‘ವೈಭವ್​ನ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹೊಣೆ’; ರಾಹುಲ್ ದ್ರಾವಿಡ್ – Kannada News | Rahul Dravid on Vaibhav Sooryavanshi’s Talent and International Cricket Opportunity

ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಲು ಸಜ್ಜಾಗಿರುವ ವೈಭವ್ ಸೂರ್ಯವಂಶಿಗೆ (Vaibhav Sooryavanshi) ಯಾವ ಸರಣಿಯಲ್ಲಿ ತಂಡದಲ್ಲಿ ಆಡುವ ಅವಕಾಶ ಸಿಗುತ್ತದೆ ಎಂಬುದು ಇದುವರೆಗೆ ಖಚಿತವಾಗಿಲ್ಲ. ಆದರೆ ಐರ್ಲೆಂಡ್ ಅಥವಾ ಇಂಗ್ಲೆಂಡ್‌ ವಿರುದ್ಧದ ಯಾವುದಾದರೂ ಒಂದು ಸರಣಿಯಲ್ಲಾದರೂ ವೈಭವ್ ಆಡುವುದು ಖಚಿತ. ಹೀಗಾಗಿ ವೈಭವ್​ಗೆ ಎಲ್ಲೆಡೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಈಗಾಗಲೇ ಕ್ರಿಕೆಟ್ ಪಂಡಿತರು ವೈಭವ್​ಗೆ ಸಲಹೆಗಳನ್ನು ನೀಡುವುದರ ಜೊತೆಗೆ ಕೆಲವು ಎಚ್ಚರಿಕೆಗಳನ್ನು ನೀಡಿದ್ದಾರೆ. ಈ ನಡುವೆ, ವೈಭವ್ ಸೂರ್ಯವಂಶಿನ ಐಪಿಎಲ್‌ಗೆ ಪರಿಚಯಿಸಿದ ರಾಹುಲ್ ದ್ರಾವಿಡ್, ಸೂರ್ಯವಂಶಿ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ವೈಭವ್ ಈ ಮಟ್ಟವನ್ನು ತಲುಪಲು ಸಾಕಷ್ಟು ಶ್ರಮಿಸಿದ್ದಾರೆ. ಆದರೆ ಅವರನ್ನು ರಕ್ಷಿಸುವುದು ಬಹಳ ಮುಖ್ಯ. ಅವನಿಗೆ ಮುಕ್ತವಾಗಿ ಆಡುವ ಸ್ವಾತಂತ್ರ್ಯವನ್ನು ನೀಡಬೇಕು ಎಂದಿದ್ದಾರೆ.

ವೈಭವ್ ಬಗ್ಗೆ ದ್ರಾವಿಡ್ ಹೇಳಿದ್ದೇನು?

ವೈಭವ್ ಸೂರ್ಯವಂಶಿ ಅವರ ಚೊಚ್ಚಲ ಪಂದ್ಯಕ್ಕೂ ಮುನ್ನ ಬಿಬಿಸಿ ಜೊತೆ ಮಾತನಾಡಿದ ರಾಹುಲ್ ದ್ರಾವಿಡ್, ‘ವೈಭವ್ ಅವರನ್ನು ಸುರಕ್ಷಿತವಾಗಿಡುವುದು ಮುಖ್ಯ. ಅವರಿಗೆ ಬೆಂಬಲ ಮತ್ತು ಸಹಾಯ ಬೇಕು. ಆದಾಗ್ಯೂ, ಅವರಿಗೆ ಮುಕ್ತವಾಗಿ ಆಡಲು ಸ್ವಾತಂತ್ರ್ಯ ನೀಡಬೇಕು. ವೈಭವ್ ತುಂಬಾ ವಿಶೇಷ ವ್ಯಕ್ತಿ ಮತ್ತು ಅವರಂತಹ ಕ್ರಿಕೆಟಿಗನನ್ನು ಹುಟ್ಟಿಹಾಕಲು ಯಾವುದೇ ಸೂತ್ರವಿಲ್ಲ . ಅವರು ಅಸಾಧಾರಣ ಪ್ರತಿಭೆ. ಅವರು ಬೌಲರ್‌ಗಳ ಚಲನವಲನಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಬಲ್ಲರು ಮತ್ತು ಅವರ ಕ್ರಿಕೆಟ್ ತಿಳುವಳಿಕೆ ಮತ್ತು ನಿರ್ಭೀತ ವರ್ತನೆ ಅದ್ಭುತವಾಗಿದೆ. ಸೂರ್ಯವಂಶಿಯಂತಹ ಆಟಗಾರನನ್ನು ಸೃಷ್ಟಿಸಲು ಯಾವುದಾದರೂ ಸಿದ್ಧ ಅಸ್ತ್ರವಿದೆ ಎಂದು ನಾನು ಭಾವಿಸುವುದಿಲ್ಲ. ನೀವು ಯಾವುದೇ ಮಗುವನ್ನು ತೆಗೆದುಕೊಂಡು ಅವನಿಗೆ ಎಲ್ಲಾ ರೀತಿಯ ತರಬೇತಿಯನ್ನು ನೀಡಿದರು ಅವನು ಇಷ್ಟು ಒಳ್ಳೆಯ ಆಟಗಾರನಾಗುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ’ ಎಂದಿದ್ದಾರೆ.

ಐರ್ಲೆಂಡ್ ವಿರುದ್ಧ ಅಬ್ಬರಿಸುವ ಮುನ್ನವೇ ಭಾರತದ ಬೌಲರ್​ಗಳ ಬೆಂಡೆತ್ತಿದ ವೈಭವ್; ವಿಡಿಯೋ

ಸೂರ್ಯವಂಶಿಗೆ ಅವಕಾಶ ಸಿಗುತ್ತಾ?

ವೈಭವ್ ಸೂರ್ಯವಂಶಿ ಐರ್ಲೆಂಡ್ ಸರಣಿಯಲ್ಲಿ ಪಾದಾರ್ಪಣೆ ಮಾಡುವುದು ಸ್ವಲ್ಪ ಕಷ್ಟ. ಇಲ್ಲಿ ದೊಡ್ಡ ಪ್ರಶ್ನೆ ಏನೆಂದರೆ, ವೈಭವ್ ಸೂರ್ಯವಂಶಿಗೆ ಅವಕಾಶ ನೀಡಿದರೆ, ಪ್ಲೇಯಿಂಗ್​ 11ನಿಂದ ಯಾರನ್ನು ಕೈಬಿಡಲಾಗುತ್ತದೆ ಎಂಬುದು. ಏಕೆಂದರೆ ವಿಶ್ವದ ನಂ. 1 ಟಿ20 ಆಟಗಾರ ಅಭಿಷೇಕ್ ಶರ್ಮಾ ಮತ್ತು ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಅವರನ್ನು ಪ್ಲೇಯಿಂಗ್ 11ನಿಂದ ಹೊರಗಿಡುವುದು ಕಷ್ಟ. ನಂ. 3 ರಲ್ಲಿ, ಇಶಾನ್ ಕಿಶನ್ ಅವರಂತಹ ಬ್ಯಾಟ್ಸ್‌ಮನ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಹೀಗಾಗಿ ಸೂರ್ಯವಂಶಿ ಯಾವಾಗ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:42 pm, Fri, 26 June 26

Source link

Leave a Reply

Your email address will not be published. Required fields are marked *