ಕಾಲಿವುಡ್ ಸೂಪರ್ ಸ್ಟಾರ್ ಧನುಷ್ (Dhanush) ತಮ್ಮ ಮಗ ಲಿಂಗನಿಗೆ ವೇದಿಕೆ ಮೇಲೆಯೇ ಪ್ರೀತಿಯಿಂದ ಎಚ್ಚರಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೆಂಡ್ ಸೃಷ್ಟಿಸಿದೆ. ಇತ್ತೀಚೆಗೆ ನಡೆದ ರಕ್ತದಾನ ಶಿಬಿರದಲ್ಲಿ ಭಾಗಿ ಆಗಿದ್ದ ಧನುಷ್ ತಮ್ಮ ಸಿನಿಮಾದ ಸೂಪರ್ ಹಿಟ್ ಡೈಲಾಗ್ ಅನ್ನೇ ಮಗನಿಗೆ ಹೇಳುವ ಮೂಲಕ ನೆರೆದಿದ್ದವರಲ್ಲಿ ನಗೆಯ ಅಲೆ ಎಬ್ಬಿಸಿದ್ದಾರೆ. ಪ್ರಸ್ತುತ ಈ ಫನ್ನಿ ವಿಡಿಯೋ ಇಂಟರ್ನೆಟ್ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
ಮಗನ ಮುಖ ನೋಡಿ ‘ಮಾರಿ’ ಡೈಲಾಗ್ ಹೊಡೆದ ಧನುಷ್
ಕಾರ್ಯಕ್ರಮದಲ್ಲಿ ಮೈಕ್ ಹಿಡಿದು ಮಾತನಾಡುತ್ತಿದ್ದ ನಟ ಧನುಷ್, ಅಲ್ಲಿಯೇ ನಿಂತಿದ್ದ ತಮ್ಮ ಮಗನನ್ನು ಉದ್ದೇಶಿಸಿ ‘ಎಲ್ಲಿದ್ದೀಯಾ ಲಿಂಗಾ? ಲಿಂಗಾ ಬೇಬಿ…’ ಎಂದು ಕರೆದಿದ್ದಾರೆ. ಮಗ ಮುಗುಳ್ನಗುತ್ತಿರೋದನ್ನು ನೋಡಿದ ಧನುಷ್, ತಮ್ಮದೇ ನಟನೆಯ ಬ್ಲಾಕ್ಬಸ್ಟರ್ ‘ಮಾರಿ 2’ ಚಿತ್ರದ ಫೇಮಸ್ ಇಂಗ್ಲಿಷ್ ಡೈಲಾಗ್ ಹೇಳಿದ್ದಾರೆ, ‘ಇಫ್ ಯು ಆರ್ ಬ್ಯಾಡ್, ಐ ಆ್ಯಮ್ ಯುವರ್ ಡ್ಯಾಡ್’ ಎಂದು ಖಡಕ್ ಆಗಿ ಹೇಳಿದ್ದಾರೆ. ತಂದೆಯ ಈ ಆಶು ಮಾತುಗಳನ್ನು ಕೇಳಿ ಮಗ ಲಿಂಗಾ ಹಾಗೂ ಪಕ್ಕದಲ್ಲೇ ಕುಳಿತಿದ್ದ ಕುಟುಂಬದವರು ಜೋರಾಗಿ ನಗಲು ಪ್ರಾರಂಭಿಸಿದ್ದಾರೆ.
Wathalakka apdiye copy paste 🤣🤣🤣🤣🤣 pic.twitter.com/KH56OxvAny
— R O H I T H (@Rohithkanna1128) July 28, 2026
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್
ಧನುಷ್ ಅವರ ಈ ಮಾಸ್ ಮತ್ತು ಫನ್ನಿ ಅವತಾರಕ್ಕೆ ನೆರೆದಿದ್ದ ಅಭಿಮಾನಿಗಳು ಚಪ್ಪಾಳೆ ಹಾಗೂ ಶಿಳ್ಳೆಗಳ ಮೂಲಕ ಜೈಕಾರ ಹಾಕಿದ್ದಾರೆ. ತಂದೆ-ಮಗನ ನಡುವಿನ ಈ ಸುಂದರ ಹಾಗೂ ತಮಾಷೆಯ ಕ್ಷಣವನ್ನು ಅಭಿಮಾನಿಗಳು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಸದ್ಯ ಇದು ಇನ್ಸ್ಟಾಗ್ರಾಮ್ ಮತ್ತು ಎಕ್ಸ್ ಖಾತೆಗಳಲ್ಲಿ ಸಖತ್ ಶೇರ್ ಆಗುತ್ತಿದೆ. ಸಿನಿಮಾಗಳಲ್ಲಿ ಸದಾ ಬ್ಯುಸಿಯಾಗಿರುವ ಧನುಷ್, ತಮ್ಮ ಮಕ್ಕಳೊಂದಿಗೆ ಇಂತಹ ಮಜಾವಾದ ಸಮಯ ಕಳೆಯುವುದನ್ನು ಕಂಡು ಫ್ಯಾನ್ಸ್ ಕೂಡ ಮನಸೋತಿದ್ದಾರೆ.
ಇದನ್ನೂ ಓದಿ: ದಳಪತಿ ವಿಜಯ್ ಹಾದಿಯಲ್ಲಿ ಧನುಷ್; ರಾಜಕೀಯ ಪ್ರವೇಶದ ಸುಳಿವು ನೀಡಿದ ನಟ
ಡಿವೋರ್ಸ್ ಪಡೆದ ಧನುಷ್
ಧನುಷ್ ಹಾಗೂ ರಜನಿಕಾಂತ್ ಮಗಳು ಐಶ್ವರ್ಯಾ ವಿವಾಹ ಆಗಿ ಹಲವು ವರ್ಷ ಸಂಸಾರ ನಡೆಸಿದ್ದರು. ಆದರೆ, ಇತ್ತೀಚೆಗೆ ಇವರು ವಿಚ್ಛೇದನ ಪಡೆದಿದ್ದಾರೆ. ಇಬ್ಬರ ಸಂಬಂಧ ಕೊನೆಯಾಗಿದೆ. ಮಕ್ಕಳನ್ನು ಸಾಕೋ ಜವಾಬ್ದಾರಿ ಇಬ್ಬರಿಗೂ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.