ಟಿ20 ವಿಶ್ವಕಪ್ನಲ್ಲಿ ಝಿಂಬಾಬ್ವೆ ತಂಡದ ಆರಂಭಿಕ ದಾಂಡಿಗ ಬ್ರಿಯಾನ್ ಬೆನ್ನೆಟ್ (brian bennett) ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಸಹ ಬರೋಬ್ಹರಿ 180 ರನ್ಗಳನ್ನು ಪೇರಿಸುವ ಮೂಲಕ. ಅಂದರೆ ವಿಶ್ವಕಪ್ ಇತಿಹಾಸದಲ್ಲಿ ಔಟ್ ಆಗುವ ಮುನ್ನ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ದಾಖಲೆ ಬ್ರಿಯಾನ್ ಹೆಸರಿಗೆ ಸೇರ್ಪಡೆಯಾಗಿದೆ.
ಈ ಬಾರಿಯ ವಿಶ್ವಕಪ್ನಲ್ಲಿ ಒಮಾನ್ ವಿರುದ್ಧ ಅಜೇಯ 48 ರನ್ ಬಾರಿಸಿದ್ದ ಬ್ರಿಯಾನ್ ಬೆನ್ನೆಟ್, ದ್ವಿತೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಅಜೇಯ 64 ರನ್ ಗಳಿಸಿದ್ದರು. ಇನ್ನು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅಜೇಯ 63 ರನ್ ಬಾರಿಸಿದ್ದರು.
ಅಂದರೆ ಮೊದಲ ಮೂರು ಇನಿಂಗ್ಸ್ಗಳಲ್ಲಿ ಬ್ರಿಯಾನ್ ಬೆನ್ನೆಟ್ ಔಟ್ ಆಗಿರಲಿಲ್ಲ. ಆದರೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಬ್ರಿಯಾನ್ ಬೆನ್ನೆಟ್ ಕೇವಲ 5 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.
ಈ ಮೂಲಕ ಕಳೆದ 4 ಇನಿಂಗ್ಸ್ಗಳ ಮೂಲಕ ಬ್ರಿಯಾನ್ ಬೆನ್ನೆಟ್ ಬರೋಬ್ಬರಿ 180 ರನ್ಗಳಿಸಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲೇ ಔಟಾಗುವ ಮುನ್ನ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ವಿರಾಟ್ ಕೊಹ್ಲಿಯ ಹೆಸರಿನಲ್ಲಿತ್ತು.
2022 ರ ಟಿ20 ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಮೊದಲ ಮೂರು ಇನಿಂಗ್ಸ್ಗಳಲ್ಲಿ 82*, 62*, 12 ರನ್ ಬಾರಿಸಿದ್ದರು. ಈ ಮೂಲಕ 156 ರನ್ ಬಾರಿಸಿ ಟಿ20 ವಿಶ್ವಕಪ್ನಲ್ಲಿ ಔಟಾಗುವ ಮುನ್ನ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದರು.
ಇದೀಗ 48*, 64*, 63*, 5 ರನ್ಗಳಿಸುವ ಮೂಲಕ ಬ್ರಿಯಾನ್ ಬೆನ್ನೆಟ್ ಒಟ್ಟು 180 ರನ್ ಕಲೆಹಾಕಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿಯ ದಾಖಲೆ ಮುರಿದು ಟಿ20 ವಿಶ್ವಕಪ್ನಲ್ಲಿ ಔಟಾಗುವ ಮುನ್ನ ಅತೀ ಅತೀ ಹೆಚ್ಚು ರನ್ಗಳಿಸಿದ ಬ್ಯಾಟ್ಸ್ಮನ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
Published On – 9:09 am, Tue, 24 February 26
