ಶಾಲಾ ಮಕ್ಕಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ; ಸ್ಪರ್ಧೆಯಲ್ಲಿ ಭಾಗವಹಿಸಲು ಹೀಗೆ ಮಾಡಿ – Kannada News | SCIFF 2026: Apply for School Cinema International Children’s Film Festival

ಶಾಲಾ ಮಕ್ಕಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ; ಸ್ಪರ್ಧೆಯಲ್ಲಿ ಭಾಗವಹಿಸಲು ಹೀಗೆ ಮಾಡಿ

ವಿಶ್ವದ ಅತಿ ದೊಡ್ಡ ಮಕ್ಕಳ ಚಲನಚಿತ್ರೋತ್ಸವಗಳಲ್ಲಿ ಒಂದಾದ ‘ಸ್ಕೂಲ್ ಸಿನಿಮಾ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್’ (SCIFF) ತನ್ನ 10ನೇ ಆವೃತ್ತಿಯ ದಿನಾಂಕಗಳನ್ನು ಪ್ರಕಟಿಸಿದೆ. ಈ ಸಾಲಿನ ಚಲನಚಿತ್ರೋತ್ಸವವು 2026ರ ನವೆಂಬರ್ 14ರಿಂದ 30ರವರೆಗೆ ಭಾರತದಾದ್ಯಂತ ವಿವಿಧ ಶಾಲೆಗಳಲ್ಲಿ ನಡೆಯಲಿದೆ. ಈ ಉತ್ಸವದಲ್ಲಿ ಪ್ರದರ್ಶಿಸಲು ಸಿನಿಮಾಗಳನ್ನು ಕಳುಹಿಸುವಂತೆ ಜಾಗತಿಕ ಮಟ್ಟದ ಚಲನಚಿತ್ರ ನಿರ್ಮಾಪಕರಿಗೆ ಮುಕ್ತ ಆಹ್ವಾನ ನೀಡಲಾಗಿದೆ.

‘ಸ್ಕೂಲ್ ಸಿನಿಮಾ’ ಸಂಸ್ಥೆಯು ಯಶಸ್ವಿಯಾಗಿ 15 ವರ್ಷಗಳನ್ನು ಪೂರೈಸಿದೆ. ಪ್ರಸ್ತುತ ಈ ಕಾರ್ಯಕ್ರಮವು ಭಾರತದ 28 ರಾಜ್ಯಗಳ 350 ನಗರಗಳಲ್ಲಿದೆ. ಸುಮಾರು 905 ಶಾಲೆಗಳ 6,70,796ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಇದು ತಲುಪಿದೆ. ಮಕ್ಕಳಲ್ಲಿ ಜೀವನ ಕೌಶಲಗಳು, ಸಾಮಾಜಿಕ-ಭಾವನಾತ್ಮಕ ಕಲಿಕೆ ಮತ್ತು ಸೃಜನಶೀಲತೆಯನ್ನು ಬೆಳೆಸಲು ಸಿನಿಮಾ ಪ್ರಬಲ ಮಾಧ್ಯಮವಾಗಿದೆ ಎಂಬುದನ್ನು ಈ ಸಂಸ್ಥೆ ಸಾಬೀತುಪಡಿಸಿದೆ.

ಕರ್ನಾಟಕದಲ್ಲಿ ‘ಸ್ಕೂಲ್ ಸಿನಿಮಾ’ ಪ್ರಭಾವ

ನಮ್ಮ ಕರ್ನಾಟಕ ರಾಜ್ಯದಲ್ಲೂ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ರಾಜ್ಯದ 36 ನಗರಗಳ 130 ಶಾಲೆಗಳಲ್ಲಿ ಇದನ್ನು ಜಾರಿಗೊಳಿಸಲಾಗಿದೆ. ಇದರ ಮೂಲಕ 1,00,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉತ್ತಮ ಸಿನೆಮಾ ಕಲಿಕೆ ಸಿಗುತ್ತಿದೆ. ಕಳೆದ ಆವೃತ್ತಿಗಳಲ್ಲಿ ಈ ಚಲನಚಿತ್ರೋತ್ಸವವು ದೇಶದ 41,000 ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ತಲುಪಿತ್ತು. ಒಟ್ಟು 5 ದಶಲಕ್ಷಕ್ಕೂ ಹೆಚ್ಚು ಮಕ್ಕಳು ಇದರ ಪ್ರಯೋಜನ ಪಡೆದಿದ್ದಾರೆ.

ಚಲನಚಿತ್ರ ಪ್ರವೇಶಕ್ಕೆ ಮಾರ್ಗಸೂಚಿಗಳು

  1. ಅರ್ಹತೆ: ಲೈವ್ ಆಕ್ಷನ್, ಅನಿಮೇಷನ್ ಮತ್ತು ಡಾಕ್ಯುಮೆಂಟರಿ ಸಿನಿಮಾಗಳನ್ನು ಕಳುಹಿಸಬಹುದು. ಇವು ಶಾರ್ಟ್ ಫಿಲ್ಮ್ ಅಥವಾ ಫೀಚರ್ ಫಿಲ್ಮ್ ರೂಪದಲ್ಲಿ ಇರಬಹುದು.
  2. ಷರತ್ತುಗಳು: ಸಿನಿಮಾಗಳು 2022ರ ಜನವರಿ 1ರ ನಂತರ ನಿರ್ಮಾಣವಾಗಿರಬೇಕು. ಎಲ್ಲಾ ಭಾಷೆಯ ಸಿನಿಮಾಗಳಿಗೂ ಕಡ್ಡಾಯವಾಗಿ ಇಂಗ್ಲಿಷ್ ಸಬ್‌ಟೈಟಲ್ ಇರಬೇಕು.
  3. ವಯೋಮಿತಿ: ಈ ಸಿನಿಮಾಗಳು 5ರಿಂದ 16 ವರ್ಷದ ಒಳಗಿನ ಶಾಲಾ ಮಕ್ಕಳಿಗಾಗಿ ಇರಬೇಕು.
  4. ಕೊನೆಯ ದಿನಾಂಕ: ಸಿನಿಮಾಗಳನ್ನು ಕಳುಹಿಸಲು 2026ರ ಆಗಸ್ಟ್ 15 ಕೊನೆಯ ದಿನವಾಗಿದೆ. ಆಸಕ್ತರು https://filmfreeway.com/SchoolCinemaInternationalFilmFestival ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು.

ಅತ್ಯುತ್ತಮ ಚಿತ್ರಗಳಿಗೆ ಪ್ರಶಸ್ತಿ ಗೌರವ

ಈ ಚಲನಚಿತ್ರೋತ್ಸವದಲ್ಲಿ ಶ್ರೇಷ್ಠ ಸಿನಿಮಾಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ. ಬೆಸ್ಟ್ ಲೈವ್ ಆಕ್ಷನ್, ಬೆಸ್ಟ್ ಅನಿಮೇಷನ್ ಮತ್ತು ಬೆಸ್ಟ್ ಡಾಕ್ಯುಮೆಂಟರಿ ವಿಭಾಗಗಳಲ್ಲಿ ಶಾರ್ಟ್ ಹಾಗೂ ಫೀಚರ್ ಫಿಲ್ಮ್‌ಗಳಿಗೆ ಪ್ರತ್ಯೇಕ ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *