ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇತ್ತೀಚೆಗೆ ವಿವಾಹ ಆಗಿದ್ದಾರೆ. ಇವರ ಮದುವೆ ಬಗ್ಗೆ ಎಲ್ಲ ಕಡೆಗಳಲ್ಲೂ ಚರ್ಚೆ ಆಯಿತು. ಇವರ ವಿವಾಹ ಫೋಟೋಗೆ ಕೋಟಿ ಕೋಟಿ ಲೈಕ್ಸ್ ಸಿಕ್ಕಿದೆ. ರಶ್ಮಿಕಾ ಮಂದಣ್ಣ ಅವರು ವಿವಾಹದ ಬಳಿಕ ಪತಿ ವಿಜಯ್ ಜೊತೆ ತಿರುಪತಿಗೆ ಭೇಟಿ ಕೊಟ್ಟಿದ್ದರು. ಈಗ ಇವರು ಮದುವೆ ಬಳಿಕವೂ ಸಂಪ್ರದಾಯವನ್ನು ಮುಂದುವರಿಸಿದ್ದಾರೆ.
ಕೆಲವರು ಕೆಲಸದ ಕಾರಣಕ್ಕೆ ಬೇರೆ ಕಡೆಗಳಿಗೆ ತೆರಳುತ್ತಾರೆ. ಆದರೆ, ಮದುವೆ ಬಳಿಕ ಹುಟ್ಟೂರಿಗೆ ಭೇಟಿ ಕೊಡೋದು ಸಂಪ್ರದಾಯ. ಈ ಸಂಪ್ರದಾಯವನ್ನು ವಿಜಯ್ ಹಾಗೂ ರಶ್ಮಿಕಾ ಮರೆತಿಲ್ಲ. ಹೌದು, ಮದುವೆ ಆದ ಬಳಿಕ ವಿಜಯ್ ದೇವರಕೊಂಡ ಸ್ವಂತ ಊರಿಗೆ ದಂಪತಿ ತೆರಳಿದ್ದಾರೆ. ತೆಲಂಗಾಣದ ನಾಗರ್ ಕರ್ನೋಲ್ ತುಮ್ಮನ್ಪೆಟ್ಗೆ ಭೇಟಿ ಕೊಟ್ಟಿದ್ದಾರೆ.
ವಿಜಯ್ ಅವರು ಸ್ವಂತ ಊರಲ್ಲಿ ಫಾರ್ಮ್ಹೌಸ್ ಹೊಂದಿದ್ದಾರೆ. ಅಲ್ಲಿ ಇಂದು (ಮಾರ್ಚ್ 2) ಸತ್ಯನಾರಾಯಣ ಪೂಜೆ ಮಾಡಿಸಿದ್ದಾರೆ. ಅಲ್ಲದೆ, ಗ್ರಾಮದ 2000ಕ್ಕೂ ಹೆಚ್ಚು ಜನಕ್ಕೆ ಅನ್ನದಾನ ವ್ಯವಸ್ಥೆ ಮಾಡಲಾಗಿದೆ. ರಶ್ಮಿಕಾ ಹಾಗೂ ವಿಜಯ್ ಊರಿಗೆ ಬರುತ್ತಿದ್ದಂತೆ ಎಲ್ಲರೂ ಅವರನ್ನು ಪ್ರೀತಿಯಿಂದ ಸ್ವಾಗತಿಸಿದರು. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ತಿರುಪತಿಗೆ ಭೇಟಿ ನೀಡಿದಾಗಲೂ ರಶ್ಮಿಕಾ ಹಾಗೂ ವಿಜಯ್ ಅವರನ್ನು ಅಭಿಮಾನಿಗಳು ಮುತ್ತಿಕೊಂಡಿದ್ದರು.
Hero #VijayDeverakonda & #RashmikaMandanna have arrived at Thummanpet village in #Nagarkurnool district.
Villagers extended a warm welcome to the newlyweds.
#ViRosh #ViRoshWedding pic.twitter.com/S8ccfOmMKa
— Milagro Movies (@MilagroMovies) March 2, 2026
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಹಲವು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಈ ವಿಷಯವನ್ನು ದಂಪತಿ ಮುಚ್ಚಿಟ್ಟಿದ್ದರು. ವಿವಾಹ ಆಗುವ ಹಲವು ವರ್ಷಗಳ ಪ್ರೀತಿಗೆ ಹೊಸ ಅರ್ಥ ನೀಡಿದ್ದಾರೆ. ರಶ್ಮಿಕಾ ಹಾಗೂ ವಿಜಯ್ ಒಟ್ಟಾಗಿ ಸಿನಿಮಾ ಕೂಡ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ.
ಇದನ್ನೂ ಓದಿ: ತಮ್ಮ ವಿವಾಹದ ಬಳಿಕ ಮತ್ತೊದು ಮದುವೆಗೆ ಹಾಜರಿ ಹಾಕಿದ ವಿಜಯ್-ರಶ್ಮಿಕಾ
ರಶ್ಮಿಕಾ ವಿವಾಹದ ಕುರಿತು ಒಂದು ವರ್ಗದ ಜನರು ಅಪಸ್ವರ ತೆಗೆದಿದ್ದಾರೆ. ಆದರೆ, ಇದಕ್ಕೆ ರಶ್ಮಿಕಾ ಮಂದಣ್ಣ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಟೀಕೆಗಳಿಗೆ ಕಿವಿಕೊಡದೆ ಇಬ್ಬರೂ ಹಾಯಾಗಿ ಜೀವನ ಸಾಗಿಸುತ್ತಾ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
