ಶಾರುಖ್​-ದೀಪಿಕಾ ‘ಕಿಂಗ್’ ಚಿತ್ರಕ್ಕೆ ಲೀಕ್ ಕಾಟ; ಪ್ರಮುಖ ದೃಶ್ಯವೇ ಸೋರಿಕೆ – Kannada News | Shah Rukh Khan, Deepika Padukone ‘King’ Movie Set Photos Leaked! Pregnant Deepika Shines

ಚಿತ್ರರಂಗಕ್ಕೆ ಅದರಲ್ಲೂ ಬಿಗ್ ಬಜೆಟ್ ಸಿನಿಮಾಗಳಿಗೆ ಸೆಟ್​ ಫೋಟೋ ಅಋವ ವಿಡಿಯೋ ಲೀಕ್ ಅನ್ನೋದು ಸರ್ವೇ ಸಾಮಾನ್ಯ ಎಂಬಂತಾಗಿದೆ. ಇದು ಚಿತ್ರತಂಡದ ಮೇಲಿನ ನಿರೀಕ್ಷೆಯನ್ನು ಹಾಳು ಮಾಡುತ್ತದೆ. ಈಗ ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಕಿಂಗ್’ ಚಿತ್ರೀಕರಣದ ಫೋಟೋಗಳು ಲೀಕ್ ಆಗಿವೆ. ಈ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಸೆಟ್‌ನಿಂದ ಹೊರಬಂದಿರುವ ಫೋಟೋ ಹಾಗೂ ವೀಡಿಯೋಗಳಲ್ಲಿ ಈ ಜೋಡಿಯ ಕೆಮಿಸ್ಟ್ರಿ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಇತ್ತೀಚೆಗಷ್ಟೇ ಪತಿ ರಣವೀರ್ ಸಿಂಗ್ ಅವರೊಂದಿಗೆ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದನ್ನು ಖಚಿತಪಡಿಸಿದ್ದ ದೀಪಿಕಾ, ಗರ್ಭಿಣಿಯಾಗಿದ್ದರೂ ತಮ್ಮ ವೃತ್ತಿಜೀವನದ ಬದ್ಧತೆಯಲ್ಲಿ ಹಿಂದೆ ಬಿದ್ದಿಲ್ಲ. ಲೀಕ್ ಆದ ಫೋಟೋಗಳಲ್ಲಿ ದೀಪಿಕಾ ಬೋಲ್ಡ್ ಉಡುಪಿನಲ್ಲಿ ಸುಂದರವಾಗಿ ಕಾಣಿಸುತ್ತಿದ್ದಾರೆ. ಶಾರುಖ್ ಅವರೊಂದಿಗೆ ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಆ್ಯಕ್ಷನ್ ದೃಶ್ಯಗಳ ಶೂಟ​​್​ಗೆ ಬಾಡಿ ಡಬಲ್ ಬಳಸಲಾಗುತ್ತಿದೆ.

Deepika Padukone and SRK from the sets of KING in Cape Town, South Africa
by
u/GiveMeSomeSunshine3 in
BollyBlindsNGossip

ಸಿದ್ದಾರ್ಥ್ ಆನಂದ್ ನಿರ್ದೇಶನದ ಈ ಚಿತ್ರವು ಶಾರುಖ್ ಖಾನ್ ಮತ್ತು ಅವರ ಮಗಳು ಸುಹಾನಾ ಖಾನ್ ಒಟ್ಟಾಗಿ ನಟಿಸುತ್ತಿರುವ ಮೊದಲ ಸಿನಿಮಾ. ಈ ಕಾರಣದಿಂದಲೂ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಚಿತ್ರದಲ್ಲಿ ಶಾರುಖ್ ಭೂಗತ ಲೋಕದ ಡಾನ್ ಆಗಿ ಕಾಣಿಸಿಕೊಂಡರೆ, ಸುಹಾನಾ ಅವರ ಶಿಷ್ಯೆಯ ಪಾತ್ರ ಮಾಡುತ್ತಿದ್ದಾರೆ ಎಂದು ವರದಿ ಆಗಿದೆ. ಈ ಚಿತ್ರದಲ್ಲಿ ಅಭಿಷೇಕ್ ಬಚ್ಚನ್, ಅನಿಲ್ ಕಪೂರ್ ಮತ್ತು ರಾಣಿ ಮುಖರ್ಜಿ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.

ಇದನ್ನೂ ಓದಿ: ‘ಧುರಂಧರ್ 2’ ಬಳಿಕ ರಣವೀರ್ ಸಿಂಗ್ ಮುಂದಿನ ಸಿನಿಮಾ ಇದೇ ನೋಡಿ

ದಕ್ಷಿಣ ಆಫ್ರಿಕಾದ ಚಿತ್ರೀಕರಣ ಮುಗಿಸಿ ಭಾರತಕ್ಕೆ ಮರಳಿದ ನಂತರ ದೀಪಿಕಾ ಪಡುಕೋಣೆ ಅವರು ಅಟ್ಲೀ ನಿರ್ದೇಶನದ ‘ರಾಕಾ’ ಚಿತ್ರದ ಕೆಲಸದಲ್ಲಿ ನಟಿಸಲಿದ್ದಾರೆ. ಸದ್ಯಕ್ಕೆ ‘ಕಿಂಗ್’ ಸೆಟ್‌ನ ಲೀಕ್ ಫೋಟೋಗಳೇ ಬಾಲಿವುಡ್ ಅಂಗಳದ ಹಾಟ್ ಟಾಪಿಕ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *