ಶಾಂತಿ ಒಪ್ಪಂದದ ಸನಿಹದಲ್ಲಿ ಇರಾನ್-ಅಮೆರಿಕ: ಇರಾನ್ ನಾಯಕ ಅಯತೊಲ್ಲಾ ಖಮೇನಿ ಅಂತ್ಯಕ್ರಿಯೆಗೆ ದಿನಾಂಕ ಪ್ರಕಟ – Kannada News | Iran US Peace Deal Nears: Khamenei Funeral Dates Set, Hormuz Strait to Open

ಟೆಹ್ರಾನ್, ಜೂನ್ 14: ಮಧ್ಯಪ್ರಾಚ್ಯದಲ್ಲಿ ದೀರ್ಘಕಾಲದ ಉದ್ವಿಗ್ನತೆಗೆ ಕಾರಣವಾಗಿದ್ದ ಸಂಘಷಘ ಕೊನೆಗೊಂಡು ಶಾಶ್ವತ ಶಾಂತಿ ನೆಲೆಸಯವ ಅತ್ಯಂತ ಆಶಾದಾಯಕ ಬೆಳವಣಿಗೆಗಗಳು ಜಾಗತಿಕ ವೇದಿಕೆಯಲ್ಲಿ ನಡೆಯುತ್ತಿವೆ. ಇರಾನ್​ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ತಂದೆ ಅಯತೊಲ್ಲಾ ಅಲಿ ಖಮೇನಿ(Ayatollah Ali Khamenei) ಅವರ ಅಂತ್ಯಕ್ರಿಯೆಯ ಅಧಿಕೃತ ದಿನಾಂಕಗಳನ್ನು ಇರಾನ್ ಪ್ರಕಟಿಸಿದ್ದು. ಮತ್ತೊಂದೆಡೆ ಅಮೆರಿಕದೊಂದಿಗಿನ ಐತಿಹಾಸಿಕ ಶಾಂತಿ ಒಪ್ಪಂದವು ಅಂತಿಮ ಘಟ್ಟಕ್ಕೆ ತಲುಪಿದೆ.

ಅಲಿ ಖಮೇನಿ ಅಂತ್ಯಕ್ರಿಯೆ ವಿಳಂಬಕ್ಕೆ ಕಾರಣವೇನು?
ಫೆಬ್ರವರಿ 28ರಂದು 86 ವರ್ಷದ ಅಯತೊಲ್ಲಾ ಅಲಿ ಖಮೇನಿ ನಿಧನರಾಗಿದ್ದರು, ಆರು ದಿನಗಳ ಅಂತ್ಯಕ್ರಿಯೆ ಕಾರ್ಯಕ್ರಮ ಜಯಲೈನಲ್ಲಿ ನಡೆಯಲಿವೆ ಎಂದು ಇರಾನ್ ಫಾರ್ಸ್​ ಸುದ್ದಿ ಸಂಸ್ಥೆ ತಿಳಿಸಿದೆ.
ಅಂತ್ಯಕ್ರಿಯೆಯನ್ನು ಇಸ್ಲಾಮಿಕ್ ಕ್ಯಾಲೆಂಡರ್‌ನ ಮೊದಲ ತಿಂಗಳಾದ ಮೊಹರಂ ಆರಂಭದಲ್ಲಿ ನಡೆಸಲು ಮೊದಲು ನಿರ್ಧರಿಸಲಾಗಿತ್ತು. ಆದರೆ, ಪ್ರವಾದಿ ಮೊಹಮ್ಮದರ ಮೊಮ್ಮಗ ಇಮಾಮ್ ಹುಸೇನ್‌ಗಾಗಿ ಕರ್ಬಲಾ ಕದನದ ಹಿನ್ನೆಲೆಯಲ್ಲಿ ದೇಶದಾದ್ಯಂತ ಸಾರ್ವಜನಿಕರು ನಡೆಸುವ ವಾರ್ಷಿಕ ಶೋಕಾಚರಣೆಗೆ ಮೊದಲ ಆದ್ಯತೆ ನೀಡಲು ಇರಾನ್ ಸರ್ಕಾರವು ಈ ನಿರ್ಧಾರವನ್ನು ಜುಲೈಗೆ ಮುಂದೂಡಿದೆ.

ಜುಲೈ 4 ಮತ್ತು 5, ಟೆಹ್ರಾನ್‌ನ ಇಮಾಮ್ ಖೊಮೇನಿ ಪ್ರಾರ್ಥನಾ ಮೈದಾನದಲ್ಲಿ ಸಾರ್ವಜನಿಕ ಬೀಳ್ಕೊಡುಗೆ

ಜುಲೈ 6: ಮುಖ್ಯ ಶ್ರದ್ಧಾಂಜಲಿ ಮೆರವಣಿಗೆ

ಜುಲೈ 7 ಮತ್ತು 9: ಕ್ರಮವಾಗಿ ಕೋಮ್ ಮತ್ತು ಅವರ ತವರು ಮಶಾದ್ ನಗರಗಳಲ್ಲಿ ಅಂತಿಮ ವಿಧಿವಿಧಾನಗಳು ನೆರವೇರಲಿವೆ.

ಮತ್ತಷ್ಟು ಓದಿ: ಇರಾನ್ ಸರ್ವೋಚ್ಚ ನಾಯಕನೇ ನಮ್ಮ ಟಾರ್ಗೆಟ್ ಎಂದ ಇಸ್ರೇಲ್; ಯಾರು ಈ ಖಮೇನಿ?

ಇತಿಹಾಸ ಸೃಷ್ಟಿಸಲಿರುವ ಶಾಂತಿ ಒಪ್ಪಂದ ಮತ್ತು ಮುಕ್ತ ಜಲಮಾರ್ಗ
ಮೂರು ತಿಂಗಳಿಗೂ ಹೆಚ್ಚು ಕಾಲ ನಡೆದ ಅಮೆರಿಕ-ಇರಾನ್ ನಡುವಿನ ಸಂಘರ್ಷವು ಈಗ ಸಂಪೂರ್ಣವಾಗಿ ಮುಕ್ತಾಯಗೊಳ್ಳುವ ಹಂತಕ್ಕೆ ಬಂದಿದೆ. ಉಭಯ ದೇಶಗಳು ಜಾಗತಿಕ ಇಂಧನ ಮತ್ತು ಆರ್ಥಿಕ ಸ್ಥಿರತೆಗೆ ಪೂರಕವಾದ ಒಪ್ಪಂದಕ್ಕೆ ಸಹಿ ಹಾಕಲು ದಿನಗಣನೆ ಆರಂಭಿಸಿವೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಒಪ್ಪಂದವು ಅತ್ಯಂತ ಸನಿಹದಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಐತಿಹಾಸಿಕ ಒಪ್ಪಂದಕ್ಕೆ ಸಹಿ ಬೀಳುತ್ತಿದ್ದಂತೆಯೇ, ಜಾಗತಿಕ ತೈಲ ಸಾಗಣೆಯ ಪ್ರಮುಖ ನರನಾಡಿಯಾಗಿರುವ ‘ಹಾರ್ಮುಜ್ ಜಲಸಂಧಿ’ಯು ಜಗತ್ತಿನ ಎಲ್ಲಾ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಸಂಪೂರ್ಣ ಮುಕ್ತವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಜಾಗತಿಕ ಮಧ್ಯಸ್ಥಿಕೆ ಮತ್ತು ಡಿಜಿಟಲ್ ಮುನ್ನಡೆ
ಈ ಐತಿಹಾಸಿಕ ಒಪ್ಪಂದವನ್ನು ಯಶಸ್ವಿಗೊಳಿಸುವಲ್ಲಿ ನೆರೆಯ ರಾಷ್ಟ್ರಗಳು ಮಹತ್ವದ ರಾಜತಾಂತ್ರಿಕ ಪಾತ್ರ ವಹಿಸಿವೆ. ಪ್ರಮುಖ ಸಂಧಾನಕಾರ ದೇಶಗಳಲ್ಲಿ ಒಂದಾದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ತಮ್ಮ ದೇಶವು ಎಲೆಕ್ಟ್ರಾನಿಕ್ ಸಹಿಗೆ (Electronic Signature) ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿರುವುದಾಗಿ ಪ್ರಕಟಿಸಿದ್ದಾರೆ. ಮುಂದಿನ 24 ಗಂಟೆಗಳ ಒಳಗೆ ಈ ಒಪ್ಪಂದವು ಅಧಿಕೃತಗೊಳ್ಳುವ ಸಾಧ್ಯತೆಗಳಿದ್ದು, ಇದು ಇಡೀ ಮಧ್ಯಪ್ರಾಚ್ಯದಲ್ಲಿ ಅಭಿವೃದ್ಧಿ ಮತ್ತು ದೀರ್ಘಕಾಲೀನ ಶಾಂತಿಗೆ ಬಲವಾದ ಅಡಿಪಾಯವನ್ನು ನಿರ್ಮಿಸಲಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *