ನವದೆಹಲಿ, ಮೇ 7: ಚಂಡೀಗಢ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ನಡೆದ ಇಂಡಿಗೋ ವಿಮಾನದಲ್ಲಿನ (IndiGo Flight) ಬೆಂಕಿ ದುರಂತದ ಘಟನೆಯು ನಾಗರಿಕ ವಿಮಾನಯಾನದ ಇತ್ತೀಚಿನ ಪವರ್ ಬ್ಯಾಂಕ್ ನಿಯಮಗಳು ಮತ್ತು ಮಾರ್ಗಸೂಚಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ವಿಮಾನದ ಲ್ಯಾಂಡಿಂಗ್ ನಂತರ ಕ್ಯಾಬಿನ್ ಒಳಗೆ ಪವರ್ ಬ್ಯಾಂಕ್ ಬೆಂಕಿ ಹೊತ್ತಿಕೊಂಡ ನಂತರ ವಿಮಾನವನ್ನು ಸ್ಥಳಾಂತರಿಸಲಾಯಿತು. ಇದರಿಂದ ದೊಡ್ಡ ದುರಂತ ತಪ್ಪಿತ್ತು.
ಲಿಥಿಯಂ ಬ್ಯಾಟರಿ ಸಂಬಂಧಿತ ಬೆಂಕಿ ಅವಘಡಗಳ ಬಗ್ಗೆ ಹೆಚ್ಚುತ್ತಿರುವ ಕಳವಳಗಳು ಮತ್ತು ವಿಶ್ವಾದ್ಯಂತ ವಿಮಾನಯಾನ ಸಂಸ್ಥೆಗಳು ಮತ್ತು ನಿಯಂತ್ರಕರಿಂದ ಹೆಚ್ಚುತ್ತಿರುವ ನಿರ್ಬಂಧಗಳ ನಡುವೆ, ಭಾರತದ ವಾಯುಯಾನ ನಿಯಂತ್ರಕವು (ಡಿಜಿಸಿಎ) ವಿಮಾನಗಳಲ್ಲಿ ಪವರ್ ಬ್ಯಾಂಕ್‌ಗಳನ್ನು ಸಾಗಿಸುವ ಮತ್ತು ಬಳಸುವ ಜಾಗತಿಕ ಮಾನದಂಡಗಳನ್ನು ಪರಿಶೀಲಿಸುತ್ತಿದೆ.
ಇದನ್ನೂ ಓದಿ: ಪ್ರಯಾಣಿಕರ ಪವರ್ ಬ್ಯಾಂಕ್ನಿಂದ ಬೆಂಕಿ; ಇಂಡಿಗೋ ವಿಮಾನದಲ್ಲಿ ತಪ್ಪಿದ ಭಾರೀ ದುರಂತ
ವಿಮಾನ ಲ್ಯಾಂಡ್ ಆಗುವ ಸ್ವಲ್ಪ ಸಮಯದ ನಂತರ ವಿಮಾನದೊಳಗೆ ಪವರ್ ಬ್ಯಾಂಕ್ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನವನ್ನು ಸ್ಥಳಾಂತರಿಸಲಾಗಿತ್ತು. ಈ ವೇಳೆ ಕ್ಯಾಬಿನ್‌ನಲ್ಲಿ ಹೊಗೆ ತುಂಬಿ, ವಿಮಾನದಲ್ಲಿದ್ದ ಪ್ರಯಾಣಿಕರು ಭಯಭೀತರಾಗಿದ್ದರು. 6 ಜನ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇತರರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿತ್ತು.
ಈ ಘಟನೆಯು ವಿಮಾನದ ಕ್ಯಾಬಿನ್‌ಗಳ ಒಳಗೆ ಲಿಥಿಯಂ-ಐಯಾನ್ ಬ್ಯಾಟರಿಗಳಿಂದ ಉಂಟಾಗುವ ಅಪಾಯಗಳ ಬಗ್ಗೆ ಹೆಚ್ಚಿನ ಕಳವಳವನ್ನು ಉಂಟುಮಾಡಿದೆ. ಅಲ್ಲಿ ಹೆಚ್ಚು ಬಿಸಿಯಾಗುವ ಸಾಧನಗಳು ಸುರಕ್ಷತಾ ಅಪಾಯಗಳನ್ನು ತಂದೊಡ್ಡಬಹುದು.
ಇದನ್ನೂ ಓದಿ: ಆಂಬ್ಯುಲೆನ್ಸ್ ಸಿಗದೆ ಮೃತ ಮಗನ ಶವವನ್ನು ತಳ್ಳುವ ಗಾಡಿಯಲ್ಲಿ ಹೊತ್ತೊಯ್ದ ಪೋಷಕರು
ಡಿಜಿಸಿಎ ನಿಯಮಗಳೇನು?:
ಡಿಜಿಸಿಎ ನಿಯಮಗಳ ಪ್ರಕಾರ ವಿಮಾನದಲ್ಲಿ ಪವರ್ ಬ್ಯಾಂಕ್ ತೆಗೆದುಕೊಂಡು ಹೋಗಲೇಬಾರದು ಎಂಬ ನಿಯಮಗಳನ್ನು ಜಾರಿಗೊಳಿಸಿಲ್ಲ. ಆದರೆ, ಲಗೇಜ್ ಬ್ಯಾಗ್ಗಳಲ್ಲಿ ಪವರ್ ಬ್ಯಾಂಕ್ ಇಡುವಂತಿಲ್ಲ. ಹ್ಯಾಂಡ್ ಬ್ಯಾಗ್ಗಳಲ್ಲಿ ಮಾತ್ರ ಪವರ್ ಬ್ಯಾಂಕ್ ಕೊಂಡೊಯ್ಯಬಹುದು. ಹಾಗೇ, ಆ ಹ್ಯಾಂಡ್ ಬ್ಯಾಗ್ಗಳನ್ನು ವಿಮಾನದ ಸೀಟುಗಳ ಮೇಲಿರುವ ಕಂಪಾರ್ಟ್ಮೆಂಟ್ಗಳಲ್ಲಿ ಇಡುವಂತಿಲ್ಲ. ಅದನ್ನು ಕೈನಲ್ಲೇ ಇಟ್ಟುಕೊಂಡು ಕುಳಿತುಕೊಳ್ಳಬೇಕು. ಏಕೆಂದರೆ ವಿಮಾನದ ಸೀಟಿನ ಮೇಲ್ಭಾಗದಲ್ಲಿ ಮತ್ತು ಲಗೇಜ್ ಹಾಕುವ ಕ್ಯಾಬಿನ್ಗಳಲ್ಲಿ ಬಿಸಿ ಹೆಚ್ಚಾಗಿರುವುದರಿಂದ ಇಂತಹ ಸಾಧನಗಳು ಸ್ಫೋಟಗೊಳ್ಳುವ ಅಪಾಯ ಹೆಚ್ಚಿರುತ್ತದೆ. ಅಲ್ಲದೆ, ಒಂದುವೇಳೆ ಬೆಂಕಿ ಹೊತ್ತಿಕೊಂಡರೂ ಯಾವ ಬ್ಯಾಗ್ನಿಂದ ಈ ರೀತಿಯಾಗಿದೆ ಎಂದು ಪತ್ತೆಹಚ್ಚಲು ಸಮಯ ಬೇಕಾಗುತ್ತದೆ. ಹೀಗಾಗಿ, ಅಂತಹ ಯಾವುದೇ ವಸ್ತುಗಳನ್ನು ಸೀಟಿನ ಮೇಲ್ಭಾಗದಲ್ಲಿ ಇಡುವಂತಿಲ್ಲ. ಪವರ್ ಬ್ಯಾಂಕ್‌ಗಳು, ಪೋರ್ಟಬಲ್ ಚಾರ್ಜರ್‌ಗಳು ಮತ್ತು ಲಿಥಿಯಂ ಬ್ಯಾಟರಿಗಳನ್ನು ಹೊಂದಿರುವ ಅಂತಹುದೇ ಸಾಧನಗಳು ಇಗ್ನಿಷನ್ ಮೂಲಗಳಾಗಿ ಕಾರ್ಯನಿರ್ವಹಿಸಬಹುದು. ಇದು ಬೆಂಕಿ ಹೊತ್ತಿಕೊಳ್ಳಲು ಕಾರಣವಾಗಬಹುದು ಎಂದು DGCA ತನ್ನ ಸಲಹೆಯಲ್ಲಿ ತಿಳಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ