ವಿಧಾನಸೌಧ–ವಿಕಾಸಸೌಧದಲ್ಲಿ ಸೌರಶಕ್ತಿ ಅಳವಡಿಕೆ; ವರ್ಷಕ್ಕೆ ಈ ಯೋಜನೆಯಿಂದಾಗುವ ಉಳಿತಾಯವೆಷ್ಟು ಗೊತ್ತಾ? – Kannada News | Karnataka Government Installs Solar at Vidhana Soudha and Vikasa Soudha: Rs20 Lakh Savings Annually

ವಿಧಾನಸೌಧ–ವಿಕಾಸಸೌಧದಲ್ಲಿ ಸೌರಶಕ್ತಿ ಅಳವಡಿಕೆImage Credit source: The New Indian Express

ಬೆಂಗಳೂರು, ಫೆಬ್ರುವರಿ 07: ರಾಜ್ಯದಲ್ಲಿ ಸೌರಶಕ್ತಿ ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ವಿಧಾನಸೌಧ (Solar at Vidhana Soudha, Vikasa Soudha) ಹಾಗೂ ವಿಕಾಸಸೌಧ ಆವರಣದಲ್ಲಿ ಸೌರ ಫಲಕಗಳನ್ನು ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಿದೆ. ರಾಜ್ಯದ ಇತರೆ ಸರ್ಕಾರಿ ಕಟ್ಟಡಗಳಲ್ಲಿಯೂ, ವಿಶೇಷವಾಗಿ ಪಂಚಾಯತ್ ಕಚೇರಿಗಳಲ್ಲಿ ಸೌರಶಕ್ತಿ ಅಳವಡಿಕೆಗೆ ಪ್ರೇರಣೆ ಸಿಗಬೇಕೆನ್ನುವ ಉದ್ದೇಶದಿಂದ ಸರ್ಕಾರ ಈ ಕೆಲಸ ಕೈಗೆತ್ತಿಕೊಂಡಿದ್ದು, ಇದರಿಂದ ವಿಧಾನಸೌಧ ಹಾಗೂ ವಿಕಾಸಸೌಧಗಳಿಗೆ ಬರುವ ವಿದ್ಯುತ್​ ಬಿಲ್​ನಲ್ಲಿ ವರ್ಷಕ್ಕೆ ಲಕ್ಷಾಂತರ ರೂ. ಉಳಿತಾಯವಾಗುವ ನಿರೀಕ್ಷೆಯಿದೆ.

ಕಟ್ಟಡಕ್ಕೆ ಸುಮಾರು ಶೇ 12ರಷ್ಟು ವಿದ್ಯುತ್ ಪೂರೈಕೆ ಸೌರಫಲಕದಿಂದಲೇ!

ಈ ಯೋಜನೆಯನ್ನು ಸಾರ್ವಜನಿಕ–ಖಾಸಗಿ ಸಹಭಾಗಿತ್ವದಡಿ ಸುಸ್ಥಿರ ಇಂಧನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸೆಲ್ಕೋ ಫೌಂಡೇಶನ್ ಮೂಲಕ ಜಾರಿಗೊಳಿಸಲಾಗುತ್ತಿದೆ. ಐತಿಹಾಸಿಕ ಮಹತ್ವ ಹೊಂದಿರುವ ವಿಧಾನಸೌಧದಲ್ಲಿ ಜಾಗದ ಕೊರತೆ ಹಾಗೂ ಪರಂಪರಾ ಕಟ್ಟಡದ ಸ್ವರೂಪಕ್ಕೆ ಧಕ್ಕೆಯಾಗಬಾರದೆಂಬ ಕಾರಣದಿಂದ ಮೇಲ್ಛಾವಣಿಯಲ್ಲಿ ಸೌರ ಫಲಕಗಳನ್ನು ಅಳವಡಿಸಲಾಗಿಲ್ಲ. ಬದಲಾಗಿ, ಮುಖ್ಯ ಕಟ್ಟಡದ ಹೊರಭಾಗದಲ್ಲಿರುವ ಪಾರ್ಕಿಂಗ್ ಪ್ರದೇಶ ಸೇರಿದಂತೆ ಆವರಣದ ವಿವಿಧ ಭಾಗಗಳಲ್ಲಿ ಸೌರ ಫಲಕಗಳನ್ನು ಸ್ಥಾಪಿಸಲಾಗುತ್ತಿದೆ.

ಪ್ರಸ್ತುತ ವಿಧಾನಸೌಧ ಮತ್ತು ವಿಕಾಸಸೌಧ ಆವರಣದಲ್ಲಿ ವಿವಿಧ ಸ್ಥಳಗಳಲ್ಲಿ ಫಲಕ ಅಳವಡಿಕೆ ನಡೆಯುತ್ತಿದ್ದು, ಇದರಿಂದ ಸುಮಾರು 300 ಕಿಲೋವಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಇದು ಈ ಕಟ್ಟಡಗಳಿಗೆ ಅಗತ್ಯವಿರುವ ಒಟ್ಟು ವಿದ್ಯುತ್ ಬೇಡಿಕೆಯ ಸುಮಾರು 12 ಶೇಕಡಾ ಮಾತ್ರವಾಗಿದ್ದು, ಕಟ್ಟಡದ ವಿಸ್ತೀರ್ಣ ದೊಡ್ಡದಾದರೂ ಸಂಪೂರ್ಣವಾಗಿ ಸೌರ ಫಲಕ ಅಳವಡಿಸಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಯೋಜನೆಯಿಂದ ವರ್ಷಕ್ಕೆ 20 ಲಕ್ಷ ರೂ. ಉಳಿತಾಯವಾಗುತ್ತಾ?

ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಅಳವಡಿಸಲಾಗುತ್ತಿರುವ ಸೌರ ಫಲಕಗಳಿಂದ ಸರ್ಕಾರಕ್ಕೆ ಮಹತ್ವದ ಆರ್ಥಿಕ ಉಳಿತಾಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಎರಡು ಭವ್ಯ ಕಟ್ಟಡಗಳಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಕೊಠಡಿಗಳಿದ್ದು, ಪ್ರತಿ ತಿಂಗಳು 12 ಲಕ್ಷದಿಂದ 15 ಲಕ್ಷ ರೂ.ವರೆಗೆ ವಿದ್ಯುತ್ ಬಿಲ್ ಬರುತ್ತಿದೆ. ಇದೀಗ 300 ಕಿಲೋವಾಟ್ ಸಾಮರ್ಥ್ಯದ ಸೌರ ಫಲಕ ಅಳವಡಿಕೆಯಿಂದ ವರ್ಷಕ್ಕೆ ಸುಮಾರು 20 ಲಕ್ಷ ರೂ. ಉಳಿತಾಯವಾಗುವ ನಿರೀಕ್ಷೆ ಇದೆ. ಯೋಜನೆಯಿಂದ ಎರಡು ವರ್ಷಗಳೊಳಗೆ ಹೂಡಿಕೆಯ ಲಾಭ ದೊರಕಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 10:35 am, Sat, 7 February 26

Source link

Leave a Reply

Your email address will not be published. Required fields are marked *