ವ್ಯಾಪಾರಿಗಳ ವಿರೋಧದ ನಡುವೆಯೂ ಫುಟ್​​ಪಾತ್ ಮಾಡುತ್ತಿರುವುದರ ಬಗ್ಗೆ ಕೃಷ್ಣಭೈರೇಗೌಡ ಖಡಕ್ ಮಾತು – Kannada News | Minister Krishna Byre gowda talks about Safe footpath drive begins across Bengaluru

ಬೆಂಗಳೂರು, (ಜುಲೈ 01): ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಭೈರೇಗೌಡ (krishna byre gowda) ಸೂಚನೆ ಮೇರೆಗೆ ಜಿಬಿಎ ಅಧಿಕಾರಿಗಳು ಅಖಾಡಕ್ಕೆ ಇಳಿದಿದ್ದು, ರಾಜಧಾನಿಯಲ್ಲಿ ಇಂದಿನಿಂದ ಫುಟ್​​​​ಪಾತ್ (footpath)​​​​ ಒತ್ತುವರಿ ತೆರವು ಕಾರ್ಯಾಚರಣೆ ಶುರು ಮಾಡಿದ್ದಾರೆ. ಜಿಬಿಎ ವ್ಯಾಪ್ತಿಯ ಎಲ್ಲಾ 5 ನಗರ ಪಾಲಿಕೆಗಳಲ್ಲಿ ಒತ್ತುವರಿ ತೆರವು ಕಾರ್ಯ ನಡೀತಿದೆ. ಫುಟ್​ಪಾತ್​ಗಳನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡ್ತಿರುವವರು, ಹೋಟೆಲ್, ಕೆಫೆ, ಸಣ್ಣ ಪುಟ್ಟ ಅಂಗಡಿಗಳಿಗೆ ಅಧಿಕಾರಿಗಳು ಚುರುಕು ಮುಟ್ಟಿಸಿದ್ದಾರೆ. ಇನ್ನು ಕೆಲವವೆಡೆ ಹೈಡ್ರಾಮಾಗಳೇ ನಡೆದಿವೆ. ಫುಟ್​​ಪಾತ್ ತೆರವು ಮಾಡಲ್ಲ.ನೀವು ತೆಗೆದರೆ ಮತ್ತೆ ಇಲ್ಲೇ ವ್ಯಾಪಾರ ಮಾಡುತ್ತೇವೆ. ಈ ಸ್ಥಳ ಬಿಟ್ಟು ಹೋಗಲ್ಲ ಎಂದು ಬೀದಿ ವ್ಯಾಪಾರಿಗಳು ಹಠಕ್ಕೆ ಬಿದ್ದಿದ್ದಾರೆ.

ಇನ್ನು ಈ ಫುಟ್​​​ಪಾತ್ ಒತ್ತುವರಿ ತೆರವು ಬಗ್ಗೆ ವಿಕಾಸಸೌಧದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಚಿವ ಕೃ್ಣಭೈರೇಗೌಡ, ‘ಸುಪ್ರೀಂ ಕೋರ್ಟ್’ ಆದೇಶದ ಮೇರೆಗೆ ತೆರವು ಕಾರ್ಯ ಮಾಡುತ್ತಿದ್ದೇವೆ. ಇದರಿಂದ ನಾಗರಿಕರಿಗೆ ಸಮಸ್ಯೆ ಆಗುತ್ತಿದೆ. ಹೀಗಾಗಿ ಫುಟ್​ಪಾತ್ ತೆರವು ಮಾಡ್ತಿದ್ದೇವೆ. ಕೇವಲ ಶೇ.15ರಷ್ಟು ಫುಟ್​ಪಾತ್ ತೆರವು ಮಾಡುತ್ತಿದ್ದೇವೆ. ಬೆಂಗಳೂರು ನಗರದಲ್ಲಿ 15 ಸಾವಿರ ಕಿ.ಮೀ. ಫುಟ್​ಪಾತ್ ಇದೆ. ಆದ್ರೆ, ನಾವು 2000 ಕಿ.ಮೀ. ಮಾತ್ರ ತೆರವುಗೊಳಿಸಿ ಅಂತಾ ಹೇಳಿದ್ದೇವೆ. ಹೆಚ್ಚು ಜನರು ಓಡಾಡುವ ಕಡೆ ಮಾತ್ರ ತೆರವು ಮಾಡುತ್ತಿದ್ದೇವೆ. ಫುಟ್​ಪಾತ್ ಒತ್ತುವರಿಯಿಂದಾಗಿ ಅಪಘಾತ ಸಂಭವಿಸುತ್ತಿದ್ದು, ಫುಟ್​ಪಾತ್ ತೆರವುಗೊಳಿಸುವಂತೆ ಜನರು ಕೇಳುತ್ತಿದ್ದಾರೆ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *