ವೋಟ್​​ ಚೋರಿ ಎಂದ ‘ಕೈ’ಗೆ ಬಿಜೆಪಿ ಗುದ್ದು: ಕಾಂಗ್ರೆಸ್​ ವಿರುದ್ಧವೇ ಮತದಾರರ ಪಟ್ಟಿ ಅಕ್ರಮ ಆರೋಪ! – Kannada News | Voter List Scam in Hungund: BJP Blames Congress for Illegal Additions

ಬಾಗಲಕೋಟೆ, ಡಿಸೆಂಬರ್​ 31: ಬಿಜೆಪಿ ವಿರುದ್ಧ ದೇಶಾದ್ಯಂತ ಕಾಂಗ್ರೆಸ್​​ ವೋಟ್​​ ಚೋರಿ ಅಭಿಯಾನ ನಡೆಸಿತ್ತು. ಕರ್ನಾಟಕದ ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿಯೂ ಮತದಾರರ ಪಟ್ಟಿ ಅಕ್ರಮ ಆರೋಪ ಕೇಳಿಬಂದಿತ್ತು. ಈ ನಡುವೆ ಹುನಗುಂದ ಮತಕ್ಷೇತ್ರದಲ್ಲಿ ಕಾಂಗ್ರೆಸ್​​ ವಿರುದ್ಧವೇ ಮತದಾರರ ಪಟ್ಟಿ ಅಕ್ರಮ ನಡೆದಿದೆ ಎಂದು ಬಿಜೆಪಿ ದೂರಿದೆ. ದಾಖಲೆ ಸಮೇತ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರನ್ನೂ ನೀಡಿದೆ.

ಹುನಗುಂದ ಮತಕ್ಷೇತ್ರದಲ್ಲಿ ಪ್ರತಿ ಬೂತ್​​ನಿಂದ ಅಕ್ರಮವಾಗಿ 18 ವಯೋಮಿತಿ ಒಳಗಿನ 50 ಜನರನ್ನ ಮತದಾರ ಪಟ್ಟಿಗೆ ಸೇರಿಸಲಾಗಿದೆ. ಹೀಗಾಗಿ ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕೆಂದು ಭಾರತೀಯ ಜನತಾ ಪಕ್ಷ ಆಗ್ರಹಿಸಿದೆ. ನವನಗರದ ಬಸ್ ನಿಲ್ದಾಣ ವೃತ್ತದಿಂದ ಜಿಲ್ಲಾಡಳಿತ ಭವನದವರೆಗೆ ಮಾಜಿ ಶಾಸಕರಾದ ವೀರಣ್ಣ ಚರಂತಿಮಠ ಮತ್ತು ದೊಡ್ಡನಗೌಡ ಪಾಟೀಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಲಾಗಿದೆ. ಹುನಗುಂದ ಕಾಂಗ್ರೆಸ್​​ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ದ ಧಿಕ್ಕಾರ ಕೂಗಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆಯಲ್ಲೂ ಮತದಾರರ ಪಟ್ಟಿ ಅಕ್ರಮದ ಸದ್ದು; ವೋಟರ್​​ ಲಿಸ್ಟ್​​ನಲ್ಲಿದೆ ಅಪ್ರಾಪ್ತರು, ಬೇರೆ ಊರಿನವರ ಹೆಸರು!

ಬಿಜೆಪಿ ಆರೋಪಗಳೇನು?

  • 18 ವರ್ಷ ವಯಸ್ಸಿನ ಕಡಿಮೆ ಇರುವ ವಿಧ್ಯಾರ್ಥಿಗಳನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ
  • ಬೇರೆ ಜಿಲ್ಲೆಯ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ
  • ಹುನಗುಂದ ಮತಕ್ಷೇತ್ರದಲ್ಲಿ ಹಲವಾರು ಗ್ರಾಮ ಹಾಗೂ ನಗರಗಳಲ್ಲಿ ಅವರು ವಾಸಿಸುವ ವಾರ್ಡನ್ನು ಬಿಟ್ಟು ಪಕ್ಕದ ವಾರ್ಡಿಗೆ ಕೂಡಾ ಸೇರಿಸುವ ಬಗ್ಗೆ ಸಾರ್ವಜನಿಕ ಚರ್ಚೆ ಆಗುತ್ತಿದೆ
  • ಒಂದೇ ಮತದಾರರ ಹೆಸರು ಎರಡು ವಾರ್ಡ್​​ಗಳಲ್ಲಿ ಕಂಡುಬಂದಿದೆ

ಮತದಾರರ ಪಟ್ಟಿ ಅಕ್ರಮ ಸಂಬಂಧ ಅಧಿಕಾರಿ ಮತ್ತು ಸಿಬ್ಬಂದಿಗಳ ಮೇಲೆ ಕ್ರಮ ಆಗಬೇಕು. ತಪ್ಪಿತಸ್ಥರನ್ನು ಅಮಾನತು ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡಬೇಕು. ಒಂದು ವೇಳೆ ನ್ಯಾಯಯುತ ತನಿಖೆ ಆಗದಿದ್ದಲ್ಲಿ ಉಗ್ರಹೋರಾಟ ನಡೆಸಲಾಗುವುದು ಎಂದು ಮಾಜಿ ಶಾಸಕರು ಎಚ್ಚರಿಸಿದ್ದಾರೆ. ಮುರಡಿ ಗ್ರಾಮ ಪಂಚಾಯತ್​​ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಅಕ್ರಮದ ಬಗ್ಗೆ ಈ ಮೊದಲು ಹುನಗುಂದ ತಾಲೂಕು ಪಂಚಾಯತ್​ ಮಾಜಿ ಸದಸ್ಯರು ಹಾಗೂ ಸ್ಥಳೀಯರು ಕೂಡ ಆರೋಪಿಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *