ವಿಮಲ್ ಏಲಕ್ಕಿ ಜಾಹೀರಾತು: ಶಾರುಖ್, ಅಜಯ್ ದೇವಗನ್, ಟೈಗರ್ ಶ್ರಾಫ್​ಗೆ ನೋಟೀಸ್ – Kannada News | Vimal Elaichi ad, Maharashtra FDA sends notice to Bollywood stars Shahrukh Khan, Ajay Devgn, Tiger Shroff

ಮುಂಬೈ, ಆಗಸ್ಟ್ 17: ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (FDA) ಇತ್ತೀಚೆಗೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್‌ಗೆ ನೋಟಿಸ್ ಜಾರಿ ಮಾಡಿದೆ. ಈ ನಟರು “ವಿಮಲ್ ಏಲಕ್ಕಿ” (Vimal Elaichi) ಉತ್ಪನ್ನದ ಜಾಹೀರಾತಿನಲ್ಲಿ ನಟಿಸಿದ್ದಾರೆ. ಆದರೆ, ಇದು ಮಹಾರಾಷ್ಟ್ರದಲ್ಲಿ ನಿಷೇಧಿಸಲ್ಪಟ್ಟಿರುವ “ವಿಮಲ್ ಪಾನ್ ಮಸಾಲ” (Vimal Pan Masala) ಉತ್ಪನ್ನವನ್ನು ತೋರ್ಪಡಿಸುವ ಪರೋಕ್ಷ ಜಾಹೀರಾತು (Surrogate Advertising) ಎಂದು ಎಫ್‌ಡಿಎ ಶಂಕಿಸಿದೆ. ಹೀಗಾಗಿ, ಮಹಾರಾಷ್ಟ್ರ ಎಫ್​ಡಿಎ ಈ ನೋಟೀಸ್ ನೀಡಿದೆ.

ನಿಯಮಗಳ ಉಲ್ಲಂಘನೆ: ಮಹಾರಾಷ್ಟ್ರದಲ್ಲಿ ತಂಬಾಕು ಅಥವಾ ನಿಕೋಟಿನ್ ಹೊಂದಿರುವ ಪಾನ್ ಮಸಾಲಾ ಮಾರಾಟ ಮತ್ತು ಪ್ರಚಾರವನ್ನು ಈಗಾಗಲೇ ನಿಷೇಧಿಸಲಾಗಿದೆ. ಈ ಜಾಹೀರಾತು ಆ ಬ್ರಾಂಡ್‌ನ ಹೆಸರನ್ನು ಬಳಸಿಕೊಂಡು ಪರೋಕ್ಷವಾಗಿ ನಿಷೇಧಿತ ಉತ್ಪನ್ನವನ್ನು ಪ್ರಚಾರ ಮಾಡುತ್ತಿದೆ ಎಂದು ಎಫ್‌ಡಿಎ ಆರೋಪಿಸಿದೆ.

ಇದನ್ನೂ ಓದಿ: ಝೂಮ್ ಕಾಲ್​ನಲ್ಲಿ 900 ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕಿದ್ದ ಸಿಇಒಗೆ ಈಗ ಹೋಯ್ತು ಕೆಲಸ

ನೋಟಿಸ್‌ನ ವಿವರ: ಈ ನಟರು ತಾವು ಜಾಹೀರಾತಿನಲ್ಲಿ ನಟಿಸಿರುವುದಕ್ಕೆ ಸಂಬಂಧಿಸಿದಂತೆ 15 ದಿನಗಳ ಒಳಗಾಗಿ ಲಿಖಿತ ಸಮಜಾಯಿಷಿಯನ್ನು ನೀಡುವಂತೆ ಎಫ್‌ಡಿಎ ಕೇಳಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006 ರ ಅಡಿಯಲ್ಲಿ ಈ ನೋಟಿಸ್ ನೀಡಲಾಗಿದ್ದು, ತಪ್ಪಿತಸ್ಥರೆಂದು ಸಾಬೀತಾದರೆ ದಂಡದ ಕ್ರಮಗಳನ್ನು ಎದುರಿಸಬೇಕಾಗಬಹುದು. ಈ ಕಾಯ್ದೆಯ ಸೆಕ್ಷನ್ 24ರ ಪ್ರಕಾರ, ದಾರಿ ತಪ್ಪಿಸುವ ಆಹಾರ ಜಾಹೀರಾತು ಮಾಡಿದರೆ 10 ಲಕ್ಷ ರೂವರೆಗೂ ದಂಡ ವಿಧಿಸಲು ಅವಕಾಶ ಇರುತ್ತದೆ.

ಮಹಾರಾಷ್ಟ್ರ ಎಫ್‌ಡಿಎ ಇತ್ತೀಚಿನ ದಿನಗಳಲ್ಲಿ ತಂಬಾಕು ಮತ್ತು ಪಾನ್ ಮಸಾಲಾ ವಿರೋಧಿ ಅಭಿಯಾನವನ್ನು ತೀವ್ರಗೊಳಿಸಿದ್ದು, ಪರೋಕ್ಷ ಜಾಹೀರಾತುಗಳ ವಿರುದ್ಧವೂ ಕಠಿಣ ಕ್ರಮಕ್ಕೆ ಮುಂದಾಗಿದೆ.

ಇದನ್ನೂ ಓದಿ: 2040ರಲ್ಲಿ ಅಮೆರಿಕ, ಯೂರೋಪ್​ಗಿಂತ ದಕ್ಷಿಣ ಏಷ್ಯಾದಲ್ಲಿ ಕಡಿಮೆ ಬಡವರು?; ವಿಶ್ವಬ್ಯಾಂಕ್ ದತ್ತಾಂಶ ಅಚ್ಚರಿ ಎನಿಸಿದರೂ ಸತ್ಯ

ವಿಮಲ್ ಇಲಾಯ್ಚಿ ಅಥವಾ ಏಲಕ್ಕಿ ಮೌತ್ ಫ್ರೆಶ್ನರ್ ಆಗಿ ಕೆಲಸ ಮಾಡುತ್ತದೆ. ಇದರಲ್ಲಿ ತಂಬಾಕು ಇರುವುದಿಲ್ಲ. ಆದರೆ, ವಿಮಲ್ ಬ್ರ್ಯಾಂಡ್ ಸಂಪೂರ್ಣವಾಗಿ ಪಾನ್ ಮಸಾಲಗೆ ಜೋಡಿತವಾಗಿದೆ. ಹೀಗಾಗಿ, ವಿಮಲ್ ಬ್ರ್ಯಾಂಡ್​ನಲ್ಲಿ ಏಲಕ್ಕಿ ಪ್ರಚಾರ ಮಾಡಿದರೂ ಅದು ಪರೋಕ್ಷವಾಗಿ ಪಾನ್ ಮಸಾಲಗೆ ಪ್ರಚಾರ ಮಾಡಿದಂತೆನಿಸುತ್ತದೆ. ಪಾನ್ ಮಸಾಲದಲ್ಲಿ ಹಾನಿಕಾರಕ ತಂಬಾಕು ಇದ್ದು, ಇದು ಬಾಯಿಯಲ್ಲಿ ಕ್ಯಾನ್ಸರ್ ಹುಟ್ಟಲು ಕಾರಣವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *