ವಿಜಯ್ ಪ್ರಮಾಣವಚನ ಸಮಾರಂಭಕ್ಕೆ ಬಂದು ಮೊದಲ ಸಾಲಿನಲ್ಲೇ ಕುಳಿತ ತ್ರಿಶಾ – Kannada News | Trisha Krishnan attends Thalapathy Vijay oath Ceremony in Jawaharlal Nehru Stadium Chennai

ಖ್ಯಾತ ನಟ ವಿಜಯ್ (Thalapathy Vijay) ಅವರು ಟಿವಿಕೆ ಪಕ್ಷದ ಮೂಲಕ ರಾಜಕೀಯದಲ್ಲಿ ಮೊದಲ ಜಯ ಸಾಧಿಸಿದ್ದಾರೆ. ಇಂದು (ಮೇ 10) ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಸಮಾರಂಭಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳು, ಆಪ್ತರು, ರಾಜಕೀಯ ಕ್ಷೇತ್ರದ ಗಣ್ಯರು, ಸೆಲೆಬ್ರಿಟಿಗಳು ಆಗಮಿಸಿದ್ದಾರೆ. ವಿಜಯ್ ಜೊತೆ ಆಪ್ತವಾಗಿರುವ ನಟಿ ತ್ರಿಶಾ ಕೃಷ್ಣನ್ (Trisha Krishnan) ಕೂಡ ಬಂದಿದ್ದಾರೆ. ವಿಜಯ್ ಅವರ ಪೋಷಕರ ಪಕ್ಕವೇ ತ್ರಿಶಾ ಕೂಡ ಮೊದಲ ಸಾಲಿನಲ್ಲಿ ಕುಳಿತು ಪ್ರಮಾಣವಚನ ಸಮಾರಂಭವನ್ನು ವೀಕ್ಷಿಸಿದ್ದಾರೆ. ತ್ರಿಶಾ ಅವರನ್ನು ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ. ವಿಜಯ್ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕಾಗಿ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಶೀಘ್ರದಲ್ಲೇ ಅದರ ವಿಚಾರಣೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *