ. ಜಯನಗರ್ ಪ್ರಾಪರ್ಟಿ ಷೇರುಗಳಲ್ಲಿ 19.69 ಲಕ್ಷ ರೂ, ಐಒಬಿಯ ಷೇರುಗಳಲ್ಲಿ 9,600 ರೂ ಮತ್ತು ಸನ್ ಪೇಪರ್ ಮಿಲ್ ಷೇರುಗಳಲ್ಲಿ 25,000 ರೂ ಹೂಡಿಕೆ ಮಾಡಿದ್ದಾರೆ.
ವಿಜಯ್ ಅವರ ರಿಯಲ್ ಎಸ್ಟೇಟ್ ಹೂಡಿಕೆಗಳು
- ವಿಜಯ್ ಅವರ ಸ್ಥಿರಾಸ್ತಿಗಳ ಮೌಲ್ಯ 220 ಕೋಟಿ ರೂನಷ್ಟು ಇದೆ. ನೀಲಂಕರೈ, ಸಾಲಿಗ್ರಾಮಮ್, ಮೈಲಾಪುರ್, ಎಗ್ಮೋರ್ ಮತ್ತಿತರೆಡೆ 115 ಕೋಟಿ ರೂ ಮೌಲ್ಯದ 10 ವಾಸ ಸ್ಥಳಗಳನ್ನು ಹೊಂದಿದ್ದಾರೆ.
- ಪರಿವಾಕ್ಕಮ್, ತ್ಯಾಗರಾಜನಗರ್, ಶೋಲಿಂಗನಲ್ಲೂರ್, ಕೋಪ್ಪೂರ್ನಲ್ಲಿ 82.8 ಕೋಟಿ ರೂ ಮೌಲ್ಯದ ಕಮರ್ಷಿಯಲ್ ಆಸ್ತಿಗಳನ್ನು ಹೊಂದಿದ್ದಾರೆ.
- ವಾಟ್ಟಪಟ್ಟಿ ಗ್ರಾಮ್, ಕೊಡೈಕೆನಲಾಲ್ನಲ್ಲಿ 20 ಲಕ್ಷ ರೂ ಮೌಲ್ಯದ ಕೃಷಿ ಭೂಮಿ ಹೊಂದಿದ್ದಾರೆ.
- ಪೋರೂರ್, ಸಾಲಿಗ್ರಾಮಮ್ ಮತ್ತು ನೀಲಂಕರೈನಲ್ಲಿ 22 ಕೋಟಿ ರೂ ಮೌಲ್ಯದ ಕೃಷಿಯೇತರ ಜಮೀನು ಹೊಂದಿದ್ದಾರೆ.
ವಿಜಯ್ ಅವರ ಒಟ್ಟಾರೆ ಹೂಡಿಕೆ ಪ್ರವೃತ್ತಿ ಹೇಗೆ?
ಅವರ ಆಸ್ತಿಪಾಸ್ತಿ ಮತ್ತು ಹೂಡಿಕೆ ಗಮನಿಸಿದರೆ ವಿಜಯ್ ಅವರು ಸಂಪ್ರದಾಯಸ್ಥರಂತೆ ಗೋಚರವಾಗುತ್ತಾರೆ. ಹಿಂದಿನ ತಲೆಮಾರುಗಳ ಜನರ ರೀತಿಯಲ್ಲಿ ಹೆಚ್ಚಿನ ಹಣವು ಬ್ಯಾಂಕ್ ಡೆಪಾಸಿಟ್ ಮತ್ತು ರಿಯಲ್ ಎಸ್ಟೇಟ್ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಷೇರುಗಳಲ್ಲಿ ಶೇ. 1ಕ್ಕಿಂತಲೂ ಕಡಿಮೆ ಹೂಡಿಕೆ ಮಾಡಿರುವುದು ಗಮನಾರ್ಹ.
ಇದನ್ನೂ ಓದಿ: ಲಕ್ಷ ರೂ ಹೂಡಿಕೆಯಿಂದ 5,000 ರೂ ಪಿಂಚಣಿ; ಜನಪ್ರಿಯವಾಗುತ್ತಿದೆ ಎಪಿವೈ ಪೆನ್ಷನ್ ಸ್ಕೀಮ್
ವಿಜಯ್ ಅವರ ವಾಹನ, ಒಡವೆ ಇತ್ಯಾದಿ ಆಸ್ತಿಗಳು
ವಿಜಯ್ ಅವರು ಐದು ಕಾರು ಮತ್ತು ಒಂದು ಬೈಕ್ ಹೊಂದಿದ್ದಾರೆ. ಇವೆಲ್ಲವೂ ಕಳೆದ ಐದಾರು ವರ್ಷಗಳಲ್ಲಿ ಖರೀದಿಸಿರುವಂಥವು. ಟೊಯೊಟಾ ಲೆಕ್ಸಸ್ 350, ಬಿಎಂಡಬ್ಲ್ಯು ಐ7, ಟೊಯೊಟಾ ವೆಲ್ಫೈರ್, ಬಿಎಂಡಬ್ಲ್ಯು 530, ಮಾರುತಿ ಸ್ವಿಫ್ಟ್, ಟಿವಿಎಸ್ ಎಕ್ಸ್ಎಲ್ ಸೂಪರ್ ಬೈಕ್ ವಾಹನಗಳಿವೆ ಎಂದು ವಿಜಯ್ ಘೋಷಿಸಿಕೊಂಡಿದ್ದಾರೆ.
ಇದರಲ್ಲಿ ಟೊಯೊಟಾ ಲೆಕ್ಸಸ್ ಕಾರಿನ ಮೌಲ್ಯ ಮೂರು ಕೋಟಿ ರೂ ಇದೆ. ಬಿಎಂಡಬ್ಲ್ಯು ಐ7 ಕಾರಿನ ಮೌಲ್ಯ 2 ಕೋಟಿ ರೂಗೂ ಅಧಿಕ ಇದೆ.
ವಿಜಯ್ ಅವರು 1.2 ಕೋಟಿ ರೂ ಮೌಲ್ಯದ 883 ಗ್ರಾಮ್ ತೂಕದ ಚಿನ್ನ ಮತ್ತು ಒಡವೆ ಆಸ್ತಿಗಳನ್ನು ಹೊಂದಿದ್ದಾರೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
