ವಿಜಯ್ ಜನ್ಮದಿನಕ್ಕೆ ತ್ರಿಶಾ ತರಿಸಿದ್ದು ವಿಶೇಷ ಕೇಕ್; ‘00.00’ ಅರ್ಥ ಹುಡುಕಿದ ನೆಟ್ಟಿಗರು – Kannada News | Trisha Birthday Wish to Tamil Nadu CM Vijay Viral Cake and Instagram post meaning

ತಮಿಳುನಾಡು ಮುಖ್ಯಮಂತ್ರಿ ಹಾಗೂ ಖ್ಯಾತ ನಟ ಸಿ. ಜೋಸೆಫ್ ವಿಜಯ್ (CM Vijay) ಜೂನ್ 22ರಂದು ತಮ್ಮ 52ನೇ ಜನ್ಮದಿನವನ್ನು ಆಚರಿಸಿಕೊಂಡರು. ದೇಶಾದ್ಯಂತ ಗಣ್ಯರು ಅವರಿಗೆ ಶುಭ ಕೋರುತ್ತಿದ್ದರೆ, ಇತ್ತ ಸೋಶಿಯಲ್ ಮೀಡಿಯಾದಲ್ಲಿ ಅವರ ಆಪ್ತ ಗೆಳತಿ, ನಟಿ ತ್ರಿಶಾ ಕೃಷ್ಣನ್ (Trisha) ಅವರು ವಿಜಯ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ ಎಂಬ ವದಂತಿ ಭಾರಿ ಸದ್ದು ಮಾಡಿತ್ತು. ಆದರೆ ಮಂಗಳವಾರ (ಜೂನ್ 23) ಸಂಜೆ ತ್ರಿಶಾ ಹಂಚಿಕೊಂಡ ಒಂದೇ ಒಂದು ಪೋಸ್ಟ್ ಈ ಎಲ್ಲಾ ವದಂತಿಗಳನ್ನು ಧೂಳೀಪಟ ಮಾಡಿತು. ಅದರ ಬಗ್ಗೆ ಜನರು ಹಲವು ರೀತಿಯಲ್ಲಿ ಮಾತನಾಡಲು ಆರಂಭಿಸಿದ್ದಾರೆ.

ತ್ರಿಶಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಜಯ್ ಜೊತೆಗಿರುವ ಅತ್ಯಂತ ಆಪ್ತ ಹಾಗೂ ಸುಂದರವಾದ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಪ್ರಿಂಟೆಡ್ ಶರ್ಟ್ ಧರಿಸಿರುವ ವಿಜಯ್ ಮುಗುಳ್ನಗುತ್ತಿದ್ದರೆ, ತ್ರಿಶಾ ಅವರ ಕಣ್ಣಲ್ಲೇ ಕಣ್ಣಿಟ್ಟು ಪ್ರೀತಿಯಿಂದ ನೋಡುತ್ತಾ ನಗುತ್ತಿದ್ದಾರೆ. ಇವರಿಬ್ಬರ ಮುಂದೆ ಸಾಲಾಗಿ ಐದು ಕೇಕ್‌ಗಳನ್ನು ಇಡಲಾಗಿದೆ.

ಇಂಟರ್ನೆಟ್‌ನಲ್ಲಿ ಸದ್ದು ಮಾಡ್ತಿದೆ ‘00.00’ ಕ್ಯಾಪ್ಷನ್:

ತ್ರಿಶಾ ಈ ಫೋಟೋಗೆ, ‘ಇದನ್ನೆಲ್ಲಾ ಸಾರ್ಥಕಗೊಳಿಸುವ ವ್ಯಕ್ತಿಗೆ ಜನ್ಮದಿನದ ಹಾರೈಕೆಗಳು (HBD 00.00)’ ಎಂದು ಬರೆದು ಹಾರ್ಟ್ ಮತ್ತು ದೃಷ್ಟಿ ಬೊಟ್ಟಿನ ಎಮೋಜಿಗಳನ್ನು ಹಾಕಿದ್ದಾರೆ. ಇದರಲ್ಲಿರುವ ‘00.00’ ಎಂಬ ಸಂಖ್ಯೆ ಈಗ ಅಭಿಮಾನಿಗಳ ತಲೆಗೆ ಕೆಲಸ ಕೊಟ್ಟಿದೆ. ಕೆಲವರು ವಿಜಯ್ ಜನ್ಮದಿನದ ಮಧ್ಯರಾತ್ರಿ 12 ಗಂಟೆಗೆ ತ್ರಿಶಾ ಜೊತೆಯಲ್ಲೇ ಇದ್ದರು ಅದಕ್ಕೆ ಹೀಗೆ ಬರೆದಿದ್ದಾರೆ ಎನ್ನುತ್ತಿದ್ದರೆ, ಇನ್ನು ಕೆಲವರು ಡಿಜಿಟಲ್ ಲವ್ ಲ್ಯಾಂಗ್ವೇಜ್‌ನಲ್ಲಿ ‘00.00’ ಎಂದರೆ ‘ನಾನು ನಿನ್ನನ್ನು ಕೊನೆಯವರೆಗೂ ಪ್ರೀತಿಸುತ್ತೇನೆ’ ಎಂಬ ರಹಸ್ಯ ಅರ್ಥವಿದೆ ಎಂದು ಡಿಕೋಡ್ ಮಾಡುತ್ತಿದ್ದಾರೆ.

ಹೈದರಾಬಾದ್‌ನಿಂದ ಹಾರಿ ಬಂತಾ ‘ತಿರಮಿಸು’ ಕೇಕ್?

ವಿಜಯ್ ಎದುರಿಗಿರುವ 5 ಕೇಕ್‌ಗಳಲ್ಲಿ 3 ಕಪ್‌ಗಳು ಪ್ರಸಿದ್ಧ ‘ತಿರಮಿಸು’ (Tiramisu) ಸಿಹಿಯಾಗಿದ್ದವು. ಇದನ್ನು ಹೈದರಾಬಾದ್‌ನ ಖ್ಯಾತ ಬೇಕರಿಯಾದ ‘ಕಾನ್ಸು’ ಬ್ರ್ಯಾಂಡ್‌ನಿಂದ ತರಿಸಲಾಗಿದೆ ಎಂದು ಹದ್ದಿನ ಕಣ್ಣಿನ ಅಭಿಮಾನಿಗಳು ಪತ್ತೆ ಹಚ್ಚಿದ್ದಾರೆ. ಈ ಬೇಕರಿ ಸದ್ಯಕ್ಕೆ ಚೆನ್ನೈನಲ್ಲಿ ಇಲ್ಲದೇ ಇರುವುದರಿಂದ, ತ್ರಿಶಾ ತಮ್ಮ ಪ್ರೀತಿಯ ಗೆಳೆಯನಿಗಾಗಿ ವಿಶೇಷವಾಗಿ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಿಂದ ವಿಮಾನದ ಮೂಲಕ ಚೆನ್ನೈನ ನೀಲಾಂಗರೈನಲ್ಲಿರುವ ಮನೆಗೆ ತರಿಸಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಅಲ್ಲದೆ ‘5 ವರ್ಷಗಳ ಪ್ರೀತಿಯ ಸಂಕೇತವಾಗಿ 5 ಕೇಕ್ ಕತ್ತರಿಸಲಾಗಿದೆ’ ಎಂದೂ ಕೆಲವರು ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಸಿಎಂ ವಿಜಯ್ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ನಾಚಿ ನೀರಾದ ನಟಿ ತ್ರಿಶಾ: ವಿಡಿಯೋ ವೈರಲ್

ವಿಜಯ್ ವೈಯಕ್ತಿಕ ಜೀವನದ ವಿವಾದ:

ವಿಜಯ್ ಮತ್ತು ತ್ರಿಶಾ 2004ರಿಂದಲೇ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ. ಈ ವರ್ಷದ ಆರಂಭದಲ್ಲಿ ವಿಜಯ್ ಪತ್ನಿ ಸಂಗೀತಾ ಸ್ವರ್ಣಲಿಂಗಂ ಅವರು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ವಿಜಯ್ ಅವರ ವಿವಾಹೇತರ ಸಂಬಂಧವೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದರು. ಆದರೆ ಈ ವದಂತಿಗಳ ಬಗ್ಗೆ ವಿಜಯ್ ಆಗಲಿ, ತ್ರಿಶಾ ಆಗಲಿ ಇದುವರೆಗೆ ಯಾವುದೇ ಬಹಿರಂಗ ಪ್ರತಿಕ್ರಿಯೆ ನೀಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *